AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಇಬ್ಬರಂತೆ ಸಾವಿರ ಆಟಗಾರರು ಸಿಗಬಹುದು, ಆದರೆ ಧೋನಿಯಂಥವರು ಸಿಗುವುದು ಅಸಾಧ್ಯ; ಗಂಭೀರ್

T20 World Cup 2022: ಬಹುಶಃ ರೋಹಿತ್ ಶರ್ಮಾ ಅವರಿಗಿಂತ ಹೆಚ್ಚು ದ್ವಿಶತಕ ಬಾರಿಸುವ ಆಟಗಾರ ಟೀಂ ಇಂಡಿಯಾದಲ್ಲಿ ಹುಟ್ಟುಕೊಳ್ಳಬಹುದು. ಹಾಗೆಯೇ ವಿರಾಟ್ ಕೊಹ್ಲಿಗಿಂತ ಹೆಚ್ಚು ಶತಕಗಳನ್ನು ಗಳಿಸುವ ಮತ್ತೊಬ್ಬ ಆಟಗಾರನೂ ಸಿಗಬಹುದು.

ಈ ಇಬ್ಬರಂತೆ ಸಾವಿರ ಆಟಗಾರರು ಸಿಗಬಹುದು, ಆದರೆ ಧೋನಿಯಂಥವರು ಸಿಗುವುದು ಅಸಾಧ್ಯ; ಗಂಭೀರ್
ಗಂಭೀರ್, ಧೋನಿ
TV9 Web
| Updated By: ಪೃಥ್ವಿಶಂಕರ|

Updated on: Nov 11, 2022 | 2:07 PM

Share

2022 ರ ಟಿ20 ವಿಶ್ವಕಪ್‌ನ (T20 World Cup 2022) ಸೆಮಿಫೈನಲ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದ (Team India) ಪಯಣ ಅಂತ್ಯಗೊಂಡಿದೆ. ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳಿಂದ ಸೋತಿದೆ. 168 ರನ್ ಗಳಿಸಿದ್ದ ಟೀಂ ಇಂಡಿಯಾಗೆ ಇಂಗ್ಲೆಂಡ್​ನ ಒಂದೂ ವಿಕೆಟ್ ಬೀಳಿಸಲು ಸಾಧ್ಯವಾಗಲಿಲ್ಲ. ಇದರ ಫಲವಾಗಿ ಜೋಸ್ ಬಟ್ಲರ್ ಬಳಗ 16ನೇ ಓವರ್​ನಲ್ಲಿಯೇ ಗುರಿ ಮುಟ್ಟಿತು. ಭಾರತದ ಈ ಹೀನಾಯ ಸೋಲಿನ ನಂತರ, ಟೀಂ ಇಂಡಿಯಾ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ರೋಹಿತ್ ಬಳಗದ ಮೇಲೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಈ ಮಧ್ಯೆ ಗೌತಮ್ ಗಂಭೀರ್ (Gautam Gambhir) ಧೋನಿಯನ್ನು ನೆನಪಿಸಿಕೊಂಡಿದ್ದು, ಭಾರತದ ಸೋಲಿನ ನಂತರ ಧೋನಿ (MS Dhoni) ಬಗ್ಗೆ ಗಂಭೀರ್ ಹೇಳಿರುವ ಮಾತಿಗೆ ಎಲ್ಲರೂ ತಲೆಯಲ್ಲಾಡಿಸುತ್ತಿದ್ದಾರೆ.

ಭಾರತದ ಸೋಲಿನ ನಂತರ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೌತಮ್ ಗಂಭೀರ್, ‘ಧೋನಿಯಂತೆ ಯಾವುದೇ ಭಾರತೀಯ ನಾಯಕನಿಗೆ ಮೂರು ಐಸಿಸಿ ಟ್ರೋಫಿಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ’. ಬಹುಶಃ ರೋಹಿತ್ ಶರ್ಮಾ ಅವರಿಗಿಂತ ಹೆಚ್ಚು ದ್ವಿಶತಕ ಬಾರಿಸುವ ಆಟಗಾರ ಟೀಂ ಇಂಡಿಯಾದಲ್ಲಿ ಹುಟ್ಟುಕೊಳ್ಳಬಹುದು. ಹಾಗೆಯೇ ವಿರಾಟ್ ಕೊಹ್ಲಿಗಿಂತ ಹೆಚ್ಚು ಶತಕಗಳನ್ನು ಗಳಿಸುವ ಮತ್ತೊಬ್ಬ ಆಟಗಾರನು ಸಿಗಬಹುದು. ಆದರೆ ಯಾವುದೇ ಭಾರತೀಯ ನಾಯಕನಿಗೆ ಮೂರು ಐಸಿಸಿ ಟ್ರೋಫಿಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ‘ಐಪಿಎಲ್‌ನಲ್ಲಿ ಆಡಿದ ಅನುಭವ ಪ್ರಯೋಜನಕ್ಕೆ ಬಂತು’; ಗಾಯದ ಮೇಲೆ ಉಪ್ಪು ಸುರಿದ ಜೋಸ್ ಬಟ್ಲರ್

ಧೋನಿ ಅದ್ಭುತ ದಾಖಲೆ

ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದಿದೆ. ಅವರ ನಾಯಕತ್ವದಲ್ಲಿ ಭಾರತವು ಮೊದಲು 2007 ರಲ್ಲಿ ಟಿ20 ವಿಶ್ವಕಪ್ ಗೆದ್ದಿತು. ಇದರ ನಂತರ, 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತು ಮತ್ತು 2013 ರಲ್ಲಿ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಧೋನಿ ಹೊರತುಪಡಿಸಿ, ವಿಶ್ವದ ಯಾವುದೇ ನಾಯಕ ಐಸಿಸಿಯ ಮೂರು ವಿಭಿನ್ನ ಟ್ರೋಫಿಗಳನ್ನು ಗೆದ್ದಿಲ್ಲ.

ಕೊಹ್ಲಿ ನಂತರ ರೋಹಿತ್ ಕೂಡ ಐಸಿಸಿ ಟ್ರೋಫಿ ಗೆಲ್ಲಲಿಲ್ಲ

ಧೋನಿ ನಂತರ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡರು. ಆದರೆ ಅವರ ನಾಯಕತ್ವದಲ್ಲಿಯೂ ಟೀಮ್ ಇಂಡಿಯಾ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. 2017ರಲ್ಲಿ ವಿರಾಟ್ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಅವಕಾಶವಿತ್ತು, ಆದರೆ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಸೋತಿತ್ತು. ಇದರ ನಂತರ, ಟೀಂ ಇಂಡಿಯಾ 2019 ರಲ್ಲಿ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. 2021 ರಲ್ಲಿ, ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಕಿವೀಸ್ ವಿರುದ್ಧ ಮುಗ್ಗರಿಸಿತ್ತು. 2021ರ ಟಿ20 ವಿಶ್ವಕಪ್‌ನಲ್ಲೂ ಟೀಂ ಇಂಡಿಯಾ ಸೂಪರ್ 12 ಸುತ್ತಿನಿಂದ ಹೊರಗುಳಿದಿತ್ತು. ಇದಾದ ಬಳಿಕ ಕಮಾಂಡ್ ರೋಹಿತ್ ಶರ್ಮಾ ಕೈ ಸೇರಿತು. ಕಳೆದ ಒಂದು ವರ್ಷದಲ್ಲಿ, ರೋಹಿತ್ ತಂಡದೊಂದಿಗೆ ತುಂಬಾ ಶ್ರಮಿಸಿದರು ಆದರೆ ಟಿ20 ವಿಶ್ವಕಪ್ 2022 ರಲ್ಲಿ ಫಲಿತಾಂಶ ಬದಲಾಗಲೇ ಇಲ್ಲ. 5 ಐಪಿಎಲ್ ಟ್ರೋಫಿ ಗೆದ್ದ ನಾಯಕ ರೋಹಿತ್ ಶರ್ಮಾ ಕೂಡ ಐಸಿಸಿ ಟೂರ್ನಿಯಿಂದ ಬರಿಗೈಯಲ್ಲಿ ವಾಪಸಾಗಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ