T20 World Cup: ಟಿ20 ವಿಶ್ವಕಪ್‌ ಇತಿಹಾಸದಲ್ಲಿ 10 ವಿಕೆಟ್​ಗಳ ಜಯ ಸಾಧಿಸಿದ ತಂಡಗಳಿವು

T20 World Cup: ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ಎದುರು 10 ವಿಕೆಟ್ ಸೋಲು ಎದುರಿಸಿರುವ ಟೀಂ ಇಂಡಿಯಾ ಟೂರ್ನಿಯಿಂದ ಬರಿಗೈಯಲ್ಲೇ ಹೊರಬಿದ್ದಿದೆ.

TV9 Web
| Updated By: ಪೃಥ್ವಿಶಂಕರ

Updated on: Nov 12, 2022 | 12:57 PM

ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ಎದುರು 10 ವಿಕೆಟ್ ಸೋಲು ಎದುರಿಸಿರುವ ಟೀಂ ಇಂಡಿಯಾ ಟೂರ್ನಿಯಿಂದ ಬರಿಗೈಯಲ್ಲೇ ಹೊರಬಿದ್ದಿದೆ. ಭಾರತ ನೀಡಿದ 169 ರನ್​ಗಳ ಟಾರ್ಗೆಟನ್ನು ಇಂಗ್ಲೆಂಡ್​ನ ಅಲೆಕ್ಸ್ ಹೇಲ್ಸ್ ಮತ್ತು ಜೋಸ್ ಬಟ್ಲರ್ ಜೋಡಿ ಯಾವುದೇ ವಿಕೆಟ್ ನಷ್ಟವಿಲ್ಲದೆ 16 ಓವರ್‌ಗಳಲ್ಲಿಯೇ ಸಾಧಿಸಿತು. ಆದರೆ ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ತಂಡವೊಂದು 10 ವಿಕೆಟ್‌ಗಳಿಂದ ಸೋತಿದ್ದು ಇದೇ ಮೊದಲಲ್ಲ. ಅಂತಹ ಕೆಲವು ಹಳೆಯ ಪಂದ್ಯಗಳ ಮಾಹಿತಿ ಇಲ್ಲಿದೆ.

1 / 5
2007 ರಂದು ನಡೆದ ಮೊದಲ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಶ್ರೀಲಂಕಾವನ್ನು 10 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಆಸ್ಟ್ರೇಲಿಯಾಕ್ಕೆ ಕೇವಲ 102 ರನ್‌ಗಳ ಗುರಿಯನ್ನು ನೀಡಿತ್ತು. ಅದನ್ನು ಆಸ್ಟ್ರೇಲಿಯಾ ಸುಲಭವಾಗಿ ಬೆನ್ನಟ್ಟಿತು.

2 / 5
ಆ ಬಳಿಕ 2012 ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಜಿಂಬಾಬ್ವೆಯನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಜಿಂಬಾಬ್ವೆ ದಕ್ಷಿಣ ಆಫ್ರಿಕಾಕ್ಕೆ ಕೇವಲ 94 ರನ್‌ಗಳ ಗುರಿಯನ್ನು ನೀಡಿತು. ಇದನ್ನು ದಕ್ಷಿಣ ಆಫ್ರಿಕಾ ಸುಲಭವಾಗಿ ಸಾಧಿಸಿತು.

3 / 5
2021 ರ ವಿಶ್ವಕಪ್‌ನಲ್ಲಿ ಓಮನ್ ತಂಡ ಪಿಎನ್​ಜಿ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಪಿಎಲ್​ಜಿ ತಂಡ ಓಮನ್‌ ತಂಡಕ್ಕೆ 130 ರನ್‌ಗಳ ಗುರಿಯನ್ನು ನೀಡಿತ್ತು. ಅದನ್ನು ಓಮನ್ ತಂಡ ಸುಲಭವಾಗಿ ಸಾಧಿಸಿತು. ಆದರೆ, ಎರಡೂ ತಂಡಗಳು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದವು.

4 / 5
2021 ರ ಟಿ20 ವಿಶ್ವದಲ್ಲಿ ಮೊದಲ ಬಾರಿಗೆ ಭಾರತವು ಪಾಕಿಸ್ತಾನದ ವಿರುದ್ಧ 10 ವಿಕೆಟ್‌ಗಳ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ಭಾರತ ಪಾಕಿಸ್ತಾನಕ್ಕೆ 152 ರನ್ ಗುರಿ ನೀಡಿತ್ತು. ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಜೋಡಿ ವಿಕೆಟ್ ನಷ್ಟವಿಲ್ಲದೆ ಟಾರ್ಗೆಟ್ ಮುಗಿಸಿತ್ತು. ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮೊದಲ ಬಾರಿಗೆ ಭಾರತವನ್ನು ಸೋಲಿಸಿತು.

5 / 5
Follow us