AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಮ ಪಂಚಾಯತ್​ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ: ಹೆಂಡತಿ ಕಿಡ್ನಾಪ್​, ಪತಿ ದೂರು

ಗ್ರಾಮ ಪಂಚಾಯತ್​​ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಿಡ್ನಾಪ್ ಪಾಲಿಟಿಕ್ಸ್​ ಶುರುವಾಗಿದ್ದು, ಆಕಾಂಕ್ಷಿಗಳನ್ನು ಕಿಡ್ನಾಪ್​ ಆರೋಪ ಕೇಳಿಬಂದಿದೆ. ನಾಳೆ ಕೊಡತಿ ಗ್ರಾಮ ಪಂಚಾಯತ್​ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಹಿನ್ನೆಲೆ ಸದಸ್ಯೆಯನ್ನುಅಪಹರಿಸಿದ್ದಾರೆಂದು ದೂರ ನೀಡಲಾಗಿದೆ.

ಗ್ರಾಮ ಪಂಚಾಯತ್​ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ: ಹೆಂಡತಿ ಕಿಡ್ನಾಪ್​, ಪತಿ ದೂರು
ಸದಸ್ಯೆ ಆಂತೋಣಿ ಮೇರಿ, ಉಪಾಧ್ಯಕ್ಷ ಆಕಾಂಕ್ಷಿ ಮಂಜುನಾಥ್
ರಾಚಪ್ಪಾಜಿ ನಾಯ್ಕ್
| Updated By: ಗಂಗಾಧರ​ ಬ. ಸಾಬೋಜಿ|

Updated on: Aug 13, 2023 | 3:35 PM

Share

ಬೆಂಗಳೂರು, ಆಗಸ್ಟ್​ 13: ಗ್ರಾಮ ಪಂಚಾಯತ್ (Gram panchayat)​​ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಿಡ್ನಾಪ್ ಪಾಲಿಟಿಕ್ಸ್​ ಶುರುವಾಗಿದ್ದು, ಆಕಾಂಕ್ಷಿಗಳನ್ನು ಕಿಡ್ನಾಪ್​ ಆರೋಪ ಕೇಳಿಬಂದಿದೆ. ನಾಳೆ ಕೊಡತಿ ಗ್ರಾಮ ಪಂಚಾಯತ್​ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಹಿನ್ನೆಲೆ ಸದಸ್ಯೆಯನ್ನುಅಪಹರಿಸಿದ್ದಾರೆಂದು ದೂರ ನೀಡಲಾಗಿದೆ. ಗ್ರಾಮ ಪಂಚಾಯತ್​ ಸದಸ್ಯೆ ಆಂತೋಣಿ ಮೇರಿಯನ್ನ ನಿನ್ನೆ ರಾತ್ರಿ 11 ಗಂಟೆಗೆ ಮನೆಗೆ ನುಗ್ಗಿ ಅಪಹರಿಸಿದ್ದಾರೆಂದು ವರ್ತೂರು ಠಾಣೆಗೆ ಉಪಾಧ್ಯಕ್ಷ ಆಕಾಂಕ್ಷಿ ಮಂಜುನಾಥ್ ವಿರುದ್ಧ ಆಂತೋಣಿ ಮೇರಿ ಪತಿ ಜಾವನೀಸ್​ ದೂರು ನೀಡಿದ್ದು, FIR ದಾಖಲಾಗಿದೆ.

ಉಪಾಧ್ಯಕ್ಷ ಆಕಾಂಕ್ಷಿ ಮಂಜುನಾಥ್ ಈ ಕುರಿತಾಗಿ ಹೇಳಿದ್ದು, ಆರೋಪ ನಿರಾಕರಿಸಿದ್ದಾರೆ. ನಾವು ಮೇರಿಯನ್ನು ಅಪಹರಿಸಿಲ್ಲ. ಚುನಾವಣೆ ಮುಂದೂಡಲು ನಾಟಕ ಮಾಡಲಾಗುತ್ತಿದೆ. ಅವರೇ ಮೇರಿಯನ್ನು ಅಪಹರಿಸಿ ಸುಳ್ಳು ದೂರು ನೀಡಿದ್ದಾರೆ ಎಂದು ಹೇಳಿದರು.

ನಾಲ್ವರು ಗ್ರಾಮ ಪಂಚಾಯತ್ ಸದಸ್ಯರ ಕಿಡ್ನ್ಯಾಪ್ ಆರೋಪ

ಗ್ರಾಮ ಪಂಚಾಯತ್ ಸದಸ್ಯರ ಅಪಹರಣ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಹೋಟೆಲ್​ನಿಂದ ನಾಲ್ವರು ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರನ್ನು ಅಪಹರಿಸಿರುವ ಆರೋಪ ಕೇಳಿ ಬಂದಿತ್ತು. ಅಪಹರಣಕ್ಕೊಳಗಾದವರು, ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮ ಪಂಚಾಯತ್ ಸದಸ್ಯರು.

ಇದನ್ನೂ ಓದಿ: ನೀವು ಕಮಿಷನ್ ತೆಗೆದುಕೊಂಡಿದ್ದಕ್ಕೆ ತಾನೇ ಮನೆ ಸೇರಿರುವುದು: ಸಿಟಿ ರವಿ ಆರೋಪಕ್ಕೆ ಹೆಚ್​ವಿಶ್ವನಾಥ್​ ತಿರುಗೇಟು

ಇದೇ ಆಗಸ್ಟ್ 7 ರಂದು ಐನೋಳ್ಳಿ ಗ್ರಾಮ ಪಂಚಾಯತ್​ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಒಟ್ಟು ಹದಿನೆಂಟು ಸ್ಥಾನಗಳಿದ್ದು, ಅಧ್ಯಕ್ಷರಾಗಲು ಹತ್ತು ಜನರ ಬೆಂಬಲ ಅವಶ್ಯಕ. ಹೀಗಾಗಿ ಜುಲೈ 13 ರಂದೆ ಬಿಜೆಪಿ ಬೆಂಬಲಿತ ಹದಿಮೂರು ಸದಸ್ಯರು ಪ್ರವಾಸಕ್ಕೆ ಹೋಗಿದ್ದರು.

ಇಲ್ಲೇ ಇದ್ದರೆ ತೊಂದರೆ ಅಂತ ತಿಳಿದು ಪ್ರವಾಸಕ್ಕೆ ಹೋಗಿದ್ದರು. ಆದರೆ ಪುಣೆಯ ಹೋಟೆಲ್​ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಇರೋ ಬಗ್ಗೆ ಮಾಹಿತಿ ಪಡೆದಿದ್ದ ಕಾಂಗ್ರೆಸ್​ ಕಾರ್ಯಕರ್ತರು, ಹೋಟೆಲ್​ನಲ್ಲಿದ್ದ ಆರು ಜನರನ್ನು ಅಪಹರಿಸಿಕೊಂಡು ಹೋಗಿದ್ದು, ನಂತರ ಇಬ್ಬರನ್ನು ಬಿಟ್ಟು ನಾಲ್ವರನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು ಅಂತ ಬಿಜೆಪಿ ಬೆಂಬಲಿತರು ಆರೋಪಿಸಿದ್ದರು.

ಇದನ್ನೂ ಓದಿ: ನನಗೆ ಅನ್ಯಾಯ ಮಾಡಿದವರಿಗೆ ಬಣಜಿಗ ಸಮುದಾಯ ಉತ್ತರ ಕೊಟ್ಟಿದೆ: ಬಿಜೆಪಿ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ

ಬಿಜೆಪಿ ಬೆಂಬಲಿತ ಸದಸ್ಯರಾದ ಶಿವಕುಮಾರ್, ಸೈಯದ್ ಆಸೀಪ್, ರಾಮಣ್ಣ, ರಾಜ್ ರೆಡ್ಡಿ ಅನ್ನೋ ನಾಲ್ವರು ಸದಸ್ಯರನ್ನು ಅಪರಹರಿಸಿಕೊಂಡು ಹೋಗಿದ್ದರು. ಇನ್ನು ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಗರ ನಡುವೆ ಅಧ್ಯಕ್ಷ ಸ್ಥಾನಕ್ಕೆ ತೀರ್ವ ಪೈಪೋಟಿ ನಡೆದಿತ್ತು. ಹೀಗಾಗಿ ಸದಸ್ಯರನ್ನೇ ಹೈಜಾಕ್ ಮಾಡುವ ಕೆಲಸಗಳು ನಡೆದಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.