ಇರುವಕ್ಕಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅವ್ಯವಸ್ಥೆ; ಕಾಲ್ನಡಿಗೆ ಮೂಲಕ ಧರಣಿ ನಡೆಸುತ್ತಿರುವ ವಿದ್ಯಾರ್ಥಿಗಳು

| Updated By: ಆಯೇಷಾ ಬಾನು

Updated on: Nov 23, 2021 | 9:17 AM

ವಸತಿ ಶಾಲೆಯಲ್ಲಿ ಊಟ ಸೇರಿದಂತೆ ಯಾವುದೇ ಸೌಲಭ್ಯ ಸರಿಯಿಲ್ಲ. ಹೀಗಾಗಿ ಧರಣಿ ಹಾದಿ ಹಿಡಿದಿದ್ದೇವೆ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದು ಗ್ರಾಮಸ್ಥರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇರುವಕ್ಕಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅವ್ಯವಸ್ಥೆ; ಕಾಲ್ನಡಿಗೆ ಮೂಲಕ ಧರಣಿ ನಡೆಸುತ್ತಿರುವ ವಿದ್ಯಾರ್ಥಿಗಳು
ಕಾಲ್ನಡಿಗೆ ಮೂಲಕ ಧರಣಿ ನಡೆಸುತ್ತಿರುವ ವಿದ್ಯಾರ್ಥಿಗಳು
Follow us on

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಇರುವಕ್ಕಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಅವ್ಯವಸ್ಥೆಯ ಆಗರವಾಗಿದೆ ಎಂದು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲ್ನಡಿಗೆ ಮೂಲಕ ಧರಣಿ ನಡೆಸಿದ್ದಾರೆ. ವಸತಿ ಶಾಲೆ ಪ್ರಿನ್ಸಿಪಾಲ್ ಚಂದ್ರಪ್ಪ, ವಾರ್ಡನ್ ಲೋಕೇಶ್ ಹಾಗೂ ಸಿಬ್ಬಂದಿಗಳ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದು ಸ್ಥಳಕ್ಕೆ ಸಾಗರ ಬಿಇಒ ಬರುವಂತೆ ಪಟ್ಟು ಹಿಡಿದಿದ್ದಾರೆ.

ವಿದ್ಯಾರ್ಥಿನಿಯರು ಯಾವುದೇ ಸೌಲಭ್ಯ ಕೇಳಿದ್ರೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಸ್ಟೆಲ್ ವಾರ್ಡನ್ ವಿದ್ಯಾರ್ಥಿನಿಯರ ಮೇಲೆ ವಿನಾಕಾರಣ ದಬ್ಬಾಳಿಕೆ ಮಾಡುತ್ತಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಹೀಗಾಗಿ ಸಮಸ್ಯೆ ಯಾರ ಬಳಿ ಹೇಳಿದರೂ ಅದಕ್ಕೆ ಪರಿಹಾರ ಸಿಗಲ್ಲ ಎಂದು ಇಂದು ಬೆಳಗ್ಗೆಯೇ 100 ಕ್ಕೂ ಅಧಿಕ ವಿದ್ಯಾರ್ಥಿನಿಯರು ಹಾಸ್ಪೇಲ್ನಿಂದ ಹೊರಗೆ ಬಂದು ಕಾಲ್ನಡಿಗೆ ಮೂಲಕ ಹಾಸ್ಪೇಲ್ ನಿಂದ ಸುಮಾರು 2 ಕಿ.ಮೀ ನಡೆದು ಪ್ರತಿಭಟನೆ ನಡೆಸಿದ್ದಾರೆ.

ಯಡೆಹಳ್ಳಿ ಬಳಿ ಗ್ರಾಮಸ್ಥರು ವಿದ್ಯಾರ್ಥಿನಿಯರನ್ನು ತಡೆದು ಸಮಾಧಾನ ಪಡಿಸಿದ್ರು

ಈ ವೇಳೆ ಸಾಗರ ತಾಲೂಕಿನ ಯಡೆಹಳ್ಳಿ ಬಳಿ ಗ್ರಾಮಸ್ಥರು ವಿದ್ಯಾರ್ಥಿನಿಯರನ್ನು ತಡೆದು ಸಮಾಧಾನ ಪಡಿಸಿದ್ದು ಈ ವೇಳೆ ವಸತಿ ಶಾಲೆಯಲ್ಲಿ ಊಟ ಸೇರಿದಂತೆ ಯಾವುದೇ ಸೌಲಭ್ಯ ಸರಿಯಿಲ್ಲ. ಹೀಗಾಗಿ ಧರಣಿ ಹಾದಿ ಹಿಡಿದಿದ್ದೇವೆ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದು ಗ್ರಾಮಸ್ಥರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ವಸತಿ ಶಾಲೆ ಪ್ರಿನ್ಸಿಪಾಲ್ ವಿರುದ್ಧ ವಿದ್ಯಾರ್ಥಿನಿಯರು ಆಕ್ರೋಶ ಹೊರ ಹಾಕಿದ್ದು ಸ್ಥಳಕ್ಕೆ ಸಾಗರ ಬಿಇಒ ಬರುವಂತೆ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: Beauty Tips: ದಪ್ಪಗಿದ್ದರೇನಂತೆ ನಿಮ್ಮ ಆಯ್ಕೆಯಲ್ಲಿ ಬದಲಾವಣೆ ಇರಲಿ? ಈ ಸಲಹೆಗಳು ನಿಮ್ಮನ್ನು ಸುಂದರವಾಗಿಸುತ್ತದೆ

Published On - 9:01 am, Tue, 23 November 21