ಶಿವಮೊಗ್ಗದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಚು ಪ್ರಕರಣ: NIA ಸಲ್ಲಿಸಿದ ಚಾರ್ಜ್​ಶೀಟ್​​ನಲ್ಲಿ ಸ್ಫೋಟಕ ಅಂಶ ಬಯಲು

|

Updated on: Mar 18, 2023 | 10:15 AM

ಶಿವಮೊಗ್ಗದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಏಜೆನ್ಸಿಯು ಚಾರ್ಜ್​ಶೀಟ್ ಸಲ್ಲಿಸಿದ್ದು, ವಿದೇಶಿ ಉಗ್ರಗಾಮಿಯ ಸಲಹೆಯಂತೆ ಶಂಕಿತ ಉಗ್ರರರು 25 ಕಡೆ ಟ್ರಯಲ್ ಬ್ಲ್ಯಾಸ್ಟ್​ ನಡೆಸಿದ್ದಾರೆ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದೆ.

ಶಿವಮೊಗ್ಗದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಚು ಪ್ರಕರಣ: NIA ಸಲ್ಲಿಸಿದ ಚಾರ್ಜ್​ಶೀಟ್​​ನಲ್ಲಿ ಸ್ಫೋಟಕ ಅಂಶ ಬಯಲು
ಎನ್​ಐಎ
Follow us on

ಶಿವಮೊಗ್ಗ: ಶಿವಮೊಗ್ಗದಲ್ಲಿ (Shivamogga) ಇಸ್ಲಾಮಿಕ್ ಸ್ಟೇಟ್ (Islamic State) ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಏಜೆನ್ಸಿಯು (NIA) ಚಾರ್ಜ್​ಶೀಟ್ ಸಲ್ಲಿಸಿದ್ದು, ವಿದೇಶಿ ಉಗ್ರಗಾಮಿಯ ಸಲಹೆಯಂತೆ, ಶಂಕಿತ ಉಗ್ರರು ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಮಾತ್ರವಲ್ಲದೆ, ಆಗುಂಬೆ, ವರಾಹಿ ನದಿ ತೀರ ಸೇರಿದಂತೆ 25 ಕಡೆ ಟ್ರಯಲ್ ಬ್ಲ್ಯಾಸ್ಟ್​ (Trail Blast) ನಡೆಸಿದ್ದಾರೆ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದೆ. ಚಾರ್ಜ್​ಶೀಟ್​​ನಲ್ಲಿ ಕುಕ್ಕರ್ ಬಾಂಬ್​ ಸ್ಫೋಟದ ಶಂಕಿತ ಉಗ್ರ ಶಾರಿಕ್​, ಮಾಜ್ ಮುನೀರ್, ಸಯ್ಯದ್ ಯಾಸಿನ್ ಹೆಸರು ಉಲ್ಲೇಖಿಸಲಾಗಿದೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ ಎನ್​ಐಎ ಚಾರ್ಜ್​ಶೀಟ್​​ನಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿದ್ದು, ಮಾಜ್ ಮುನೀರ್​​​, ಯಾಸಿನ್​​ ಇಬ್ಬರೂ ಬಿಟೆಕ್​​​ ಪದವೀಧರರಾಗಿದ್ದು, ದೇಶದ ಐಕ್ಯತೆ ಮತ್ತು ಸಾರ್ವಭಮತ್ವಕ್ಕೆ ದಕ್ಕೆ ತಂದಿದ್ದಾರೆ. ಆಗುಂಬೆ, ವರಾಹಿ ಪ್ರದೇಶಗಳಿಗೆ ಟ್ರಕ್ಕಿಂಗ್ ಹೋಗಿದ್ದ ವೇಳೆ ಇಬ್ಬರು ಜಾಗಗಳ ಬಗ್ಗೆ ಮಾಹಿತಿ ಪಡೆದು ಸ್ಫೋಟಕ್ಕೆ ಸ್ಥಳ ಗುರುತಿಸಿದ್ದರು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಚು ಪ್ರಕರಣ; ಇಬ್ಬರು ಆರೋಪಿಗಳ ವಿರುದ್ಧ ಎನ್​ಐ ಚಾರ್ಜ್​ಶೀಟ್

ಈ ಇಬ್ಬರೂ ಶಂಕಿತ ಉಗ್ರರಿಗೆ ಕ್ರಿಪ್ಟೋ ಕರೆನ್ಸಿಯ ಮೂಲಕ ಹಣ ರವಾನೆಯಾಗುತ್ತಿತ್ತು. ಮಾಜ್ ಸುಮಾರು 1.5 ಲಕ್ಷ ಹಣ ಪಡೆದಿದ್ದರೇ, ಸಯ್ಯದ್ ಯಾಸಿನ್ 62 ಸಾವಿರ ರೂ ಹಣ ಪಡೆದಿದ್ದಾನೆ. ಇವರು ವೇರ್ ಹೌಸ್, ಮದ್ಯದಂಗಡಿ, ಹಾರ್ಡವೇರ್ ಶಾಪ್ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾಳು ಮಾಡುವ ಹುನ್ನಾರ ರೂಪಿಸಿದ್ದರು.
ಶಂಕಿತ ಉಗ್ರ ಶಾರೀಕ್ 2022ರಲ್ಲಿ ಕದ್ರಿ ದೇವಸ್ಥಾನದಲ್ಲಿ ಬಾಂಬ್​ ಸ್ಫೋಟಿಸಲು ಹುನ್ನಾರ ರೂಪಿಸಿದ್ದನು. ಆದರೆ ಮಾರ್ಗ ಮಧ್ಯದಲ್ಲಿಯೇ ಕುಕ್ಕರ್ ಸಿಡಿದ ಹಿನ್ನಲೆ ನಡೆಯಬೇಕಿದ್ದ ಸಾಂಭವ್ಯ ದುರಂತ ತಪ್ಪಿಹೋಗಿದೆ ಎಂದು ಎನ್​ಐಎ ಹೇಳಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:14 am, Sat, 18 March 23