ಶಿವಮೊಗ್ಗದಲ್ಲಿ ನಿಗೂಢ ವಸ್ತು ಸ್ಫೋಟ ಕೇಸ್​: ಘಟನೆಯಲ್ಲಿ ಗಾಯಗೊಂಡ ವ್ಯಕ್ತಿ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು 

| Updated By: ಗಂಗಾಧರ​ ಬ. ಸಾಬೋಜಿ

Updated on: Feb 18, 2024 | 7:34 PM

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ಬಸ್ ನಿಲ್ದಾಣದಲ್ಲಿ ಬ್ಯಾಗ್​​​​​ನಲ್ಲಿದ್ದ ನಿಗೂಢ ವಸ್ತು ಸ್ಪೋಟಗೊಂಡಿರುವಂತಹ ಘಟನೆ ನಡೆದಿದೆ. ನನ್ನ ಅಂಗಡಿಗೆ ಇಬ್ಬರು ಬಂದು ರೂ 800 ಕೊಟ್ಟು ಎರಡು ಬೆಡ್ ಶಿಟ್ ಖರೀದಿಸಿದವರು ಎರಡು ಚಿಕ್ಕ ಕೈಚೀಲ ಇಟ್ಟಿದ್ದರು. ಆ ಎರಡು ಚೀಲದಲ್ಲಿ ಏನಿತ್ತು ಗೊತ್ತಿಲ್ಲ. ಅದರಿಂದಲೇ ಸ್ಪೋಟವಾಗಿದೆ ಎಂದು ಘಟನೆಯಲ್ಲಿ ಗಾಯಗೊಂಡ ವ್ಯಾಪಾರಸ್ಥ ಆಂಥೋನಿ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ನಿಗೂಢ ವಸ್ತು ಸ್ಫೋಟ ಕೇಸ್​: ಘಟನೆಯಲ್ಲಿ ಗಾಯಗೊಂಡ ವ್ಯಕ್ತಿ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು 
ಗಾಯಗೊಂಡ ವ್ಯಕ್ತಿ, ಘಟನೆ ನಡೆದ ಸ್ಥಳ
Follow us on

ಶಿವಮೊಗ್ಗ, ಫೆಬ್ರವರಿ 18: ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಗೂಢ ವಸ್ತು ಸ್ಪೋಟ (Blast) ಗೊಂಡಿರುವಂತಹ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ವ್ಯಾಪಾರಸ್ಥ ಆಂಥೋನಿ ಪ್ರತಿಕ್ರಿಯಿಸಿದ್ದು, ನನ್ನ ಅಂಗಡಿಗೆ ಇಬ್ಬರು ಬಂದು ರೂ 800 ಕೊಟ್ಟು ಎರಡು ಬೆಡ್ ಶಿಟ್ ಖರೀದಿಸಿದರು. ಆ ಬೆಡ್ ಶಿಟ್ ನನ್ನ ಅಂಗಡಿಯಲ್ಲಿ ಒಂದು ಕಡೆ ಇಟ್ಟುಕೊಳ್ಳಲು ಹೇಳಿ ಸಂತೆಗೆ ಹೋದರು. ಸ್ವಲ್ಪ ಹೊತ್ತು ಬಿಟ್ಟು ಇನ್ನು ಇಬ್ಬರ ಜೊತೆಗೆ ಬಂದು ಇನ್ನು ಎರಡು ಚಿಕ್ಕ ಕೈಚೀಲ ಇಟ್ಟರು. ಆ ಎರಡು ಚೀಲದಲ್ಲಿ ಏನಿತ್ತು ಗೊತ್ತಿಲ್ಲ. ಅದರಿಂದಲೇ ಸ್ಪೋಟವಾಗಿದೆ. ಇವರು ಯಾರು ಕೂಡ ನನಗೆ ಮೊದಲು ಪರಿಚಯ ಇರಲಿಲ್ಲ ಎಂದು ಹೇಳಿದ್ದಾರೆ.

ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು 

ಘಟನೆ ಬಗ್ಗೆ ಪ್ರತ್ಯಕ್ಷದರ್ಶಿ ಟಿವಿ9 ಜೊತೆ ಮಾತನಾಡಿದ್ದು, ನಾವು ಅಲ್ಲಿ ನಿಂತಿದ್ದೆವು. ಶಿರಾಳಕೊಪ್ಪ ಬಸ್ ನಿಲ್ದಾಣದ ಬಳಿ ಜೋರಾದ ಶಬ್ಧ ಬಂತು. ಶಬ್ಧ ಬಂದ ಜಾಗದಲ್ಲಿ ಸ್ಟವ್ ಮೇಲೆ ಹಾರಿತ್ತು. ನಾವು ಓಡಿ ಹೋಗಿ ನೋಡಿದೆವು. ಆಗ ಬೆಡ್ ಶೀಟ್ ಮಾರುವವರಿಗೆ ಗಾಯಗಳಾಗಿತ್ತು. ಅವರಿಗೆ ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರು. ಜೋರಾಗಿ ಶಬ್ಧ ಬಂದಾಗ ಎಲ್ಲರೂ ಭಯಭೀತರಾಗಿದ್ದರು. ಸ್ಫೋಟಗೊಂಡ ಜಾಗದಲ್ಲಿ ಜನರು ಸೇರಿದ್ದರು. ಯಾವುದೇ ಹೆಚ್ಚು ಅನಾಹುತ ನಡೆದಿಲ್ಲ. ಅಷ್ಟರಲ್ಲಿ ಪೊಲೀಸರು ಬಂದು ಅಲ್ಲಿದ್ದ ಜನರನ್ನು ಕಳುಹಿಸಿದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಬ್ಯಾಗ್​​​​​ನಲ್ಲಿದ್ದ ವಸ್ತು ಸ್ಫೋಟ: ಹಲವರಿಗೆ ಗಾಯ, ಪ್ರಕರಣ ದಾಖಲು

ಸ್ಪೋಟದ ಸದ್ದಿಗೆ ಸಾರ್ವಜನಿಕರು ಅಂಗಡಿ, ಮುಗ್ಗಟ್ಟು ಬಿಟ್ಟು ಹೊರಗೆ ಓಡೋಡಿ ಬಂದರು. ಸಾವಿರಾರು ಜನರು ಜಮಾಯಿಸಿದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ಥವಾಗಿತ್ತು. ನಂತರ ಸಬ್ ಇನ್ಸ್ ಪೆಕ್ಟರ್ ರಮೇಶ್ ಆಗಮಿಸಿ ಜನರನ್ನು ಚದುರಿಸಿದರು.

ಪೋಲಿಸ್ ಬಾಂಬ್ ಪತ್ತೆದಳ ಹಾಗೂ ಶ್ವಾನ ದಳದ ಸಿಬ್ಬಂದಿ ಸಂಜೆ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸ್ಪೋಟಕ್ಕೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸಿದರು. ಸ್ಪೋಟದ ತೀವ್ರತೆಗೆ ಆನವಟ್ಟಿ ರಸ್ತೆ ಕಡೆ ಕಾಣುತ್ತಿದ್ದ ಟ್ರಾಫಿಕ್ ಲೈಟ್ ವಿರುದ್ಧ ದಿಕ್ಕಿಗೆ ತಿರುಗಿತ್ತು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಕಾರ್ ಶೋ ರೂಂಗೆ ಬೆಂಕಿ: 2 ಕೋಟಿ ರೂ. ನಷ್ಟ, ಸುಟ್ಟು ಕರಕಲಾದ ಕಾರ್​ಗಳು

ಸ್ಪೋಟದ ಪರಿಣಾಮ ಆಂಥೋನಿ ಸೇರಿ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಆದರೆ ಇನ್ನೊಬ್ಬರ ಹೆಸರು ತಿಳಿದು ಬಂದಿಲ್ಲ. ಆಂಥೋನಿ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ ಆಸ್ಪತ್ರೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್ ಗಾಯಾಳುವನ್ನು ಭೇಟಿ ಮಾಡಿ ಮಾಹಿತಿ ಪಡೆದರು.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್​

ಬ್ಯಾಗ್​​​​ ಸ್ಫೋಟ ಪ್ರಕರಣ ಬಗ್ಗೆ ಹಾವೇರಿಯಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್​ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:33 pm, Sun, 18 February 24