ಮುಖ್ಯಮಂತ್ರಿ ಯಡಿಯೂರಪ್ಪ ತವರು ಶಿವಮೊಗ್ಗದಲ್ಲಿ ಬೆಡ್ ಇಲ್ಲದೇ ನಾನ್​ ಕೊವಿಡ್​ ರೋಗಿ ಸಾವು

ಶಿಕಾರಿಪುರ ತಾಲೂಕಿನ ಇಟ್ಟೇಗೆಹಳ್ಳಿ ಗ್ರಾಮದ ವ್ಯಕ್ತಿ ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದರು. ಬೆಡ್ ಇಲ್ಲದೇ, ಖಾಸಗಿ ಆಸ್ಪತ್ರೆಗೆ ರೆಫರ್ ಮಾಡುವ ವೇಳೆ ನರಳಾಡಿ ರಾಜಾ ನಾಯ್ಕ್ ಪ್ರಾಣ ಬಿಟ್ಟಿದ್ದಾರೆ. ರಾಜಾ ನಾಯ್ಕ್ ಚಿಕಿತ್ಸೆಗಾಗಿ ಕುಟುಂಬದವರು ಆಸ್ಪತ್ರೆ ಆವರಣದಲ್ಲಿ ಮೂರು ಗಂಟೆ ಕಾಲ ಪರದಾಡಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗ: ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ನಾನ್​ ಕೊವಿಡ್​ ರೋಗಿಯೊಬ್ಬರು ಮೃತಪಟ್ಟಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಬೆಡ್​ ಸಿಗದೆ ರಾಜಾ ನಾಯ್ಕ್​​ (54) ಎಂಬುವವರು ಅಸುನೀಗಿದ್ದಾರೆ. ರಾಜಾ ನಾಯ್ಕ್, ಶಿಕಾರಿಪುರ ತಾಲೂಕಿನ ಇಟ್ಟೇಗೆಹಳ್ಳಿ ನಿವಾಸಿ.

ರಾಜಾ ನಾಯ್ಕ್​ ಜಾಂಡೀಸ್​ನಿಂದ ಬಳಲುತ್ತಿದ್ದರು. ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಅವಾಂತರದಿಂದ ರಾಜಾ ಅಸುನೀಗಿದ್ದಾರೆ ಎಂದು ಮೆಗ್ಗಾನ್ ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕಾರಿಪುರ ತಾಲೂಕಿನ ಇಟ್ಟೇಗೆಹಳ್ಳಿ ಗ್ರಾಮದ ವ್ಯಕ್ತಿ ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದರು. ಬೆಡ್ ಇಲ್ಲದೇ, ಖಾಸಗಿ ಆಸ್ಪತ್ರೆಗೆ ರೆಫರ್ ಮಾಡುವ ವೇಳೆ ನರಳಾಡಿ ರಾಜಾ ನಾಯ್ಕ್ ಪ್ರಾಣ ಬಿಟ್ಟಿದ್ದಾರೆ. ರಾಜಾ ನಾಯ್ಕ್ ಚಿಕಿತ್ಸೆಗಾಗಿ ಕುಟುಂಬದವರು ಆಸ್ಪತ್ರೆ ಆವರಣದಲ್ಲಿ ಮೂರು ಗಂಟೆ ಕಾಲ ಪರದಾಡಿದ್ದಾರೆ ಎನ್ನಲಾಗಿದೆ.

(non covid patient died in bs yediyurappa native shivamogga due to non availability of treatment bed)