ಶಿವಮೊಗ್ಗದಲ್ಲಿ ಹೆಚ್ಚಾದ ಓಪನ್ ರೌಡಿಸಂ: ದೇವಸ್ಥಾನದಲ್ಲಿ ಮಚ್ಚು ಪೂಜೆ, ರೌಡಿಯಿಂದ ಫೈರಿಂಗ್

ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ರೌಡಿಗಳ ಓಪನ್ ರೌಡಿಸಂ ಹಾವಳಿ ಹೆಚ್ಚಾಗಿದೆ. ಗುಂಡು ಹಾರಿಸುವುದು, ರಸ್ತೆಯಲ್ಲಿ ಮಚ್ಚಿನಿಂದ ದಾಳಿ ಮಾಡುವುದು, ದೇವಾಲಯದಲ್ಲಿ ಮಚ್ಚು ಪೂಜೆ ಮಾಡಿಸುವುದು ಸೇರಿದಂತೆ ಹಲವು ಘಟನೆಗಳು ನಡೆದಿವೆ. ಸದ್ಯ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಪೊಲೀಸರು ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಶಿವಮೊಗ್ಗದಲ್ಲಿ ಹೆಚ್ಚಾದ ಓಪನ್ ರೌಡಿಸಂ: ದೇವಸ್ಥಾನದಲ್ಲಿ ಮಚ್ಚು ಪೂಜೆ, ರೌಡಿಯಿಂದ ಫೈರಿಂಗ್
ಶಿವಮೊಗ್ಗದಲ್ಲಿ ಓಪನ್ ರೌಡಿಸಂ
Updated By: ಗಂಗಾಧರ​ ಬ. ಸಾಬೋಜಿ

Updated on: May 05, 2025 | 8:52 AM

ಶಿವಮೊಗ್ಗ, ಮೇ 05: ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಪೊಲೀಸರ ಭಯವೇ ಇಲ್ಲದೇ ಓಪನ್ ರೌಡಿಸಂ (rowdyism) ನಡೆಯುತ್ತಿದೆ. ಹಾಡುಹಗಲೇ ನಡು ರಸ್ತೆಯಲ್ಲಿ ರೌಡಿಸಂ ಮಾಡುವುದು, ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡುವುದು ಮತ್ತು ಬಡಾವಾಣೆಯೊಂದರಲ್ಲಿ ರೌಡಿಯೊಬ್ಬನಿಂದ ಗಾಳಿಯಲ್ಲಿ ಗುಂಡು (firing) ಹಾರಿಸಲಾಗಿದೆ. ಸದ್ಯ ಈ ಮೂರ್ಮೂರು ಘಟನೆಗಳಿಂದಾಗಿ ಅವಳಿ ನಗರದ ಜನರು ನಿಜಕ್ಕೂ ಬೆಚ್ಚಿಬೀದಿದ್ದಾರೆ.

ರೌಡಿಶೀಟರ್​ನಿಂದ ಫೈರಿಂಗ್​​: ಬಂಧಿಸಿದ ಪೊಲೀಸ್​​

ಶಿವಮೊಗ್ಗದ ಟಿಪ್ಪು ನಗರದ ಬಡಾವಣೆಯಲ್ಲಿ ಮಹ್ಮದ್ ಇರ್ಫಾನ್​ ಎಂಬ ರೌಡಿಶೀಟರ್ ರಾತ್ರಿಹೊತ್ತಿಲ್ಲಿನಲ್ಲಿ ಗನ್​ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಆತಂಕ ಮೂಡಿಸಿದ್ದ. ಆದರೆ ಇಲ್ಲಿ ರೌಡಿಶೀಟರ್ ಕೈಗೆ ಗನ್ ಬಂದಿದ್ದು ಹೇಗೆ ಎನ್ನುವುದು ಮಾತ್ರ ನಿಗೂಢ. ಟಿಪ್ಪು ನಗರದ ಜನರು ಈ ಘಟನೆಯಿಂದ ಬೆಚ್ಚಿಬಿದ್ದಿದ್ದರು. ಆದರ ಘಟನೆ ಕುರಿತು ಮಾಹಿತಿ ನೀಡಲು ಹಿಂದೇಟು ಹಾಕಿದ್ದರು.

ಇದನ್ನೂ ಓದಿ: ಭದ್ರಾವತಿ: ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್

ಇನ್ನೂ ಫೈರಿಂಗ್ ಬೆನ್ನಲ್ಲೇ ಎಚ್ಚೆತ್ತುಕೊಂಡ ತುಂಗಾ ನಗರ ಪೊಲೀಸರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಫೈರಿಂಗ್​ ಆಗಿರುವುದು ಏರ್ ಗನ್​ನಿಂದ ಅಂತಾ ದೂರು ದಾಖಲಿಕೊಂಡು, ರೌಡಿಶೀಟರ್​​ ನನ್ನು ತುಂಗಾ ನಗರ ಪೊಲೀಸರು ಬಂಧಿಸಿದ್ದಾರೆ. ಅಸಲಿಗೆ ಮೂರು ದಿನಗಳ ಹಿಂದೆ ಗಾಳಿಯಲ್ಲಿ ಗುಂಡು ಹಾರಿಸಲಾಗಿದ್ದು, ಯಾವ ಗನ್ ಎನ್ನುವುದು ಮಾತ್ರ ನಿಗೂಢವಾಗಿದೆ.

ಈ ನಡುವೆ ಭದ್ರಾವತಿಯ ಮುಖ್ಯ ರಸ್ತೆಯಲ್ಲಿ ಪ್ರಮೋದ್ ಅಲಿಯಾಸ್ ಗಾಂಧಿ ರೌಡಿ ಗ್ಯಾಂಗ್ ಅಟ್ಟಾಡಿಸಿಕೊಂಡು ರೌಡಿ ಶೀಟರ್ ವಿಶ್ವ ಅಲಿಯಾಸ್ ಮುದ್ದೆ ಮೇಲೆ ಮಚ್ಚು, ಲಾಂಗ್​​ನಿಂದ ಅಟ್ಯಾಕ್ ಮಾಡಿತ್ತು. ಆದರೆ ಅದೃಷ್ಟ ಚೆನ್ನಾಗಿತ್ತು. ದಾಳಿಯಲ್ಲಿ ವಿಶ್ವ ಜಸ್ಟ್ ಮಿಸ್ ಆಗಿದ್ದ.

ವಿಶ್ವ ಮೇಲೆ ರೌಡಿ ಗ್ಯಾಂಗ್ ಅಟ್ಯಾಕ್ ಮಾಡಲು ಕಾರಣ ಅಂದರೆ ಪ್ರಮೋದ್ ಅಲಿಯಾಸ್ ಗಾಂಧಿ ಎನ್ನುವ ರೌಡಿಶೀಟರ್ ಮೇಲೆ ರೌಡಿ ವಿಶ್ವ, ಬಿಯರ್ ಬಾಟಲ್​ನಿಂದ ಹಲ್ಲೆ ಮಾಡಿದ್ದ. ಈ ಸೇಡು ತೀರಿಸಿಕೊಳ್ಳಲು ಪ್ರಮೋದ್ ಹಾಡುಹಗಲೇ ಮಚ್ಚಿನಿಂದ ವಿಶ್ವನ ಮೇಲೆ ದಾಳಿಗೆ ಯತ್ನಿಸಿದ್ದ. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಪ್ರತೀಕಾರ ತೀರಿಸಿಕೊಳ್ಳಲು ಮಚ್ಚಿಗೆ ಪೂಜೆ

ರೌಡಿಗಳು ಓಪನ್ ಆಗಿ ಹಾಡುಹಗಲೇ ಬೀದಿಯಲ್ಲಿ ಗಲಾಟೆ ಮಾಡಿಕೊಂಡಿದ್ದರು. ಭದ್ರಾವತಿಯ ಹಳೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಸ್ ದಾಖಲು ಆಗಿತ್ತು. ಇನ್ನೂ ಭದ್ರಾವತಿಯ ನಗರದ ದೇವಸ್ಥಾನ ಒಂದರಲ್ಲಿ ರೌಡಿಶೀಟರ್ ವಿಶ್ವನು ದೇವಸ್ಥಾನದಲ್ಲಿ ಮಚ್ಚನ್ನು ಅರ್ಚಕರಿಂದ ಪೂಜೆ ಮಾಡಿಸಿದ್ದ. ಈ ಮೂಲಕ ರೌಡಿ ಗಾಂಧಿ ವಿರುದ್ದ ಪ್ರತೀಕಾರ ತೀರಿಸಿಕೊಳ್ಳಲು ಶಪಥ ಮಾಡಿದ್ದನಂತೆ. ಈ ಎರಡು ಘಟನೆಗಳು ಭದ್ರಾವತಿ ನಗರದ ಜನರನ್ನು ಬೆಚ್ಚಿಬೀಳಿಸಿವೆ. ಹೀಗೆ ಅವಳಿ ನಗರದಲ್ಲಿ ರೌಡಿಗಳಿಗೆ ಖಾಕಿಯ ಯಾವುದೇ ಭಯವಿಲ್ಲದಂತಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ಮಠದಲ್ಲಿ 300 ಕೋಟಿ ರೂ ದರೋಡೆಗೆ ಸ್ಕೇಚ್, ಸಿಕ್ಕಿದ್ದು 50 ಸಾವಿರ ರೂ, 12 ಜನರ ಬಂಧನ

ಹೀಗೆ ರೌಡಿಗಳ ಹಾವಳಿ ಅವಳಿ ನಗರದಲ್ಲಿ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಖಾಕಿ ಭಯವಿಲ್ಲದೆ ರೌಡಿಗಳ ಹಾರಾಟ ಜೋರಾಗಿದೆ. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಈ ಮೂರು ಘಟನೆಗಳು ರೌಡಿಗಳ ರೌಡಿಸಂ ಯಾವ ಮಟ್ಟಕ್ಕೆ ಇದೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತಿವೆ. ಈ ಓಪನ್ ರೌಡಿಸಂಗೆ ಶಿವಮೊಗ್ಗ ಪೊಲೀಸರು ಕಡಿವಾಣ ಹಾಕುತ್ತಾರಾ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.