ಶಿವಮೊಗ್ಗ ಗಲಭೆ ಪ್ರಕರಣ: ಇದು ಪೂರ್ವನಿಯೋಜಿತ ಷಡ್ಯಂತ್ರ; ಎನ್​ಐಎ ಮೂಲಕ ತನಿಖೆಗೆ ಆಗ್ರಹಿಸಿದ ಕೆಎಸ್ ಈಶ್ವರಪ್ಪ

| Updated By: ganapathi bhat

Updated on: Feb 21, 2022 | 8:07 PM

ಇಷ್ಟೊಂದು ರೀತಿಯ ಗಲಾಟೆ ಆಗಲು ಯಾರು ಕಾರಣ ಯಾರು? ಈ ಕುರಿತು ತನಿಖೆಯಲ್ಲಿ ಎಲ್ಲವೂ ಹೊರಗಡೆ ಬರಬೇಕು. ಗಲಾಟೆಗೋಸ್ಕರ ಹೊರಗಡೆಯಿಂದ ಶಿವಮೊಗ್ಗಕ್ಕೆ ಬಂದಿದ್ದಾರೆ. ಎಷ್ಟು ಜನರು ಹೊರಗಡೆಯಿಂದ ಬಂದಿದ್ದಾರೆ ಗೊತ್ತಿಲ್ಲ. ಗಲಭೆ ಎಬ್ಬಿಸಬೇಕೆಂದೇ ಮಾಡಿರುವಂತಹ ಕುತಂತ್ರವಿದು ಎಂದು ಆರೋಪಿಸಿದ್ದಾರೆ.

ಶಿವಮೊಗ್ಗ ಗಲಭೆ ಪ್ರಕರಣ: ಇದು ಪೂರ್ವನಿಯೋಜಿತ ಷಡ್ಯಂತ್ರ; ಎನ್​ಐಎ ಮೂಲಕ ತನಿಖೆಗೆ ಆಗ್ರಹಿಸಿದ ಕೆಎಸ್ ಈಶ್ವರಪ್ಪ
ಸಚಿವ ಕೆ.ಎಸ್.ಈಶ್ವರಪ್ಪ
Follow us on

ಶಿವಮೊಗ್ಗ: ಶಿವಮೊಗ್ಗ ಇತಿಹಾಸದಲ್ಲೇ ಈ ರೀತಿ ಘಟನೆ ನಡೆದಿರಲಿಲ್ಲ. ನಮ್ಮ ಒಬ್ಬ ಹಿಂದೂ ಕಾರ್ಯಕರ್ತನ ಕಗ್ಗೊಲೆಯಾಗಿದೆ. ಎನ್​ಐಎ ಮೂಲಕ ತನಿಖೆ ಮಾಡಿಸುವಂತೆ ಆಗ್ರಹಿಸ್ತೇನೆ. ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾಗಿ ನಾನು ಮನವಿ ಮಾಡುತ್ತೇನೆ. ಈಗಾಗಲೇ ಮೂವರನ್ನ ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಗೃಹ ಸಚಿವರು ಮೂವರನ್ನ ಬಂಧಿಸಿದ್ದಾಗಿ ಹೇಳಿದ್ದಾರೆ. ಈ ಘಟನೆ ಹಿಂದೆ ಯಾರಿದ್ದಾರೆ ಹೊರಗಡೆ ಬರಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ನಗರದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗದಲ್ಲಿ ಸಚಿವ ಕೆ.ಎಸ್​. ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ನಾನು ಮೃತನ ಕುಟುಂಬಸ್ಥರನ್ನು ಭೇಟಿಯಾಗಿ ಬಂದೆ. ಪೊಲೀಸ್​ ಇಲಾಖೆಯ ಹಿಡಿತವೇ ತಪ್ಪಿಹೋಗಿದೆ. ಮೃತದೇಹದ ಮೆರವಣಿಗೆ ವೇಳೆ ಕಲ್ಲುತೂರಾಟ ಆಗಿದೆ. ಇಷ್ಟೊಂದು ರೀತಿಯ ಗಲಾಟೆ ಆಗಲು ಯಾರು ಕಾರಣ ಯಾರು? ಈ ಕುರಿತು ತನಿಖೆಯಲ್ಲಿ ಎಲ್ಲವೂ ಹೊರಗಡೆ ಬರಬೇಕು. ಗಲಾಟೆಗೋಸ್ಕರ ಹೊರಗಡೆಯಿಂದ ಶಿವಮೊಗ್ಗಕ್ಕೆ ಬಂದಿದ್ದಾರೆ. ಎಷ್ಟು ಜನರು ಹೊರಗಡೆಯಿಂದ ಬಂದಿದ್ದಾರೆ ಗೊತ್ತಿಲ್ಲ. ಗಲಭೆ ಎಬ್ಬಿಸಬೇಕೆಂದೇ ಮಾಡಿರುವಂತಹ ಕುತಂತ್ರವಿದು ಎಂದು ಆರೋಪಿಸಿದ್ದಾರೆ.

ಬಿ.ಕೆ. ಹರಿಪ್ರಸಾದ್​​ ನಾನೇ ಕೊಲೆ ಮಾಡಿಸಿದ್ದೇನೆ ಎಂದಿದ್ದಾರೆ. ಹಾಗಾಗಿ ಎನ್​ಐಎ ಮೂಲಕ ತನಿಖೆಗೆ ಆಗ್ರಹಿಸುತ್ತೇನೆ. ತನಿಖೆ ಮೂಲಕ ಎಲ್ಲವೂ ಬಹಿರಂಗವಾಗಲಿದೆ. ಪೊಲೀಸ್​ ಇಲಾಖೆಗೂ ಮೀರಿ ಈ ಕುತಂತ್ರ ನಡೆದಿದೆ. ಎಡಿಜಿಪಿ ಮುರುಗನ್​ಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಗಲಾಟೆ ಮಾಡಲೆಂದೇ ತೀರ್ಮಾನಿಸಿ ಬಂದಿದ್ದರಿಂದ ಗಲಾಟೆ ಆಗಿದೆ. ಸಿಎಂ ಜತೆ ಚರ್ಚಿಸಿ NIA ಮೂಲಕ ತನಿಖೆಗೆ ಆಗ್ರಹಿಸ್ತೇನೆ. ಷಡ್ಯಂತ್ರ ಮಾಡಿರುವವರು ಹೊರಗಡೆ ಬರಬೇಕು ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ.

ಎನ್​ಐಎಯಿಂದ ಮಾತ್ರ ಸತ್ಯ ಹೊರಗಡೆ ಬರಲು ಸಾಧ್ಯ. ಇದು ಪೂರ್ವನಿಯೋಜಿತ ಷಡ್ಯಂತ್ರ. ಇದು ಹೇಡಿಗಳ ಕೆಲಸ. ಕೇವಲ ಮುಸಲ್ಮಾನರ ಮನೆಗಳ ಮೇಲೆ ಕಲ್ಲು ತೂರಿಲ್ಲ. ಹಿಂದೂಗಳ ಮನೆಗಳ ಮೇಲೂ ಕೂಡ ಕಲ್ಲು ತೂರಿದ್ದಾರೆ. ಹೊರಗಿನವರು ಶಿವಮೊಗ್ಗೆ ಬಂದು ಮಾಡಿರುವ ಕೃತ್ಯವಿದು. ಹತ್ಯೆಯಾದ ಹರ್ಷನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡುತ್ತೇವೆ. ಸಂಘಟನೆ, ಸ್ಥಳೀಯ ಜನಪ್ರತಿನಿಧಿಗಳು ನೆರವು ನೀಡುತ್ತೇವೆ. ಪರಿಹಾರ ಕೊಡುವುದು ದೊಡ್ಡ ಕೆಲಸವಲ್ಲ ಎಂದು ಈಶ್ವರಪ್ಪ ತಿಳಿಸಿದ್ದಾರೆ.

ಪರಿಸ್ಥಿತಿ ನೋಡಿಕೊಂಡು ಶಾಲಾ-ಕಾಲೇಜುಗಳ ಆರಂಭ: ಆರಗ ಜ್ಞಾನೇಂದ್ರ ಮಾಹಿತಿ

ಜಿಲ್ಲೆಯಲ್ಲಿ ಶಾಲಾ ಕಾಲೇಜು ಆರಂಭ ವಿಚಾರವಾಗಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಡಿಸಿ ನಿರ್ಧಾರ ತಗೆದುಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಶವಯಾತ್ರೆ ವೇಳೆ ಕಲ್ಲು ತೂರಾಟ ವಿಚಾರವಾಗಿ ಆಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಆ ಸಮಯದಲ್ಲಿ ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕಿತ್ತು ಅದನ್ನ ಮಾಡಿದ್ದಾರೆ. ಘಟನೆಯಲ್ಲಿ ಪೊಲೀಸರು ಸಂಯಮದಿಂದ ವರ್ತಿಸಿದ್ದಾರೆ. ಒಂದು ವೇಳೆ ಫೈರ್ ಮಾಡಿದ್ರೆ ಇನ್ನೊಂದು ನಾಲ್ಕ ಹೆಣ ಬಿಳುತಿತ್ತು
ಆ ಕೆಲಸ‌ ನಮ್ಮ ಪೊಲೀಸರು ಮಾಡಲಿಲ್ಲ

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ ಸಂಬಂಧ ಶಕ್ತಿಭವನದಲ್ಲಿ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಘಟನೆ ಬಗ್ಗೆ ಸಿಎಂ ಬೊಮ್ಮಾಯಿಗೆ ವಿವರಣೆ ಕೊಟ್ಟಿದ್ದೇನೆ. ಮತ್ತೆ ಸಭೆ ಮಾಡುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಬಂಧಿತ ಮೂವರು ಆರೋಪಿಗಳು ಶಿವಮೊಗ್ಗದವರು. ಪರಿಸ್ಥಿತಿ ನೋಡಿಕೊಂಡು ಶಾಲಾ-ಕಾಲೇಜುಗಳ ಆರಂಭ ಮಾಡುತ್ತೇವೆ. ಪರಿಸ್ಥಿತಿ ನೋಡಿಕೊಂಡು ಡಿಸಿ ನಿರ್ಧಾರ ತೆಗೆದುಕೊಳ್ತಾರೆ ಎಂದು ತಿಳಿಸಿದ್ದಾರೆ.

ಬಳಿಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಗೃಹಸಚಿವ ಆರಗ ಜ್ಞಾನೇಂದ್ರ ಭೇಟಿಯಾಗಿದ್ದಾರೆ. ಕಾವೇರಿ ನಿವಾಸದಲ್ಲಿ ಬಿಎಸ್​​ವೈ ಭೇಟಿಯಾಗಿ ಮಾತುಕತೆ ನಡೆಸಲಾಗಿದೆ. ಶಿವಮೊಗ್ಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಗ ಮಾತುಕತೆ ನಡೆಸಿದ್ದಾರೆ. ಇತ್ತ ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಕೇಸ್​ಗೆ ಸಂಬಂಧಿಸಿ ಹರ್ಷ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಭೇಟಿ ನೀಡಿದ್ದಾರೆ. ಹರ್ಷ ಕುಟುಂಬಸ್ಥರಿಗೆ ಸಚಿವ ಕೆ.ಸಿ.ನಾರಾಯಣಗೌಡ ಸಾಂತ್ವನ ಹೇಳಿದ್ದಾರೆ.

ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ: ಮೂವರು ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಆರಗ ಜ್ಞಾನೇಂದ್ರ ಮಾಹಿತಿ

ಇದನ್ನೂ ಓದಿ: ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತನ ಹತ್ಯೆ ಖಂಡಿಸಿ ಫೆ. 23ಕ್ಕೆ ರಾಜ್ಯಾದ್ಯಂತ ಪ್ರತಿಭಟನೆ

Published On - 7:50 pm, Mon, 21 February 22