KSCA: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್

ಕೆಎಸ್​​ಸಿಎ ಅರ್ಜಿದಾರರಿಗೆ ಪತ್ರ ಬರೆದು, ನಿಮಗೆ 58 ವರ್ಷ ತುಂಬಿರುವುದರಿಂದ ನಿವೃತ್ತರಾಗುವಂತೆ ಸೂಚನೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಅರ್ಜಿದಾರ, ನನ್ನ ನಿವೃತ್ತಿಯ ಆದೇಶ ಪತ್ರ ಮರುಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದ್ದರು.

KSCA: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್
ಕರ್ನಾಟಕ ಉಚ್ಚ ನ್ಯಾಯಾಲಯ
Follow us
TV9 Web
| Updated By: Vinay Bhat

Updated on: Nov 11, 2022 | 11:22 AM

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (KSCA) ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ರಾಜ್ಯದಲ್ಲಿ ನಿವೃತ್ತಿ ವಯಸ್ಸು 60 ಇದ್ದರೂ 58 ವರ್ಷಕ್ಕೆ ನೌಕರರೊಬ್ಬರನ್ನು ನಿವೃತ್ತಿಗೊಳಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ (High Court) ಆದೇಶಿಸಿದೆ. ಕೆಎಸ್‌ಸಿಎ ನಿವೃತ್ತ ನೌಕರ ಜೆ. ರಾಜಕುಮಾರ್ ಎಂಬುವವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಜಿ. ಪಂಡಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಪ್ರತಿವಾದಿಗಳಾದ ಕಾರ್ಮಿಕ ಇಲಾಖೆ ಹಾಗೂ ಕೆಎಸ್​​ಸಿಎಗೆ ನೋಟಿಸ್ (Notice) ಜಾರಿ ಮಾಡಿ ವಿಚಾರಣೆ ಮುಂದೂಡಿದೆ.

ಕೆಎಸ್​​ಸಿಎ 2022ರ ಮಾರ್ಚ್ 13 ರಂದು ಅರ್ಜಿದಾರರಿಗೆ ಪತ್ರ ಬರೆದು, ನಿಮಗೆ 58 ವರ್ಷ ತುಂಬಿರುವುದರಿಂದ ನಿವೃತ್ತರಾಗುವಂತೆ ಸೂಚನೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಅರ್ಜಿದಾರ, ನನ್ನ ನಿವೃತ್ತಿಯ ಆದೇಶ ಪತ್ರ ಮರುಪರಿಶೀಲನೆ ಮಾಡಬೇಕು ಎಂದು ಕೋರಿ 2022ರ ಜುಲೈ 11ರಂದು ಕೆಎಸ್‌ಸಿಎಗೆ ಪತ್ರ ಬರೆದು ಮನವಿ ಮಾಡಿದ್ದರು.

ಆದರೆ, ಕೆಎಸ್​​ಸಿಎ ಜೆ. ರಾಜಕುಮಾರ್ ಅವರ ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ‘ಖಾಸಗಿ ವಲಯದಲ್ಲಿ ನಿವೃತ್ತಿ ವಯಸ್ಸನ್ನು 58ರಿಂದ 60 ವರ್ಷಕ್ಕೆ ಹೆಚ್ಚಿಸುವ ಬಗ್ಗೆ ಕರ್ನಾಟಕ ಕೈಗಾರಿಕಾ ಸ್ಥಾಪನೆ ನಿಯಮಗಳು-1961ರ ವೇಳಾಪಟ್ಟಿ-1 ಅನ್ನು ತಿದ್ದುಪಡಿ ಮಾಡಿ ರಾಜ್ಯ ಸರ್ಕಾರವು 2017ರ ಮಾರ್ಚ್ 27ರಂದು ಅಧಿಸೂಚನೆ ಹೊರಡಿಸಿದೆ. ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ನಿವೃತ್ತಿಯ ವಯಸ್ಸು 60 ವರ್ಷಗಳಾಗಿರಬೇಕು. ಆದರೆ, ಕೆಎಸ್​​ಸಿಎ 58 ವರ್ಷಕ್ಕೆ ನಿವೃತ್ತರಾಗುವಂತೆ ಸೂಚಿಸಿದೆ. ಹೀಗಾಗಿ ಕೆಎಸ್​​ಸಿಎ ಸೂಚನೆ ರದ್ದು ಪಡಿಸಬೇಕೆಂದು ಜೆ. ರಾಜಕುಮಾರ್ ಕೋರಿದ್ದರು.

ಇದನ್ನೂ ಓದಿ
Image
IND vs ENG: ಭಾರತ- ಇಂಗ್ಲೆಂಡ್ ಸೆಮಿ ಫೈನಲ್ ಪಂದ್ಯದ ರೋಚಕ ಫೋಟೋಗಳು ನೋಡಿ
Image
Rohit Sharma: ಮೈದಾನದಲ್ಲೇ ಮೊಹಮ್ಮದ್ ಶಮಿಗೆ ಸಿಟ್ಟಿನಲ್ಲಿ ಬೈದ ರೋಹಿತ್ ಶರ್ಮಾ: ಯಾಕೆ?, ವಿಡಿಯೋ ವೈರಲ್
Image
Team India: ಐಸಿಸಿ ಟಿ20 ವಿಶ್ವಕಪ್​ 2022 ರಲ್ಲಿ ಭಾರತ ಮಾಡಿದ 5 ಮಹಾ ತಪ್ಪುಗಳಿವು: ಇದಕ್ಕೆ ಉತ್ತರವೆಲ್ಲಿದೆ?
Image
ನಾಯಕನೂ ಸೇರಿ ಟಿ20 ಕ್ರಿಕೆಟ್​ಗೆ ವಿದಾಯ ಹೇಳಬಹುದಾದ ಟೀಂ ಇಂಡಿಯಾ ಕ್ರಿಕೆಟಿಗರಿವರು..!

ಕೆಎಸ್‌ಸಿಎ ನೂತನ ಅಧ್ಯಕ್ಷರಾಗಿ ರಘುರಾಮ್ ಭಟ್ ಆಯ್ಕೆ:

ಕರ್ನಾಟಕ ಕ್ರಿಕೆಟ್‌ ಸಂಸ್ಥೆಯ ಚುನಾವಣೆ ಅವಿರೋಧವಾಗಿ ಕೊನೆಗೊಂಡಿದೆ. ನೂತನ ಅಧ್ಯಕ್ಷರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಮಾಜಿ ಕ್ರಿಕೆಟಿಗ ಎ. ರಘುರಾಮ್‌ ಭಟ್‌ ಆಯ್ಕೆಯಾಗಿದ್ದಾರೆ. ಎಡಗೈ ಸ್ಪಿನ್ನರ್‌ ಆಗಿದ್ದ ರಘುರಾಮ್‌ ಭಟ್‌ ಭಾರತದ ಪರ 2 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. 4 ವಿಕೆಟ್‌ ಪಡೆದಿದ್ದಾರೆ. 1980 ರಿಂದ 1993 ರವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 82 ಪಂದ್ಯಗಳನ್ನಾಡಿ 374 ವಿಕೆಟ್‌ ಕೆಡವಿದ್ದಾರೆ. 64 ವರ್ಷದ ರಘುರಾಮ್ ಈಗ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ರೋಜರ್ ಬಿನ್ನಿ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಈಚೆಗೆ ಆಯ್ಕೆಯಾಗಿದ್ದರು.