ಕ್ರೈಸ್ತ ಧರ್ಮದ ಪಾದ್ರಿ ಮತ್ತು ತಂಡದಿಂದ ಧರ್ಮ ಪ್ರಚಾರ: ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತವರು ಕ್ಷೇತ್ರದಲ್ಲಿ ಘಟನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 28, 2023 | 10:36 PM

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತವರು ಕ್ಷೇತ್ರ ಶಿಕಾರಿಪುರ ತಾಲ್ಲೂಕು ಅಂಬಾರಗೊಪ್ಪ ಗ್ರಾಮದಲ್ಲಿ ಕ್ರೈಸ್ತ ಧರ್ಮದ ಪಾದ್ರಿ ಮತ್ತು ಅವರ 7 ಜನರ ತಂಡದಿಂದ ಧರ್ಮ ಪ್ರಚಾರ ಮಾಡಿರುವಂತಹ ಘಟನೆ ಕಂಡುಬಂದಿದೆ. ಬಂಜಾರ ಸಮಾಜದ ಮನೆಗೆ ಬಂದಿದ್ದ ಕ್ರೈಸ್ತ ಸಮಾಜದ ತಂಡ, ಈ ವೇಳೆ ಶಿಕಾರಿಪುರದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮತ್ತು ಮುಖಂಡರಿಂದ ವಿರೋಧ ವ್ಯಕ್ತಪಡಿಸಲಾಗಿದೆ.

ಕ್ರೈಸ್ತ ಧರ್ಮದ ಪಾದ್ರಿ ಮತ್ತು ತಂಡದಿಂದ ಧರ್ಮ ಪ್ರಚಾರ: ರಾಜ್ಯಾಧ್ಯಕ್ಷ  ಬಿವೈ ವಿಜಯೇಂದ್ರ ತವರು ಕ್ಷೇತ್ರದಲ್ಲಿ ಘಟನೆ
ಪಾದ್ರಿ ತಂಡ ಮತ್ತು ಗ್ರಾಮಸ್ಥರ, ಸಂಘಟನೆ ನಡುವೆ ಮಾತಿನ ಚಕಮಕಿ
Follow us on

ಶಿವಮೊಗ್ಗ, ಡಿಸೆಂಬರ್​ 28: ಕ್ರೈಸ್ತ (Christian) ಧರ್ಮದ ಪಾದ್ರಿ ಮತ್ತು ಅವರ 7 ಜನರ ತಂಡದಿಂದ ಧರ್ಮ ಪ್ರಚಾರ ಮಾಡಿರುವಂತಹ ಘಟನೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತವರು ಕ್ಷೇತ್ರ ಶಿಕಾರಿಪುರ ತಾಲ್ಲೂಕು ಅಂಬಾರಗೊಪ್ಪ ಗ್ರಾಮದಲ್ಲಿ ನಡೆದಿದೆ. ಬಂಜಾರ ಸಮಾಜದ ಮನೆಗೆ ಬಂದಿದ್ದ ಕ್ರೈಸ್ತ ಸಮಾಜದ ತಂಡ, ಈ ವೇಳೆ ಶಿಕಾರಿಪುರದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮತ್ತು ಮುಖಂಡರಿಂದ ವಿರೋಧ ವ್ಯಕ್ತಪಡಿಸಲಾಗಿದೆ.

ಮತಾಂತರಕ್ಕೆ ಬಂದಿದ್ದಾರೆಂದು ಗ್ರಾಮದ ತುಂಬ ಸುದ್ದಿ ಹಬ್ಬಿದೆ. ಪಾದ್ರಿ ತಂಡ ಜೋರಾಗಿ ಭಜನೆ ಮಾಡುತ್ತಿದ್ದು, ಘಟನಾ ಸ್ಥಳಕ್ಕೆ ಗ್ರಾಮಸ್ಥರು ದೌಡಾಯಿಸಿದ್ದಾರೆ. ಪಾದ್ರಿ ತಂಡ ಮತ್ತು ಗ್ರಾಮಸ್ಥರು, ಸಂಘಟನೆ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಪರಸ್ಪರ ನೂಕಾಟ, ತಳ್ಳಾಟ ನಡೆದಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ: ಚಿತ್ರದುರ್ಗ: ಪರಶುರಾಂಪುರ ಗ್ರಾಮದಲ್ಲಿ ಕುರುಬ ಬಾಲಕನ ಮತಾಂತರ, ದೂರು ಕೊಟ್ಟರೂ ಪೊಲೀಸರು ಮೌನ

ಗಲಾಟೆ ನಡೆಯುತ್ತಿದ್ದಂತೆ ಗ್ರಾಮಕ್ಕೆ ಶಿಕಾರಿಪುರ ಗ್ರಾಮಾಂತರ ಪೊಲೀಸರು ಆಗಮಿಸಿದ್ದು, ಪರಿಸ್ಥಿತಿ ತಿಳಿಗೊಳಿಸಿದರು. ಧರ್ಮ ಪ್ರಚಾರಕ್ಕೆ ಬಂದ ತಂಡವನ್ನು ಶಿಕಾರಿಪುರ ಠಾಣೆಗೆ ಪೊಲೀಸರು ಕರೆದೊಯ್ದಿದ್ದಾರೆ. ಠಾಣೆಯಲ್ಲಿ ಪರಸ್ಪರ ಹಲ್ಲೆ ಮಾಡಿದ್ದಾರೆಂದು ದೂರು ಪ್ರತಿದೂರು ದಾಖಲು ಮಾಡಲಾಗಿದೆ.

ಹಿಂದೂಗಳನ್ನು ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರ ಆರೋಪ

ಇದೀಗ ಹಿಂದೂಗಳನ್ನು ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರಾರ್ಥನೆ ನಡೆಯುತಿದ್ದ ಸ್ಥಳಕ್ಕೆ ಸ್ಥಳೀಯರು ಮುತ್ತಿಗೆ ಹಾಕಿ ತರಾಟೆ ತೆಗೆದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಿತ್ತಾಕುಲದಲ್ಲಿ ನಡೆದಿತ್ತು. ಚಿತ್ತಾಕುಲದ ಕ್ರಿಶ್ ಹಾಲ್​ನಲ್ಲಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರಗೊಂಡಿದ್ದ ಚಿತ್ತಾಕುಲದ ಶ್ಯಾಮ್ ನಾಯಕ್ ಎಂಬುವವರು ಪ್ರಾರ್ಥನೆ ಆಯೋಜನೆ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.