Mysuru: ಪರಿಚಯದವರ ಮನೆಯಲ್ಲಿ ಕಳ್ಳತನ ಮೂವರು ಮಹಿಳೆಯರ ಬಂಧನ
ಮೈಸೂರಿನ ಕುವೆಂಪು ನಗರದ ಎ & ಬಿ ಬ್ಲಾಕ್ನ ನಿವಾಸಿ ಪೂರ್ಣಿಮಾ ಮನೆಯಲ್ಲಿ ಕಳ್ಳತನ ಮಾಡಿದ ಮೂವರು ಮಹಿಳೆಯರನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ.
ಮೈಸೂರು: ಇಲ್ಲಿನ ಕುವೆಂಫು ನಗರದ ಎ & ಬಿ ಬ್ಲಾಕ್ನ ನಿವಾಸಿ ಪೂರ್ಣಿಮಾ ಎನ್ನುವವರ ಮನೆಯಲ್ಲಿ ನಕಲಿ ಕೀ ಮಾಡಿಸಿ ಡಿಸೆಂಬರ್ 31 ರಂದು 7.5 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ 12 ಸಾವಿರ ರೂ. ಕಳ್ಳತನ ಮಾಡಿದ್ದರು. ಈ ಬಗ್ಗೆ ಪೂರ್ಣಿಮಾ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರ ದೂರಿನನ್ವಯ ಪೊಲೀಸರು ಕಳ್ಳರ ಕಾರ್ಯಾಚರಣೆಗೆ ಇಳಿದಿದ್ದು ಇದೀಗ ಕಳ್ಳರು ಕಂಬಿಯ ಹಿಂದೆ ಹೋಗಿದ್ದಾರೆ.
ಪೂರ್ಣಿಮಾ ಮನೆಗೆ ಬರುತ್ತಿದ್ದ ಆರೋಪಿ ಅಮೃತ ಪೂರ್ಣಿಮಾ ಅವರಿಗೆ ಡ್ರೈವಿಂಗ್ ಹೇಳಿಕೊಡುತ್ತಿದ್ದರು. ಈ ವೇಳೆ ಮನೆಯಲ್ಲಿ ಚಿನ್ನಾಭರಣ ನಗದು ಇರುವ ಬಗ್ಗೆ ಗೊತ್ತಾಗಿದ್ದು, ಆರೋಪಿ ಅಮೃತ ಜೊತೆಗೆ ಅಶ್ವಿನಿ, ಶೃತಿ ಎಂಬ ಮೂವರು ಮಹಿಳೆಯರು ಸೇರಿ ಈ ಕೃತ್ಯವನ್ನ ಮಾಡಿದ್ದಾರೆ. ಇನ್ನು ಕಳ್ಳತನಕ್ಕೆ ಬಳಸಿದ್ದ ಸ್ಕೂಟರ್ ಹಾಗೂ ಮೂರು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಕಲಬುರಗಿ ನಗರದಲ್ಲಿ ಅನಧಿಕೃತ ನೀರು ಮಾರಾಟ: 18 ವಾಹನಗಳ ಜಪ್ತಿ
ಕಲಬುರಗಿ: ನಗರದಲ್ಲಿ ಅನಧಿಕೃತವಾಗಿ ನೀರು ಘಟಕ ಆರಂಭಿಸಿ, ಐಎಸ್ಐ ಪರವಾನಗಿ ಇಲ್ಲದೇ ಶುದ್ದ ಕುಡಿಯುವ ನೀರು ಎಂದು ಹೇಳಿ ಕ್ಯಾನ್ನಲ್ಲಿ ಮಾರಾಟ ಮಾಡುತ್ತಿದ್ದವರನ್ನ ಇದೀಗ ಕಲಬುರಗಿ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿಗಳು ದಾಳಿ ಮಾಡಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದವರಿಗೆ ಶಾಕ್ ನೀಡಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:15 am, Wed, 4 January 23