ರಸ್ತೆ ವಿಚಾರವಾಗಿ ಜಗಳ; ಗೃಹ ಸಚಿವರ ತವರಲ್ಲಿ ಹೆಚ್ಚಾದ ಕ್ರೈಂ ರೇಟ್, 7 ಜನರಿಂದ ವ್ಯಕ್ತಿಯ ಮೇಲೆ ಹಲ್ಲೆ
ಚಿಕ್ಕಮ್ಮ ಪ್ರೇಮಾಳ ಮಗಳು ನಿಶ್ಚಿತಾ ಎಂಬುವವಳು ತನ್ನ ಪ್ರಿಯಕರ ಪ್ರತಾಪ್ಗೆ ಈ ವಿಷಯ ತಿಳಿಸಿದ್ದಾಳೆ. ಈ ನಡುವೆ ಜ. 8 ರಂದು ರಾತ್ರಿ ಪ್ರತಾಪ್ ಮುರಳಿಧರ್ಗೆ ಸ್ನೇಹಿತರ ಮೂಲಕ ಕಾಲ್ ಮಾಡಿಸಿ ಕರೆಸಿಕೊಂಡಿದ್ದಾನೆ. ಈ ವೇಳೆ ಪ್ರತಾಪ್ ಮತ್ತು ಆತನ 6 ಜನ ಸ್ನೇಹಿತರು ಮುರಳೀಧರ್ಗೆ ಮನಬಂದಂತೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಶಿವಮೊಗ್ಗ: ಗೃಹ ಸಚಿವರ ತವರಲ್ಲೇ ಕ್ರೈಂ ರೇಟ್ ಹೆಚ್ಚಾಗ್ತಾ ಇದೆ. ಸಣ್ಣ ಪುಟ್ಟ ವಿಚಾರಕ್ಕೂ ಕೊಲೆ, ಹಲ್ಲೆಗಳು ನಡೆಯುತ್ತಿವೆ. ನ್ಯಾಯ ಕೇಳಿದ ಯುವಕನೋರ್ವನಿಗೆ ಮಾರಣಾಂತಿಕ ಅಟ್ಯಾಕ್ ಆಗಿದೆ. ಅರಗ ಜ್ಞಾನೇಂದ್ರ ಅವರ ತವರಲ್ಲೇ ರೌಡಿಸಂ ತಾಂಡವವಾಡ್ತಿದೆ.
ಗೃಹ ಸಚಿವರ ಅರಗ ಜ್ಞಾನೇಂದ್ರ ಅವರ ತವರು ಕ್ಷೇತ್ರ ತೀರ್ಥಹಳ್ಳಿ ತಾಲೂಕಿನ ಮಲ್ಲೇಸರ ಗ್ರಾಮದಲ್ಲಿ ಹಳ್ಳಿಯ ರಸ್ತೆ ವಿಚಾರವಾಗಿ ಒಂದು ಗಲಾಟೆ ನಡೆದಿದೆ. ಮುರಳೀಧರ್ ತನ್ನ ಚಿಕ್ಕಮ್ಮ ಪ್ರೇಮಾ ಮತ್ತು ಕುಟುಂಬಸ್ಥರ ನಡುವೆ ರಸ್ತೆಗೆ ಹಾಕಿರುವ ಬೇಲಿ ವಿಚಾರವಾಗಿ ಗಲಾಟೆ ಆಗಿತ್ತು. ನಿತ್ಯ ರಸ್ತೆಯಲ್ಲಿ ಓಡಾಡುವುದಕ್ಕೆ ಮುರಳಿಧರ್ ಮನೆ ಮತ್ತು ಜಮೀನಿಗೆ ಹೋಗುವುದಕ್ಕೆ ಸಮಸ್ಯೆ ಆಗುತ್ತಿತ್ತು. ಇದರಿಂದ ಪದೇ ಪದೇ ಮನಸ್ತಾಪ, ಜಗಳಗಳಾಗಿದ್ದವು. ಈ ಸಂಬಂಧ ಮುರಳಿಧರ್ ಗ್ರಾಮ ಪಂಚಾಯತಿ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿದ್ರು.
ಚಿಕ್ಕಮ್ಮ ಪ್ರೇಮಾಳ ಮಗಳು ನಿಶ್ಚಿತಾ ಎಂಬುವವಳು ತನ್ನ ಪ್ರಿಯಕರ ಪ್ರತಾಪ್ಗೆ ಈ ವಿಷಯ ತಿಳಿಸಿದ್ದಾಳೆ. ಈ ನಡುವೆ ಜ. 8 ರಂದು ರಾತ್ರಿ ಪ್ರತಾಪ್ ಮುರಳಿಧರ್ಗೆ ಸ್ನೇಹಿತರ ಮೂಲಕ ಕಾಲ್ ಮಾಡಿಸಿ ಕರೆಸಿಕೊಂಡಿದ್ದಾನೆ. ಈ ವೇಳೆ ಪ್ರತಾಪ್ ಮತ್ತು ಆತನ 6 ಜನ ಸ್ನೇಹಿತರು ಮುರಳೀಧರ್ಗೆ ಮನಬಂದಂತೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಸದ್ಯ ಗಂಭೀರವಾಗಿ ಗಾಯಗೊಂಡಿರುವ ಮುರಳಿಧರ್ನನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾರಣಾಂತಿಕ ಹಲ್ಲೆಯ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಿಯಕರ ಪ್ರತಾಪ್ ಮತ್ತು ಆತನ ಸ್ನೇಹಿತರಾದ ಮನೋಜ್, ಪ್ರವೀಣ್, ಸಂಜಯ್, ಆದರ್ಶ್ ಮೇಲೆ ಎಫ್ಐಆರ್ ದಾಖಲಾಗಿದೆ. ಗೃಹ ಸಚಿವರ ತವರು ಕ್ಷೇತ್ರದಲ್ಲೇ ಹೀಗೆ ಓಪನ್ ರೌಡಿಸಂ ನಡೆಯುತ್ತಿದೆ. ಇದು ಪೊಲೀಸರಿಗೆ ಕರ್ತವ್ಯದ ಮೇಲಿರುವ ಇಚ್ಛಾಶಕ್ತಿಯ ಕೊರತೆ ಎಂದು ಎದ್ದು ಕಾಣುತ್ತಿದೆ.
ವರದಿ:ಬಸವರಾಜ್ ಯರಗಣವಿ, ಟಿವಿ9, ಶಿವಮೊಗ್ಗ