ಶಿವಮೊಗ್ಗ, ಸೆಪ್ಟೆಂಬರ್ 15: ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅಶ್ಲೀಲ ವಿಡಿಯೋಗಳು (Obscene video) ಹೆಚ್ಚಾಗಿ ವೈರಲ್ ಆಗುತ್ತಿವೆ. ಕೆಲ ದಿನಗಳ ಹಿಂದಷ್ಟೇ ಅಶ್ಲೀಲ ವಿಡಿಯೋಗಳು ವೈರಲ್ ಆಗಿ ಕೇಸ್ ಕೂಡ ದಾಖಲಾಗಿದ್ದವು. ಇದೀಗ ಮತ್ತೊಂದು ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತೀರ್ಥಹಳ್ಳಿಯ ಮಾಜಿ ಶಾಸಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಆಪ್ತ, ಹಿರಿಯ ಮುಖಂಡ ಸುಬ್ರಹ್ಮಣ್ಯ ಅವರದ್ದು ಎಂದು ಹೇಳಲಾಗುತ್ತಿರುವ ಅಶ್ಲೀಲ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ತೀರ್ಥಹಳ್ಳಿಯ ಲಾಡ್ಜ್ ವೊಂದರಲ್ಲಿ ಘಟನೆ ನಡೆದಿದೆ.
ನೆಲಮಂಗಲ: ಖಾಸಗಿ ಫೋಟೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನವಾಗಿಲ್ಲವೆಂದು ಆರೋಪಿಸಿ ಪಂಚಾಯತಿ ಸದಸ್ಯೆ ಒಬ್ಬರು ಆತ್ಮಹತ್ಯಗೆ ಯತ್ನಿಸಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೇಗೂರುನಲ್ಲಿ ಇತ್ತೀಚೆಗೆ ನಡೆದಿತ್ತು. ಪುಪ್ಪ, ಹೆಚ್ಚಿನ ಪ್ರಮಾಣದ ಥೈರಾಯ್ಡ್ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಪಂಚಾಯತಿ ಸದಸ್ಯೆ. ನೆಲಮಂಗಲ ತಾಲೂಕಿನ ಬೇಗೂರು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಪುಷ್ಪರನ್ನ ಸದಸ್ಯರಾದ ಮುನಿರಾಜು ಮತ್ತು ವಸಂತ್ ನಿಂದಿಸಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ: ಹೆಂಡತಿ ಕಿಡ್ನಾಪ್, ಪತಿ ದೂರು
ಪುಷ್ಪ ಅವರದ್ದು ಎನ್ನಲಾದ ಒಂದಷ್ಟು ಫೋಟೋಗಳು ವೈರಲ್ ಆಗಿದ್ದವು. ಈ ಸಂಬಂಧ ಸದಸ್ಯರಾದ ಮುನಿರಾಜು, ವಸಂತ, ಮಂಜುನಾಥ್ ವಿರುದ್ಧ ಬೆಂಗಳೂರಿನ ಸೈಬರ್ ಠಾಣೆಯಲ್ಲಿ ಸೆ. 7 ರಂದು ದೂರು ದಾಖಲಾಗಿ 3 ದಿನ ಕಳೆದರೂ ಆರೋಪಿಗಳ ಬಂಧನ ಆಗಿರಲಿಲ್ಲ.
ಇದನ್ನೂ ಓದಿ: ಮೈಸೂರು: ಆಧಾರ್ ತಿದ್ದುಪಡಿ ಮಾಡಿ ಅಪ್ರಾಪ್ತೆ ಜತೆ ಮದ್ವೆ, ಗ್ರಾ.ಪಂ ಉಪಾಧ್ಯಕ್ಷನ ವಿರುದ್ಧ ದೂರು
ಅಸ್ವಸ್ಥ ಸದಸ್ಯೆ ಪುಪ್ಪಗೆ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಇತ್ತ ಆರೋಪಿಗಳ ಪತ್ನಿಯರು ಮನೆಯಲ್ಲಿ ಗಂಡಂದಿರಿಲ್ಲವೆಂದು ಕಣ್ಣೀರು ಹಾಕಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:10 pm, Fri, 15 September 23