ಶಿವಮೊಗ್ಗದಲ್ಲಿ ಕಾಲೇಜು ವಿದ್ಯಾರ್ಥಿ ಮೇಲೆ ಕುದಿಯುವ ಎಣ್ಣೆ ಎರಚಿದ ಕುಡುಕ; ಮುಂದೆನಾಯ್ತು?

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 23, 2023 | 7:02 PM

ಶಿವಮೊಗ್ಗದಲ್ಲಿ ಕಬಾಬ್ ಅಂಗಡಿ ಮಾಲೀಕನ ಜೊತೆ ಜಗಳವಾಡುತ್ತಿದ್ದ ವೇಳೆ ರೊಚ್ಚಿಗೆದ್ದ ಪಾನಮತ್ತ ವ್ಯಕ್ತಿ, ಮಾಲೀಕನ ಮೇಲೆ ಎಣ್ಣೆ ಎರಚಲು ಯತ್ನಿಸಿದ್ದಾನೆ. ಈ ವೇಳ ವಿದ್ಯಾರ್ಥಿ ಮೈಮೇಲೆ ಮೇಲೆ ಎಣ್ಣೆ ಬಿದ್ದಿದೆ. ಬಿಸಿ ಎಣ್ಣೆ ಬಿದ್ದಿದ್ದರಿಂದ ವಿದ್ಯಾರ್ಥಿ ಧನುಷ್​ಗೆ ಬೊಬ್ಬೆ ಬಂದಿದೆ.

ಶಿವಮೊಗ್ಗದಲ್ಲಿ ಕಾಲೇಜು ವಿದ್ಯಾರ್ಥಿ ಮೇಲೆ ಕುದಿಯುವ ಎಣ್ಣೆ ಎರಚಿದ ಕುಡುಕ; ಮುಂದೆನಾಯ್ತು?
ಶಿವಮೊಗ್ಗ ಕುಡುಕನ ಅವಾಂತರ
Follow us on

ಶಿವಮೊಗ್ಗ, ನ.23: ಕಾಲೇಜು ವಿದ್ಯಾರ್ಥಿ ಮೇಲೆ ಕುದಿಯುವ ಎಣ್ಣೆಯನ್ನೇ ಕುಡುಕನೊಬ್ಬ ಎರಚಿದ ಘಟನೆ ಶಿವಮೊಗ್ಗ(Shivamogga) ದ ರಾಯಲ್ ಆರ್ಕೆಡ್ ಎದುರು ನಡೆದಿದೆ. ಕಬಾಬ್ ಅಂಗಡಿ ಮಾಲೀಕನ ಜೊತೆ ಜಗಳವಾಡುತ್ತಿದ್ದ ವೇಳೆ ರೊಚ್ಚಿಗೆದ್ದ ಪಾನಮತ್ತ ವ್ಯಕ್ತಿ, ಮಾಲೀಕನ ಮೇಲೆ ಎಣ್ಣೆ ಎರಚಲು ಯತ್ನಿಸಿದ್ದಾನೆ. ಈ ವೇಳ ವಿದ್ಯಾರ್ಥಿ ಮೇಲೆ ಎಣ್ಣೆ ಎರಚಿದ್ದು, ಮೈಮೇಲೆ ಬಿಸಿ ಎಣ್ಣೆ ಬಿದ್ದಿದ್ದರಿಂದ ವಿದ್ಯಾರ್ಥಿ ಧನುಷ್​ಗೆ ಬೊಬ್ಬೆ ಬಂದಿದೆ. ಕೂಡಲೇ ಗಾಯಾಳು ವಿದ್ಯಾರ್ಥಿ ಹಾಗೂ ಕುಡುಕನಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಕರೆದೊಯ್ಯಲಾಯಿತು.

ಕುಡುಕನ ಅವಾಂತರ

ಇನ್ನು ಕುಡುಕನ ಕಿರಿಕ್ ಹೆಚ್ಚುತ್ತಿದ್ದಂತೆ ಈ​ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ವಾಹನದ ಕೆಳಗೆ ಪಾನಮತ್ತ ವ್ಯಕ್ತಿ ನುಸುಳಿ ಕೆಲಹೊತ್ತು ಪೊಲೀಸರನ್ನು ಕಾಡಿದ್ದಾನೆ. ನಂತರ ಆ್ಯಂಬುಲೆನ್ಸ್ ಮೂಲಕ ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ಬೆಂಗಳೂರು-ಮೈಸೂರು ಹೆದ್ದಾರಿ ಮದ್ದೂರು ಬಳಿ ಲೋಕಲ್ ಬಾರ್ ಆಯ್ತೇ? ‘ಕುಡುಕ ಮುಕ್ತ ಹೈವೇ’ಗೆ ಎಡಿಜಿಪಿ ಅಲೋಕ್ ಕುಮಾರ್ ಸೂಚನೆ

ಇನ್ನು ಇಂತಹ ಘಟನೆ ಇದೇ ತಿಂಗಳ 9 ರಂದು ದಾವಣಗೆರೆ ನಗರದ ಪಿಬಿ ರಸ್ತೆಯ ಗಾಂಧಿ ಸರ್ಕಲ್ ಬಳಿ ನಡೆದಿತ್ತು. ಮದ್ಯಪಾನ ಪ್ರಿಯನ ಹಾವಳಿಗೆ ದಾವಣಗೆರೆ ಸಾರ್ವಜನಿಕರು ರೊಚ್ಚಿಗೆದ್ದಿದ್ದರು. ಕುಡಿದ ಮತ್ತಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಕಲ್ಲೆಸೆದ ವ್ಯಕ್ತಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದರು. ಕುಡುಕನ ಅವಾಂತರಕ್ಕೆ ಬಸ್ ಹಾಗೂ ಆಟೋ ಗಾಜುಗಳು ಪುಡಿಯಾಗಿದ್ದು, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ