ಶಿವಮೊಗ್ಗ: ತುಂಗಾ ತಟದಲ್ಲಿ ಟ್ರಯಲ್ ಬ್ಲಾಸ್ಟ್ ಪ್ರಕರಣ ಮತ್ತು ಐಎಸ್ಐಎಸ್ (ISIS) ಉಗ್ರಗಾಮಿ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆಂದು ಎನ್‌ಐಎ (NIA) ಅಧಿಕಾರಿಗಳು ಮತ್ತಿಬ್ಬರು ಶಂಕಿತ ಉಗ್ರಗಾಮಿಗಳನ್ನು ಬಂಧಿಸಿದ್ದಾರೆ. ದ.ಕನ್ನಡ ಜಿಲ್ಲೆ ಪೆರ್ಮಣ್ಣೂರಿನ ಶಂಕಿತ ಉಗ್ರ ಮಜಿನ್ ಅಬ್ದುಲ್ ರಹಮಾನ್ ಮತ್ತು ದಾವಣಗೆರೆ ಜಿಲ್ಲೆ ಹೊನ್ನಾಳಿ ಮೂಲದ ನದೀಂ ಅಹ್ಮದ್ ಕೆಎ ಬಂಧಿತರು. ಬಂಧಿತ ಇಬ್ಬರು ಆರೋಪಿಗಳು ಮಾಜ್ ಮುನೀರ್, ಸೈಯದ್ ಯಾಸೀನ್ ಜೊತೆ ನಿರಂತರ ಸಂಪರ್ಕ ಹೊಂದಿದ್ದರು. ಮಾಜ್ ಮುನೀರ್, ಸೈಯದ್ ಯಾಸೀನ್ ಈ ಇಬ್ಬರನ್ನು ಉಗ್ರ ಚಟುವಟಿಕೆಗಳಿಗೆ ನೇಮಿಸಿಕೊಂಡಿದ್ದರು. ಈಗಾಗಲೇ ಎನ್‌ಐಎ ಇವರಿಬ್ಬರು ಸೇರಿ ನಾಲ್ವರನ್ನು ಬಂಧಿಸಿದೆ. ಕಳೆದ ಕೆಲ ದಿನಗಳ ಹಿಂದೆ ಎನ್‌ಐಎ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಳಿ ಮಾಡಿ ಶಂಕಿತ ಉಗ್ರರನ್ನು ವಶಕ್ಕೆ ಪಡೆದಿತ್ತು. ಈಗ ಮತ್ತಿಬ್ಬರನ್ನು ಬಂಧಿಸಿದೆ.
NIA arrested another 2 terror operatives – Mazin Abdul Rahman and Nadeem Ahmed KA today – in connection with Shivamogga ISIS conspiracy case: National Investigation Agency (NIA)
— ANI (@ANI) January 11, 2023
ಇತ್ತೀಚೆಗೆ ಮಂಗಳೂರಿನಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಫೋಟ ಮತ್ತು ಶಿವಮೊಗ್ಗ ತುಂಗಾತೀರದ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ಎನ್‌ಐಎ ಚುರುಕುಗೊಳಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ಜನವರಿ 05 ರಂದು ರಾಜ್ಯದ ಶಿವಮೊಗ್ಗ, ಬೆಂಗಳೂರು, ದಾವಣಗೆರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿ 7 ಕಡೆ ದಾಳಿ ಮಾಡಿತ್ತು. ಈ ವೇಳೆ ತುಂಗಾ ತೀರದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್‌ನಲ್ಲಿ ಐಸಿಸ್ ಒಳಸಂಚು ಇರುವದು ಪತ್ತೆಯಾಗಿತ್ತು.
ಇದನ್ನೂ ಓದಿ: NIA ಭರ್ಜರಿ ಕಾರ್ಯಾಚರಣೆ: ಬ್ರಹ್ಮಾವರ ಕಾಂಗ್ರೆಸ್ ಮುಖಂಡನ ಪುತ್ರ, ಶಂಕಿತ ಉಗ್ರನ ಸ್ನೇಹಿತ ವಶಕ್ಕೆ
ಈ ದಾಳಿ ವೇಳೆ ಎನ್‌ಐಎ ಐಸಿಸ್ನ ಸಕ್ರಿಯ ಸದಸ್ಯರಾಗಿರುವ ಶಿವಮೊಗ್ಗದ ಮಂಜುನಾಥ ಬಡಾವಣೆಯ ಉಜೇರ್ ಫರ್ಹಾನ್ ಬೇಗ್, ಉಡುಪಿಯ ರೇಶಾನ್ ತಾಜೂದ್ದೀನ್ ಶೇಖ್ ಮೆನಗಳ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದರು. ಶಂಕಿತ ಉಗ್ರ ಮಾಜ್ ವಿಚಾರಣೆ ವೇಳೆ ಇಬ್ಬರ ಹೆಸರು ಬಾಯಿಬಿಟ್ಟಿದ್ದನು. ಈ ಹಿನ್ನೆಲೆ ಆರೋಪಿ ಮಾಜ್‌ಗೆ ಸಹಪಾಠಿಯಾಗಿದ್ದ ರೇಶಾನ್ ತಾಜೂದ್ದೀನ್ನನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಮತ್ತೋರ್ವ ಶಂಕಿತ ಉಗ್ರನ ಬಂಧನ: ಎನ್ಐಎಯಿಂದ ವಿಚಾರಣೆ
ಇನ್ನೂ ದಾಳಿ ವೇಳೆ ಡಿಜಿಟಲ್ ಡಿವೈಸಸ್ ಮತ್ತು ಹಲವು ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇವರು ಐಸಿಸ್ ಹ್ಯಾಂಡ್ಲರ್ಸ್‌ನಿಂದ ಕ್ರಿಪ್ಟೋ ವ್ಯಾಲೆಟ್‌ಗೆ ಹಣ ಪಡೆಯುತ್ತಿದ್ದರು. ಆರೋಪಿಗಳು ಲಿಕ್ಕರ್ ಶಾಪ್, ಗೋದಾಮು, ಟ್ರಾನ್ಸ್‌ಫಾರ್ಮರ್‌ಗೆ ಬೆಂಕಿಹಚ್ಚಲು ಸಂಚು ರೂಪಿಸಿದ್ದರು ಎನ್ನಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:22 pm, Wed, 11 January 23