ಶಿರಹಟ್ಟಿ ಮಠಕ್ಕೆ ಬಿಡುಗಡೆಯಾದ ಅನುದಾನದಲ್ಲಿ ಹಣ ಗುಳುಂ; ಸರ್ಕಾರದ ವಿರುದ್ಧ ದಿಂಗಾಲೇಶ್ವರ ಶ್ರೀಗಳಿಂದ ಹೊಸ ಬಾಂಬ್

ಶಿರಹಟ್ಟಿ ಮಠಕ್ಕೆ ಬಿಡುಗಡೆಯಾದ ಅನುದಾನದಲ್ಲಿ ಹಣ ಗುಳುಂ; ಸರ್ಕಾರದ ವಿರುದ್ಧ ದಿಂಗಾಲೇಶ್ವರ ಶ್ರೀಗಳಿಂದ ಹೊಸ ಬಾಂಬ್
ದಿಂಗಾಲೇಶ್ವರ ಶ್ರೀ

ಆ ಪ್ರತಿಷ್ಠಿತ ಮಠಾದೀಶರಿಗೆ ಡಿಸಿಯವರಿಂದ ನೇರವಾಗಿ ಹಣ ಹೋಗುವದಾದರೆ ಶಿರಹಟ್ಟಿ ಮಠಕ್ಕೆ ಈ ಅನ್ಯಾಯ ಯಾಕೆ ಎಂದು ಪ್ರಶ್ನೆ ಮಾಡಿದ್ದು, ಉತ್ತರ ಕರ್ನಾಟಕದ ಮಠಗಳಿಗೆ ಸರಕಾರದಿಂದ ಅನ್ಯಾಯವಾಗಿದೆ ಎಂದರು.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 24, 2022 | 10:45 PM

ಗದಗ: 10 ವರ್ಷ ಕಳೆದರೂ ಇನ್ನೂ ಶಿರಹಟ್ಟಿ ಮಠಕ್ಕೆ ಬಿಡುಗಡೆಯಾದ 2 ಕೋಟಿ ಅನುದಾದಲ್ಲಿ 1.25 ಕೋಟಿ ಹಣ ಗುಳುಂ ಮಾಡಲಾಗಿದೆ ಎಂದು  ಗದಗ ಸುದ್ದಿಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ದಿಂಗಾಲೇಶ್ವರ ಶ್ರೀಗಳು ಗಂಭೀರ ಆರೋಪ ಮಾಡಿದ್ದಾರೆ. ಪ್ರತಿಷ್ಠಿತ ಮಠಾದೀಶರೊಬ್ಬರು ಸರಕಾರದಿಂದ ಬಂದಿರೋ ಯಾವುದೇ ಹಣ ಕಟ್ ಆಗದಂತೆ ಡಿಸಿಯವರ ಮೂಲಕ ಬರುತ್ತದೆ ಎಂದು ಹೇಳಿದ್ದೀರಿ. ಆದ್ರೆ ನಾನು ನೇಮಕಗೊಂಡ ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಯಡಿಯೂರಪ್ಪ ಕಾಲದಲ್ಲಿ 2 ಕೋಟಿ ಅನುದಾನ ಬಜೆಟ್​ನಲ್ಲಿ ಇಟ್ಟಿದ್ದರು. ಆದ್ರೆ ಅದು ಡಿಸಿಯವರಿಂದ ನೇರವಾಗಿ ಬರಲಿಲ್ಲ. ಆದ್ರೆ ಗುತ್ತಿಗೆದಾರರು ಮಠದ ಪೂರ್ಣ ಕೆಲಸ ಮುಗಿಸಿದರೂ ಇದೂವರೆಗೂ ಮುಕ್ಕಾಲು ಭಾಗ ಹಣ ಬಂದಿಲ್ಲ. ಕೇವಲ 75 ಲಕ್ಷ ಬಂದಿದೆ. ಉಳಿದ 1.25 ಕೋಟಿ ಹಣ ಎಲ್ಲಿಗೆ ಹೋಯ್ತು ಎಂದು ಪ್ರಶ್ನೆ ಮಾಡಿದರು.

ಆ ಪ್ರತಿಷ್ಠಿತ ಮಠಾದೀಶರಿಗೆ ಡಿಸಿಯವರಿಂದ ನೇರವಾಗಿ ಹಣ ಹೋಗುವದಾದರೆ ಶಿರಹಟ್ಟಿ ಮಠಕ್ಕೆ ಈ ಅನ್ಯಾಯ ಯಾಕೆ ಎಂದು ಪ್ರಶ್ನೆ ಮಾಡಿದ್ದು, ಉತ್ತರ ಕರ್ನಾಟಕದ ಮಠಗಳಿಗೆ ಸರಕಾರದಿಂದ ಅನ್ಯಾಯವಾಗಿದೆ ಎಂದರು. ಉತ್ತರ ಕರ್ನಾಟಕದ ಶಾಸಕರೊಬ್ಬರು ಸದಾಕಾಲ ಸರಕಾರದ ವಿರುದ್ಧ ಯಡಿಯೂರಪ್ಪ ವಿರುದ್ಧ ಮಾತಾನಾಡ್ತಾನೆ ಇದ್ರು. ಸ್ವಪಕ್ಷದ ಶಾಸಕರೊಬ್ಬರು ತಮ್ಮ ಸರಕಾರದ ವಿರುದ್ಧ ತಮ್ಮ ನಾಯಕನ ವಿರುದ್ಧ ಮಾತನಾಡುವಾಗ ಯಾವುದೇ ಶಾಸಕರು, ಸಚಿವರು ತುಟಿಕ್ ಪಿಟಿಕ್ ಅನ್ನಲಿಲ್ಲ. ಅಂದು ಒಬ್ಬರೂ ಕೂಡ ಮಾತನಾಡದೇ ಇವತ್ತು ನನ್ನ ವಿರುದ್ಧ ಇಲ್ಲ ಸಲ್ಲದ ಮಾತಿಗಳನ್ನಾಡ್ತಿದ್ದೀರಿ ಅಂತ ಸಚಿವ ಸಿ.ಸಿ. ಪಾಟೀಲ್ ವಿರುದ್ಧ ಕಿಡಿ ಕಾರಿದರು.

ಇವತ್ತು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತನಾಡಿದ ಒಂದು ಉಪನ್ಯಾವಸನ್ನ ಒಂದು ಸವಾಲಾಗಿ ಸ್ವೀಕರಿಸಿದ್ದೀರಿ. ನನ್ನ ಆಪಾದನೆಯ ಬೆನ್ನಲ್ಲೇ ಸಿಸಿ ಪಾಟೀಲ್ ನನ್ನ ವಯಕ್ತಿಕ ಕೇಸ್​ಗಳ ಫೈಲ್​ನ್ನ ಹಿಡಿದು ಸುದ್ದಿಗೋಷ್ಠಿ ಮಾಡ್ತಾರೆ. ಇಷ್ಟು ಬೇಗ ಆ ಕೇಸ್ ಪೇಪರದ ನಿಮಗೆ ಯಾರು ತಂದುಕೊಟ್ರು ಅನ್ನೋದು ನನಗೆ ಆಶ್ಚರ್ಯ ಆಗಿದೆ. ಕೇಸ್ ದಾಖಲೆಗಳು ಕೋರ್ಟ್, ಪೊಲೀಸ್ ಠಾಣೆಯಲ್ಲಿ ಇರ್ತಾವೇ. ಆ ಕೇಸ್​ನ ಹಿಂದೆ ತಾವಿದ್ದೀರಿ, ತಮ್ಮ ಕಡೆ ಆ ಎಲ್ಲಾ ದಾಖಲೆ ಇದ್ದಾವೆ ಎಂಬುದನ್ನು ಈ ನಾಡಿಗೆ ತೋರಿಸಿದ್ದೀರಿ. ಸಿಎಂ ಸಾಪ್ಟಕಾರ್ನರ್ ರೀತಿಯಲ್ಲಿ ವರ್ತಿಸುತ್ತಾರೆ, ಉಳಿದವರೆಲ್ಲರೂ ದಾಳಿ ದಬ್ಬಾಳಿಕೆ ಮಾಡುವ ರೀತಿಯಲ್ಲಿ ವರ್ತನೆ ಮಾಡಿದ್ದಾರೆ. ಸರಕಾರದಲ್ಲಿನ ಸಚಿವರಿಗೆ ಒಂದಿಷ್ಟು ಸಂಸ್ಕೃತಿ ಕಲಿಸುವ ಪಾಠಶಾಲೆಗೆ ಹಾಕಬೇಕು ಅಂತ ಹೈಕಮಾಂಡ್​ಗೆ ಸೂಚನೆ ನೀಡಬೇಕು. ಇವರು ಬಳಸುವ ಶಬ್ದಗಳನ್ನು ಯಾವ ಅನಾಗರಿಕರೂ ಕೂಡ ಬಳಸೋದಿಲ್ಲ ಅಂತ ಬಿಜೆಪಿ ಸಚಿವರು ಮತ್ತು ಶಾಸಕರ ವಿರುದ್ಧ ದಿಂಗಾಲೇಶ್ವರ ಶ್ರೀಗಳು ಕಿಡಿ ಕಾರಿದರು.

ಇದನ್ನೂ ಓದಿ;

Khelo India University Games: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್​ನಲ್ಲಿದ್ದಾರೆ ಒಲಿಂಪಿಕ್ಸ್ ಕ್ರೀಡಾಪಟುಗಳು

Follow us on

Related Stories

Most Read Stories

Click on your DTH Provider to Add TV9 Kannada