Team India: ಐಸಿಸಿ ಟಿ20 ವಿಶ್ವಕಪ್​ 2022 ರಲ್ಲಿ ಭಾರತ ಮಾಡಿದ 5 ಮಹಾ ತಪ್ಪುಗಳಿವು: ಇದಕ್ಕೆ ಉತ್ತರವೆಲ್ಲಿದೆ?

India vs England, T20 World Cup: ಐಸಿಸಿ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಮಾಡಿದ ಅನೇಕ ಪ್ರಯೋಗವನ್ನು ಭಾರತ ವಿಶ್ವಕಪ್ ಮಧ್ಯೆ ಮಾಡಲೇಯಿಲ್ಲ. ಟೀಮ್ ಇಂಡಿಯಾ ಮಾಡಿದ ಪ್ರಮುಖ ತಪ್ಪುಗಳಿಂದಲೇ ಇಂದು ಟೂರ್ನಿಯಿಂದ ಹೊರಬಿದ್ದಿದೆ. ಇಲ್ಲಿದೆ ನೋಡಿ ಐಸಿಸಿ ಟಿ20 ವಿಶ್ವಕಪ್​ನಲ್ಲಿ ಭಾರತ ಮಾಡಿದ ಮುಖ್ಯ 5 ಮಹಾ ತಪ್ಪುಗಳು.

Team India: ಐಸಿಸಿ ಟಿ20 ವಿಶ್ವಕಪ್​ 2022 ರಲ್ಲಿ ಭಾರತ ಮಾಡಿದ 5 ಮಹಾ ತಪ್ಪುಗಳಿವು: ಇದಕ್ಕೆ ಉತ್ತರವೆಲ್ಲಿದೆ?
Rohit Kohli and Dravid
Follow us
TV9 Web
| Updated By: Vinay Bhat

Updated on:Nov 11, 2022 | 8:18 AM

ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಾಣುವ ಮೂಲಕ ಭಾರತ ಕ್ರಿಕೆಟ್ ತಂಡ (India vs England) ಐಸಿಸಿ ಟಿ20 ವಿಶ್ವಕಪ್ 2022 ರಿಂದ (T20 World Cup) ಹೊರಬಿದ್ದಾಗಿದೆ. ಕಳೆದ 12 ತಿಂಗಳುಗಳಿಂದ ಅನೇಕ ರೀತಿಯಲ್ಲಿ ತಯಾರಾಗಿ ಮಾಡಿದ ಪ್ರಯೋಗಗಳು ಸೆಮೀಸ್ ಹಂತಕ್ಕೇರುವವರೆಗೆ ಮಾತ್ರ ಸಾಕಾಯಿತು. ಈ ಮೂಲಕ ಕಳೆದ ಒಂಬತ್ತು ವರ್ಷಗಳಲ್ಲಿ ಏಳನೇ ಬಾರಿ ಟೀಮ್ ಇಂಡಿಯಾ (Team India) ಐಸಿಸಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಲು ವಿಫಲವಾಗಿದೆ. ಐಸಿಸಿ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಮಾಡಿದ ಅನೇಕ ಪ್ರಯೋಗವನ್ನು ಭಾರತ ವಿಶ್ವಕಪ್ ಮಧ್ಯೆ ಮಾಡಲೇಯಿಲ್ಲ. ವೈಫಲ್ಯ ಅನುಭವಿಸುತ್ತಿದ್ದರೂ ಅದೇ ಆಟಗಾರರನ್ನು ಕಣಕ್ಕಿಳಿಸಿದರು. ಇನ್ನೂ ಕೆಲ ಅನುಭವಿಗಳಿಗೆ ಅವಕಾಶವೇ ಸಿಗಲಿಲ್ಲ. ಹೀಗೆ ಟೀಮ್ ಇಂಡಿಯಾ ಮಾಡಿದ ಪ್ರಮುಖ ತಪ್ಪುಗಳಿಂದಲೇ ಇಂದು ಟೂರ್ನಿಯಿಂದ ಹೊರಬಿದ್ದಿದೆ. ಇಲ್ಲಿದೆ ನೋಡಿ ಐಸಿಸಿ ಟಿ20 ವಿಶ್ವಕಪ್​ನಲ್ಲಿ ಭಾರತ ಮಾಡಿದ ಮುಖ್ಯ 5 ಮಹಾ ತಪ್ಪುಗಳು.

ಯಜ್ವೇಂದ್ರ ಚಹಲ್​ಗೆ ಅವಕಾಶವೇ ಇಲ್ಲ: ಕಳೆದ ವರ್ಷದ ಟಿ20 ವಿಶ್ವಕಪ್​ಗೆ ಚಹಲ್ ಅವರನ್ನು ಆಯ್ಕೆ ಮಾಡಿರಲಿಲ್ಲ. ಇದು ದೊಡ್ಡ ಮಟ್ಟದಲ್ಲಿ ಹೊಡೆತ ಬಿದ್ದಿತ್ತು. ಆದರೆ, ಈ ಬಾರಿ ತಂಡಕ್ಕೆ ಆಯ್ಕೆ ಮಾಡಿದ್ದಷ್ಟೆ ಬಿಟ್ಟರೆ ಒಂದೂ ಪಂದ್ಯದಲ್ಲಿ ಆಡಿಸಲಿಲ್ಲ. ಇಡೀ ಟೂರ್ನಿಯಲ್ಲಿ ಆರ್. ಅಶ್ವಿನ್ ಅವರನ್ನೇ ಕಣಕ್ಕಿಳಿಸಿದರು. ಭಾರತದ ನಂಬರ್ 1 ವ್ರಿಸ್ಟ್ ಸ್ಪಿನ್ನರ್ ಆಗಿರುವ ಚಹಲ್ ಅವರನ್ನು ಈ ಮಟ್ಟಿಗೆ ಕಡೆಗಣಿಸಿದ್ದು ಯಾಕೆ ಎಂಬ ಪ್ರಶ್ನೆಗೆ ಮ್ಯಾನೇಜ್ಮೆಂಟ್ ಉತ್ತರಿಸಬೇಕಿದೆ. ಇದು ಭಾರತಕ್ಕೆ ದೊಡ್ಡ ಹೊಡೆತವಂತು ಹೌದು.

ಪವರ್ ಪ್ಲೇನಲ್ಲೇ ವೈಫಲ್ಯ: ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಭಾರತದ ಓಪನರ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು. ಇಡೀ ಟೂರ್ನಿಯಲ್ಲಿ ರೋಹಿತ್-ರಾಹುಲ್ ಕಡೆಯಿಂದ ಒಂದುಕೂಡ ಅರ್ಧಶತಕದ ಜೊತೆಯಾಟ ಬಂದಿಲ್ಲ. ಅಲ್ಲದೆ ಪವರ್ ಪ್ಲೇನಲ್ಲಿ ಇಬ್ಬರ ಪೈಕಿ ಒಬ್ಬರು ಪೆವಿಲಿಯನ್ ಸೇರಿಕೊಳ್ಳುತ್ತಿದ್ದರು. ಪವರ್ ಪ್ಲೇನಲ್ಲಿ ಭಾರತ ಗಳಿಸಿದ ಗರಿಷ್ಠ ಸ್ಕೋರ್ ಎಂದರೆ ಜಿಂಬಾಬ್ವೆ ವಿರುದ್ಧ 46/1. ನಿಧಾನಗತಿಯ ಆರಂಭದ ಜೊತೆ ಓಪನರ್​ಗಳ ಸಂಪೂರ್ಣ ವೈಫಲ್ಯ ಮೈನಸ್ ಪಾಯಿಂಟ್ ಆಯಿತು.

ಇದನ್ನೂ ಓದಿ
Image
ನಾಯಕನೂ ಸೇರಿ ಟಿ20 ಕ್ರಿಕೆಟ್​ಗೆ ವಿದಾಯ ಹೇಳಬಹುದಾದ ಟೀಂ ಇಂಡಿಯಾ ಕ್ರಿಕೆಟಿಗರಿವರು..!
Image
IND vs ENG: ‘ಕಲಿಸಲು ಸಾಧ್ಯವಿಲ್ಲ’; ತನ್ನಲ್ಲಿಯೇ ತಪ್ಪಿಟ್ಟುಕೊಂಡು ಇತರರ ಮೇಲೆ ಗೂಬೆ ಕೂರಿಸಿದ ರೋಹಿತ್..!
Image
IND vs ENG: 10 ವಿಕೆಟ್​ಗಳ ಹೀನಾಯ ಸೋಲು; ಬಿಸಿಸಿಐ ಈಗಲಾದರೂ ಬದಲಾಗಬೇಕು ಎಂದ ಕೋಚ್ ರಾಹುಲ್
Image
IND vs ENG: ಸೋಲಿನ ಬಳಿಕ ಡಗೌಟ್​ನಲ್ಲಿ ಕಣ್ಣೀರಿಟ್ಟ ರೋಹಿತ್..! ಮಂಕಾದ ಕೊಹ್ಲಿ- ಸೂರ್ಯ; ವಿಡಿಯೋ

ಕಾರ್ತಿಕ್ vs ಪಂತ್: ಇಡೀ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ vs ರಿಷಭ್ ಪಂತ್ ಎಂಬ ಮುಸುಕಿನ ಗುಡ್ಡಾಟ ನಡೆಯುತ್ತಲೇ ಇತ್ತು. ಆಸ್ಟ್ರೇಲಿಯಾ ಪಿಚ್​ನಲ್ಲಿ ಆಡಿ ಸಾಕಷ್ಟು ಅನುಭವ ಇರುವ ಪಂತ್​ಗೆ ಅವಕಾಶ ಸಿಕ್ಕಿದ್ದು ಕೇವಲ ಎರಡು ಪಂದ್ಯ ಮಾತ್ರ. ಕಾರ್ತಿಕ್ ಅನೇಕ ಬಾರಿ ವೈಫಲ್ಯ ಅನುಭವಿಸಿದರೂ ಅವರನ್ನು ಪದೇ ಪದೇ ಆಡಿಸಲಾಯಿತು. ನಿಜ ಹೇಳಬೇಕೆಂದರೆ ಟಿ20 ವಿಶ್ವಕಪ್​ನಲ್ಲಿ ಭಾರತದ ಪ್ಲೇಯಿಂಗ್ XI ನಲ್ಲಿ ಬದಲಾವಣೆ ಆಗಿದ್ದು ತೀರಾ ಕಡಿಮೆ. ಕಳಪೆ ಫಾರ್ಮ್​ನಲ್ಲಿದ್ದರೂ ಅವರನ್ನೇ ಆಡಿಸಿದ್ದು ಅಚ್ಚರಿ ಎಂಬಂತಿತ್ತು.

ಕೆಎಲ್ ರಾಹುಲ್ ವೈಫಲ್ಯ: ರಾಹುಲ್ ತಮ್ಮ ಸ್ಥಾನಕ್ಕೆ ನ್ಯಾಯ ಒದಗಿಸಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಸಾಕಷ್ಟು ಬಾಲ್ ತಿಂದು ಇಡೀ ಟೂರ್ನಿಯಲ್ಲಿ ತಂಡಕ್ಕೆ ಆಸರೆಯಾಗಿದ್ದು ಕಮ್ಮಿಯೆ. ರಾಹುಲ್ ಬ್ಯಾಟ್​ನಿಂದ ಎರಡು ಅರ್ಧಶತಕ ಬಂದಿದೆ. ಅದು ಜಿಂಬಾಬ್ವೆ ಮತ್ತು ಬಾಂಗ್ಲಾದೇಶ ವಿರುದ್ಧ. ಅದೇ ಹೈವೋಲ್ಟೇಜ್ ಪಂದ್ಯದಲ್ಲಿ ಇವರು ಕಲೆಹಾಕಿದ್ದು ಪಾಕ್ ವಿರುದ್ಧ 4 ರನ್, ದ. ಆಫ್ರಿಕಾ ವಿರುದ್ಧ 9 ಹಾಗೂ ಇಂಗ್ಲೆಂಡ್ ವಿರುದ್ಧ 5 ರನ್.

ವಿಕೆಟ್ ಟೇಕಿಂಗ್ ಬೌಲರ್ ಯಾರು?: ಐಸಿಸಿ ಟಿ20 ವಿಶ್ವಕಪ್​ನಲ್ಲಿ ಜಸ್​ಪ್ರಿತ್ ಬುಮ್ರಾ ಅಲಭ್ಯತೆ ಎಂದು ಕಂಡಿತು. ತಂಡದಲ್ಲಿ ಅನುಭವಿ ಬೌಲರ್​ಗಳಿದ್ದರು ನಿಜ. ಆದರೆ, ವಿಕೆಟ್ ಟೇಕಿಂಗ್ ಬೌಲರ್ ಆಗಿ ಯಾರೂ ಕಾಣಿಸಿಕೊಂಡಿರಲಿಲ್ಲ. ಅರ್ಶ್​​ದೀಪ್ ಸಿಂಗ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಿದರು. ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಅಪಾಯಕಾರಿ ಆಗಿ ಗೋಚರಿಸಲಿಲ್ಲ. ಮುಖ್ಯವಾಗಿ ಆಸ್ಟ್ರೇಲಿಯಾ ಪಿಚ್​ಗೆ ಹೇಳಿಮಾಡಿಸಿದ ಬೌಲರ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಇರಲಿಲ್ಲ. ಯುಜ್ವೇಂದ್ರ ಚಹಲ್ ತಂಡದಲ್ಲಿದ್ದರೂ ಅವರನ್ನು ಆಡಿಸಲಿಲ್ಲ.

Published On - 8:18 am, Fri, 11 November 22

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ