Shivamogga: ಸ್ಟೆಬಿಲೈಜರ್ ಸ್ಫೋಟ, ಮಗನನ್ನು ಉಳಿಸಲು ಹೋಗಿ ಪ್ರಾಣ ಬಿಟ್ಟ ತಂದೆ
ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕಚೇರಿ ಎದುರಿನ ಮನೆಯಲ್ಲಿ ಸ್ಟೆಬಿಲೈಜರ್(Stabilizer) ಸ್ಫೋಟವಾಗಿ ತಂದೆಎಸ್.ಶರತ್(39) ಸಾವನ್ನಪ್ಪಿದ್ದು, ಶರತ್ ಪುತ್ರ ಸಂಚಿತ್(12) ಸ್ಥಿತಿ ಗಂಭೀರವಾಗಿದೆ.
ಶಿವಮೊಗ್ಗ: ನಗರದ ಕುವೆಂಪು ರಸ್ತೆಯ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿರುವ ಪ್ರತಿಷ್ಠಿತ ಭೂಪಾಳಂ ಕುಟುಂಬದ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಸ್ಟೆಬಿಲೈಜರ್ ಸ್ಫೋಟವಾಗಿ ತಂದೆ ಎಸ್.ಶರತ್(39) ಸಾವನ್ನಪ್ಪಿದ್ದು, ಪುತ್ರ ಸಂಚಿತ್(12) ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದಾಗಿ ಸ್ಟೆಬಲೈಜರ್ ಸ್ಫೋಟವಾಗಿದ್ದು, ಕೂಡಲೇ ಮನೆಯಲ್ಲಾ ಬೆಂಕಿ ಆವರಿಸಿದೆ. ತಂದೆ ಎಸ್.ಶರತ್ ಮಗ ಸಂಚಿತ್ನನ್ನು ಉಳಿಸಲು ಹೋಗಿ ತನ್ನ ಪ್ರಾಣ ಕಳೆದುಕೊಂಡಿರುವ ದಾರುಳ ಘಟನೆ ನಡೆದಿದೆ.
ಲಿಂಗಸುಗೂರು: ಗೂಡ್ಸ್ ಆಟೋ ಪಲ್ಟಿಯಾಗಿ ನಾಲ್ವರಿಗೆ ಗಂಭೀರ ಗಾಯ
ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಬಾಬಾಕಟ್ಟಿ ಬಳಿ ಗೂಡ್ಸ್ ಆಟೋ ಪಲ್ಟಿಯಾಗಿ ಮಸ್ಕಿ ಮಟ್ಟಣದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೂಡ್ಸ್ ಆಟೋದಲ್ಲಿ 12 ಜನ ಮಸ್ಕಿ ಪಟ್ಟಣದ ನಿವಾಸಿಗಳು ಮುದಗಲ್ಗೆ ಬಂದಿದ್ದಾರೆ. ವಾಪಸ್ ಹಿಂದಿರುಗುವಾಗ ವೇಗದಲ್ಲಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಆಟೋ ಪಲ್ಟಿಯಾಗಿದೆ.
ಮೈಸೂರು: ಮಿಂಚಿನ ವೇಗದಲ್ಲಿ ಜಿಂಕೆ ಬೇಟೆಯಾಡಿದ ಕಬಿನಿ ಕ್ವೀನ್ ಹುಲಿ
ಮೈಸೂರಿನ ನಾಗರಹೊಳೆ ಅಭಯಾರಣ್ಯದ ಅಂತರಸಂತೆ ವಲಯದಲ್ಲಿ ಕಬಿನಿ ಕ್ವೀನ್ ಎಂದೇ ಖ್ಯಾತಿಯಾಗಿರುವ ಹೆಣ್ಣು ಹುಲಿ ಕ್ಷಣಾರ್ಧದಲ್ಲಿ ಜಿಂಕೆಯನ್ನು ಬೇಟೆಯಾಡಿ ಎಳೆದು ಕೊಂಡು ಹೋಗಿದೆ. ಸಫಾರಿಗೆ ತೆರಳಿದ್ಧ ಪ್ರವಾಸಿಗರ ಕ್ಯಾಮೆರಾದಲ್ಲಿ ಈ ಅಪರೂಪದ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಕೆಆರ್ ಪುರಂ ಬಳಿ ಭೀಕರ ಅಪಘಾತ; ಆಟೋಗೆ ಕಾರು ಡಿಕ್ಕಿ ಹೊಡೆದು ಇಬ್ಬರು ಮಹಿಳೆಯರು ಸಾವು, ಮೂವರಿಗೆ ಗಾಯ
ಕೊಡಗಿನಲ್ಲಿ ಕಾಡು ಕೋಣ ಹತ್ಯೆ, ಮೂವರು ಆರೋಪಿಗಳ ಬಂಧನ
ಮಡಿಕೇರಿ: ಕೊಡಗಿನ ಆನೆಚೌಕೂರು ಬಳಿ ಗುಂಡೇಟಿಗೆ ಬಲಿಯಾಗಿದ್ದ ಕಾಡುಕೋಣದ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಗೋಡು ವನ್ಯಜೀವಿ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆ ಮಾಡಿದ್ದು, ಪೊನ್ನಂಪೇಟೆ ತಾಲ್ಲೂಕಿನ ಅತ್ತೂರು ಗ್ರಾಮದ ಮೂವರು ಬೇಟೆಗಾರರಾದ ಅಪ್ಪಯ್ಯ, ಮಂಜು, ಅರುಣ್ ಎಂಬುವವರನ್ನ ಬಂಧಿಸಿ. ಆರೋಪಿಗಳಿಂದ ಬಂದೂಕು, ಕಾರು, ಮದ್ದು ಗುಂಡುಗಳ ವಶ ಪಡೆಯಲಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:47 am, Sun, 8 January 23