ಶಿವಮೊಗ್ಗ: ಭೋವಿ ಸಮಾಜ ಅಂತಾರಾಷ್ಟ್ರೀಯ ಮಟ್ಟದ ಸಮಾಜ. ಇದು ಸಮಾಜದ ಅಡಿಪಾಯ. ನಾನು ನೊಂದ ಸಮಾಜದ ಪರವಾಗಿದ್ದೇನೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ ಎಂದು ಭೋವಿ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿಕೆ ನೀಡಿದ್ದಾರೆ. ನಾವು ಕಾವೇರಿ ನದಿಯ ನೀರಿಗಾಗಿ ಪಾದಯಾತ್ರೆ ಹಮ್ಮಿಕೊಂಡಾಗ ಭೋವಿ ಸಮಾಜದ ಸ್ವಾಮೀಜಿ ನಮಗೆ ಬೆಂಬಲ ನೀಡಿದ್ದರು. ಹಾಗಾಗಿ ನಾನು ಭಾಗವಹಿಸಿದ್ದೇನೆ. ಭೋವಿ ಸಮಾಜ ತನ್ನದೇ ಆದ ಇತಿಹಾಸ ಹೊಂದಿದೆ. ಮಾನವ ಧರ್ಮಕ್ಕೆ ತನ್ನದೇ ಆದ ಕೊಡುಗೆ ಇದೆ. ಭೋವಿಗಳು ಭೂಮಿಯ ಮಕ್ಕಳು. ನಾವು ಈ ಸಮಾಜಕ್ಕೆ ಸೂಕ್ತ ಗೌರವ ನೀಡಬೇಕಿದೆ. ಹಾಗೆಯೇ ಈ ಸಮಾಜ ತಮಗೆ ಯಾವ ಸರ್ಕಾರ ಯಾವ ಯಾವ ರೀತಿಯಲ್ಲಿ ಸಹಾಯ ಮಾಡಿದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಉಪಕಾರ ಸ್ಮರಣೆ ಇರಲಿ. ಮುಂದೆ ನಮ್ಮ ಕೈ ಬಲಪಡಿಸಿ ಎಂದು ಹೇಳಿದರು.
ನಮ್ಮ ಸರ್ಕಾರ ಬಜೆಟ್ಗೆ ಅನುಗುಣವಾಗಿ ಹಣ ಮೀಸಲಿಟ್ಟಿದ್ದೇವೆ. ಎಸ್ಸಿಪಿಟಿಎಸ್ಪಿ ಹಣ 39 ಸಾವಿರ ಕೋಟಿ ರೂ. ಇಟ್ಟಿದ್ವಿ. ಈ ಸರ್ಕಾರ 43 ಸಾವಿರ ಕೋಟಿ ಅನುದಾನ ಇಡಬೇಕಿತ್ತು. ಆದರೆ ಇಂದು ಕೇವಲ38 ಸಾವಿರ ಕೋಟಿ ಮಾತ್ರ ಇಟ್ಟಿದೆ ಎಂದು ಭೋವಿ ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸಮಾಜದವರು ದನಿ ಎತ್ತಬೇಕು. ಸಮಾಜದ ಒಬ್ಬ ವ್ಯಕ್ತಿ ಸಂಪುಟದಲ್ಲಿ ಸೇರ್ಪಡೆ ಆಗಬೇಕು. ಆಗ ಸಮಾಜಕ್ಕೆ ಶಕ್ತಿ ಬರುತ್ತದೆ. ಭೋವಿ ಸಮಾಜ ನೂರಕ್ಕೆ ನೂರರಷ್ಟು ಶಿಕ್ಷಣ ಪಡೆಯಬೇಕು ಎಂದು ಹೇಳಿದರು.
ಇದನ್ನೂ ಓದಿ:
PBKS vs CSK Prediction Playing XI: ಪಂಜಾಬ್- ಚೆನ್ನೈ ಮುಖಾಮುಖಿ; ಎರಡು ತಂಡಗಳಲ್ಲೂ ಬದಲಾವಣೆ ಖಚಿತ
ಶಿರಹಟ್ಟಿ ಮಠಕ್ಕೆ ಬಿಡುಗಡೆಯಾದ ಅನುದಾನದಲ್ಲಿ ಹಣ ಗುಳುಂ; ಸರ್ಕಾರದ ವಿರುದ್ಧ ದಿಂಗಾಲೇಶ್ವರ ಶ್ರೀಗಳಿಂದ ಹೊಸ ಬಾಂಬ್