KS Eshwarappa PC: ಯಾವುದೇ ಖಾತೆಗೆ ಅಪೇಕ್ಷೆ ಪಟ್ಟಿಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ; ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

KS Eshwarappa Press Meet: ಬಿಜೆಪಿ ಮೂಲದಿಂದ ಬಂದ ಸಾವಿರಾರು ಕಾರ್ಯಕರ್ತರಿದ್ದಾರೆ. ನಾನು ಸಹ ಬಿಜೆಪಿ ಮೂಲದಿಂದ ಬಂದವನು. ಮುಖ್ಯಮಂತ್ರಿ ಸ್ಥಾನಕ್ಕೆ ನನಗಿಂತ ಹಿರಿಯರಿದ್ದಾರೆ. ಪಕ್ಷದ ತೀರ್ಮಾನದಿಂದ ಬೊಮ್ಮಾಯಿ ಸಿಎಂ ಆಗಿದ್ದಾರೆ ಎಂದು ತಿಳಿಸಿದ್ದಾರೆ.

KS Eshwarappa PC: ಯಾವುದೇ ಖಾತೆಗೆ ಅಪೇಕ್ಷೆ ಪಟ್ಟಿಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ; ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ
ಸಚಿವ ಕೆ.ಎಸ್. ಈಶ್ವರಪ್ಪ
Follow us
TV9 Web
| Updated By: sandhya thejappa

Updated on:Jul 29, 2021 | 12:49 PM

ಶಿವಮೊಗ್ಗ: ರಾಜಕೀಯ ಲಾಭಕ್ಕಾಗಿ ಕಾಯುತ್ತಿದ್ದ ಕಾಂಗ್ರೆಸ್​ನವರಿಗೆ ಬಹಳ ನಿರಾಸೆಯಾಗಿದೆ. ಬಿಜೆಪಿಯಲ್ಲಿನ ಸಮಸ್ಯೆ ತುಂಬಾ ಬೇಗ ಬಗೆಹರಿದಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗಲಿದೆ. ಸರ್ಕಾರ ಮತ್ತು ಸಂಘಟನೆ ಪೂರ್ಣಪ್ರಮಾಣದಲ್ಲಿ ಶ್ರಮ ಹಾಕುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಬಿಜೆಪಿ ಮೂಲದಿಂದ ಬಂದ ಸಾವಿರಾರು ಕಾರ್ಯಕರ್ತರಿದ್ದಾರೆ. ನಾನು ಸಹ ಬಿಜೆಪಿ ಮೂಲದಿಂದ ಬಂದವನು. ಮುಖ್ಯಮಂತ್ರಿ ಸ್ಥಾನಕ್ಕೆ ನನಗಿಂತ ಹಿರಿಯರಿದ್ದಾರೆ. ಪಕ್ಷದ ತೀರ್ಮಾನದಿಂದ ಬೊಮ್ಮಾಯಿ ಸಿಎಂ ಆಗಿದ್ದಾರೆ ಎಂದು ತಿಳಿಸಿದ್ದಾರೆ.

ನಮ್ಮ ಸಮಾಜ ಸ್ವಾಮೀಜಿಗಳು ಉಪಮುಖ್ಯಮಂತ್ರಿಯಾಗಲು ಹೇಳುತ್ತಿದ್ದಾರೆ. ನನಗೆ ಯಾವುದೇ ಹುದ್ದೆ ಕೊಟ್ಟರು ನಿಭಾಯಿಸುತ್ತೇನೆ. ನಾನು ಯಾವುದೇ ಡಿಮ್ಯಾಂಡ್ ಇಡುವುದಿಲ್ಲ. ತಮ್ಮ ಹಿರಿಯರು ತೆಗದುಕೊಂಡ ನಿರ್ಧಾರಕ್ಕೆ ನಾವು ಬದ್ಧ. ಸಚಿವ ಸ್ಥಾನದ ವಿಚಾರದಲ್ಲಿ ಹೈಕಮಾಂಡ್ ನಿರ್ಧರವೇ ಅಂತಿಮ. ಇನ್ನೇರಡು ವರ್ಷ ಒಳ್ಳೆ ಸರ್ಕಾರ ಕೊಡುತ್ತೇವೆ. ಸಿಎಂ ಬದಲಾವಣೆಯಾದರೆ ಸಾಕು ಸರ್ಕಾರ ಬೀಳುತ್ತೆ ಅಂತ ಕಾಂಗ್ರೆಸ್​ನ​ವರು ಹೇಳಿದ್ರು. ಎರಡು ವರ್ಷ ಒಳ್ಳೆ ಸರ್ಕಾರ ಕೊಡುತ್ತೇವೆ. ನನಗೆ ಇದೇ ಖಾತೆ ಬೇಕು ಎಂದು ನಾನು ಎಲ್ಲೂ ಹೇಳಿಲ್ಲ. ನನ ಜೀವನದಲ್ಲಿ ಯಾವುದೇ ಖಾತೆಗೆ ಅಪೇಕ್ಷೆ ಪಟ್ಟಿಲ್ಲ ಎಂದು ಈಶ್ವರಪ್ಪ ಹೇಳಿದರು.

ಬಿಜೆಪಿಯಲ್ಲಿ ಎಲ್ಲ ಗೊಂದಲಗಳು ನಿವಾರಣೆ ಆಗಿವೆ. ಮೂರೇ ದಿನದಲ್ಲಿ ಎಲ್ಲ ಪರಿಹಾರ ಆಗಿದೆ. ಪರಿಸ್ಥಿತಿ ಲಾಭ ಪಡೆಯಲು ಕಾಂಗ್ರೆಸ್ ಪ್ರಯತ್ನ ಮಾಡಿತ್ತು. ಈಗ ಅವರಿಗೆಲ್ಲ ಸಂಕಷ್ಟ ಶುರುವಾಗಿದೆ. ಬಿಜೆಪಿ ಕಾರ್ಯಕರ್ತರಿಗೆ ಸಂತೋಷ ಆಗಿದೆ. ಈ ಎಲ್ಲ ಬೆಳವಣಿಗೆಯಿಂದ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಹೈಕಮಾಂಡ್ ತುಂಬಾ ಸುಲಭವಾಗಿ ಎಲ್ಲ ಸಮಸ್ಯೆಗೆ ಪರಿಹಾರ ನೀಡಿದೆ. ಚುನಾವಣೆ ಬರಲಿ, ಇನ್ನೂ ಮಜಾ ಇದೆ ಎಂದು ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ

ಬೆಂಗಳೂರಿನ ಆರ್​​ಟಿ ನಗರದ ಈ ರಸ್ತೆಯಿಂದ ಮೂವರಿಗೆ ಕರ್ನಾಟಕದ ಮುಖ್ಯಮಂತ್ರಿ ಭಾಗ್ಯ!; ಏನಿದು ವಾಸ್ತು ಲೆಕ್ಕಾಚಾರ?

ನಿಮ್ಮ ಹಿರಿಯ ಪುತ್ರ ರಾಕೇಶ್​ಗೆ ಕುಡಿಯುವ ಅಭ್ಯಾಸವಿತ್ತು, ಇದೆಲ್ಲಾ ಅಪ್ಪನ ಗುಣವಾ ಸಿದ್ದರಾಮಯ್ಯ? ರಾಜ್ಯ ಬಿಜೆಪಿ ತಿರುಗೇಟು

(ks eshwarappa said those who were waiting for political gain were disappointed)

Published On - 12:19 pm, Thu, 29 July 21