ಶಿವಮೊಗ್ಗ: ಚಿನ್ನಾಭರಣ ರಿಪೇರಿಗೆ ಬಂದಿದ್ದ ವ್ಯಕ್ತಿಯ ಬ್ಯಾಗ್​ ಕದ್ದೊಯ್ದ ಖದೀಮರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 14, 2023 | 10:16 AM

ಜಿಲ್ಲೆಯ ನಾಗರಾಜ್​ ರಾಯ್ಕರ್​ ಎಂಬಾತ ಚಿನ್ನಾಭರಣ ರಿಪೇರಿ ಮಾಡಿಸಲು ತಂದಿದ್ದ ಬಂಗಾರ ಜೊತೆಗೆ 2.80 ಲಕ್ಷ ಹಣವಿರುವ ಬ್ಯಾಗ್​ನ್ನು ಕಳ್ಳತನ ಮಾಡಿಕೊಂಡ ಹೋಗಿದ್ದಾರೆ.

ಶಿವಮೊಗ್ಗ: ಚಿನ್ನಾಭರಣ ರಿಪೇರಿಗೆ ಬಂದಿದ್ದ ವ್ಯಕ್ತಿಯ ಬ್ಯಾಗ್​ ಕದ್ದೊಯ್ದ ಖದೀಮರು
ಸಾಂದರ್ಭಿಕ ಚಿತ್ರ
Follow us on

ಶಿವಮೊಗ್ಗ : ಚಿನ್ನಾಭರಣದ ಪಾಲಿಶ್ ಮತ್ತು ರಿಪೇರಿ ಮಾಡಿಸಲು ಬಂದಿದ್ದ ವ್ಯಕ್ಯಿಯ ಬ್ಯಾಗ್​ನ್ನ ಎಗರಿಸಿ ಒಟ್ಟು 2 ಲಕ್ಷ 80 ಸಾವಿರ ರೂ. ಹಣ ಮತ್ತು ಬಂಗಾರದ ಆಭರಣವನ್ನ ಕದ್ದುಕೊಂಡು‌ ಹೋಗಿರುವ ಘಟನೆ ನಡೆದಿದೆ. ಈ ಕುರಿತು  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಕಳ್ಳರಿಗಾಗಿ ಹುಡುಕಾಟ ಶುರುವಾಗಿದೆ.

ಭದ್ರಾವತಿಯ ಆನ್ವೇರಿಯಿಂದ ಶಿವಮೊಗ್ಗಕ್ಕೆ ಹೊರಟಿದ್ದ ನಾಗರಾಜ್ ರಾಯ್ಕರ್ ಒಂದು ಪರ್ಸ್​ನಲ್ಲಿ 49 ಗ್ರಾಂನ ಕಿವಿ ಜುಮ್ಕಿ, ಜಾಲರಿ, ಚಿನ್ನದ ಸರ, ಬುಗುಡಿ ಸೇರಿದಂತೆ ಮೊದಲಾದ ಚಿನ್ನಾಭರಣಗಳು ಮತ್ತು ಇನ್ನೊಂದು ಪರ್ಸ್ ನಲ್ಲಿ2. 80 ಲಕ್ಷ ರೂ ಹಣ ಇಟ್ಟುಕೊಂಡು ಅವೆರಡನ್ನೂ ಒಂದು ಬ್ಯಾಗ್​ನಲ್ಲಿ ಇಟ್ಟುಕೊಂಡು ಆನ್ವೇರಿಯಿಂದ ಕೈಮರದ ಬಳಿ ಬಸ್​ನಲ್ಲಿ ಬಂದಿದ್ದಾರೆ. ನಂತರ ಕೈಮರದಿಂದ ಕೆಎಸ್ ಆರ್ ಟಿಸಿ ಬಸ್​ನಲ್ಲಿ ಗುರುಪುರಕ್ಕೆ ಬಂದು ಗುರುಪುರದಲ್ಲಿ ಬಸ್ ಇಳಿದು ಬ್ಯಾಗ್ ನೋಡಿದಾಗ ಬ್ಯಾಗ್​ನಲ್ಲಿದ್ದ ಎರಡು ಪರ್ಸ್​ಗಳು ಕಾಣೆಯಾಗಿದ್ದವು. ತಕ್ಷಣವೇ ರಾಯ್ಕರ್ ಆನ್ವೇರಿಗೆ ಹೋಗಿ ಪರಿಶೀಲಿಸಿದಾಗ ಪರ್ಸ್​ಗಳು ಕಾಣೆಯಾಗಿವೆ.

ಎಲ್ಲೂ ಸಿಗದ ಕಾರಣ ಜ.12 ರಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಚಿನ್ನಾಭರಣದ‌ ಕಳವು ಪ್ರಕರಣವನ್ನ ದಾಖಲಿಸಿದ್ದು, ಆನ್ವೇರಿಯಿಂದ ಕೈಮರ ಮತ್ತು ಕೈಮರದಿಂದ ಗುರುಪುರಕ್ಕೆ ಬಂದಿಳಿದ ಎರಡು ಬಸ್ ಗಳು ರಶ್ ಇದ್ದವು ಎಂದು ನಾಗರಾಜ್ ರಾಯ್ಕರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:Mysuru: ಪರಿಚಯದವರ ಮನೆಯಲ್ಲಿ ಕಳ್ಳತನ ಮೂವರು ಮಹಿಳೆಯರ ಬಂಧನ

ಹೀಗೆ ಪ್ರಯಾಣಿಕನ ಬಳಿ ಇರುವ ಬ್ಯಾಗ್ ಗಮನಿಸಿರುವ ಕಳ್ಳರು ತಮ್ಮ ಕೈಚಳ ತೋರಿದ್ದಾರೆ.. ಪ್ರಯಾಣಿಕರಿಗೆ ಯಾವುದೇ ಸಂಶಯ ಬರದಂತೆ ತುಂಬಾ ಚಾಣಾಕ್ಷನದಿಂದ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಸೇರಿದಂತೆ ಇತರೆ ವಸ್ತುಗಳನ್ನು ಎಗರಿಸಿಕೊಂಡು ಹೋಗಿದ್ದಾರೆ. ಗೃಹಸಚಿವರ ತವರು ಜಿಲ್ಲೆಯಲ್ಲಿ ಕಳ್ಳರ ಹಾವಳಿಗೆ ಜನರು ಕಂಗಾಲಾಗಿದ್ದಾರೆ.

ವರದಿ: ಬಸವರಾಜ್ ಯರಗಣವಿ ಟಿವಿ9 ಶಿವಮೊಗ್ಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ