ಪ್ರಚೋದನಕಾರಿ ಭಾಷಣ; ಮಾಜಿ ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಸುಮೋಟೋ ಕೇಸ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 12, 2023 | 10:35 PM

ರಾಗಿಗುಡ್ಡದಲ್ಲಿ ಗಲಭೆ ಖಂಡಿಸಿ ಪ್ರತಿಭಟನಾ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರು.  ಹಸಿರು ಬಣ್ಣ ಕಿತ್ತಾಕಿ ಕೇಸರಿ ಬಣ್ಣ ಬರುವವರೆಗೆ ಬಿಜೆಪಿ ಹೋರಾಟ ಮಾಡುತ್ತದೆ, ಪಾಕಿಸ್ತಾನ ದೇಶವೂ ಸೇರಿದಂತೆ ಅಖಂಡ ಭಾರತದ ಕನಸು ಇತ್ತು. ಆದ್ರೆ, ದೇಶದ್ರೋಹಿ ಮುಸ್ಲಿಮರು ಇದ್ದಾರೆ ಎನ್ನುವ ಮೂಲಕ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಈ ಹಿನ್ನಲೆ ಇದೀಗ ಕೆಎಸ್​ ಈಶ್ವರಪ್ಪ ವಿರುದ್ದ ದೂರು ದಾಖಲು ಮಾಡಲಾಗಿದೆ.

ಪ್ರಚೋದನಕಾರಿ ಭಾಷಣ; ಮಾಜಿ ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಸುಮೋಟೋ ಕೇಸ್
ಕೆಎಸ್​ ಈಶ್ವರಪ್ಪ
Follow us on

ಶಿವಮೊಗ್ಗ, ಅ.12: ಪ್ರಚೋದನಕಾರಿ ಭಾಷಣ ಹಿನ್ನೆಲೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ವಿರುದ್ಧ ಶಿವಮೊಗ್ಗ(Shivamogga) ದ ಜಯನಗರ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲು ಮಾಡಲಾಗಿದೆ. ರಾಗಿಗುಡ್ಡದಲ್ಲಿ ಗಲಭೆ ಖಂಡಿಸಿ ಪ್ರತಿಭಟನಾ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರು.  ಹಸಿರು ಬಣ್ಣ ಕಿತ್ತಾಕಿ ಕೇಸರಿ ಬಣ್ಣ ಬರುವವರೆಗೆ ಬಿಜೆಪಿ ಹೋರಾಟ ಮಾಡುತ್ತದೆ, ಪಾಕಿಸ್ತಾನ ದೇಶವೂ ಸೇರಿದಂತೆ ಅಖಂಡ ಭಾರತದ ಕನಸು ಇತ್ತು. ಆದ್ರೆ, ದೇಶದ್ರೋಹಿ ಮುಸ್ಲಿಮರು ಇದ್ದಾರೆ ಎನ್ನುವ ಮೂಲಕ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಈ ಹಿನ್ನಲೆ ಇದೀಗ ದೂರು ದಾಖಲು ಮಾಡಲಾಗಿದೆ.

ಘಟನೆ ವಿವರ

ಇಂದು ಶಿವಮೊಗ್ಗದಲ್ಲಿ ಮಾತನಾಡಿದ್ದ ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಅವರು ‘ ರಾಜ್ಯದ ಕುತಂತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿದ್ದು ಮೈಯಲ್ಲಿ ಹಸಿರು ರಕ್ತ ಅಥವಾ ಹಿಂದೂ ರಕ್ತ ಹರಿಯುವ ತೀರ್ಮಾನ ಆಗಬೇಕಿದೆ. ಪಾಕಿಸ್ತಾನ ದೇಶವೂ ಸೇರಿದಂತೆ ಅಖಂಡ ಭಾರತದ ಕನಸು ಇತ್ತು. ಆದ್ರೆ, ದೇಶದ್ರೋಹಿ ಮುಸ್ಲಿಮರು ಇದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಜೊತೆಗೆ ಕಾವೇರಿ ನೀರನ್ನು ಡಿಸಿಎಂ ಡಿಕೆ ಶಿವಕುಮಾರ್​ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಟ್ಟಿದ್ದಾನೆ, ಅವನೊಬ್ಬ ನೀರಿನ ಕಳ್ಳ ಎಂದಿದ್ದರು.

ಇದನ್ನೂ ಓದಿ:ಸ್ವಾತಂತ್ರ್ಯ ದಿನಾಚರಣೆಯೆಂದು ಪ್ರಚೋದನಕಾರಿ ಭಾಷಣ ಆರೋಪ: ಹಿಂದೂ ಜಾಗರಣೆ ವೇದಿಕೆ ಮುಖಂಡನ ಬಂಧನ

ನಾವೇ ಹಿಂದೂ ಸಮಾಜ ರಕ್ಷಣೆ ಮಾಡುವ ಸರ್ಕಾರ ರಚನೆ ಮಾಡುತ್ತೇವೆ. ಇದು ನಮ್ಮ ಗ್ಯಾರಂಟಿ ಆಗಿದೆ. ನಮಗೂ ಆಯುಧದಿಂದ ಉತ್ತರ ಕೊಡಲು ಬರುತ್ತದೆ. ಮುಸ್ಲಿಂರ ಗೂಂಡಾಗಳು ಹರ್ಷ ಕೊಲೆ ಮಾಡಿದ್ದಾರೆ. ‘ಸಿದ್ದರಾಮಯ್ಯನವರೇ ನಿಮ್ಮ ಮಗ ಯತೀಂದ್ರನ ಕೊಲೆ ಮಾಡಿದ್ದರೆ, ಅಥವಾ ಡಿ.ಕೆ.ಶಿವಕುಮಾರ್​ ಅವರೇ ಸಂಸದ ಸುರೇಶ್ ಕೊಲೆ ಮಾಡಿದ್ದರೆ, ನಿಮಗೆ ಹೊಟ್ಟೆ ಉರಿ ಆಗುತ್ತಿರಲಿಲ್ಲವೇ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ K.S​.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಇನ್ನು ರಾಗಿಗುಡ್ಡದಲ್ಲಿ ಹಿಂದೂಗಳ 8 ಮನೆ ಮೇಲೆ ದಾಳಿಯಾಗಿದೆ. ಆದರೆ, ನಮ್ಮ ಹುಡುಗನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ. ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಎಸ್​.ಪಿ ಕಾಂಗ್ರೆಸ್ ಏಜೆಂಟ್ ಆಗಿದ್ದಾರೆ. ಎಷ್ಟು ದಿನಗಳ ಕಾಲ ಇವರ ಚೇಲಾ ಆಗುತ್ತೀರಿ. ನಮಗೂ ಅವಕಾಶ ಸಿಕ್ಕರೆ ಜಾತ್ರೆಯಲ್ಲಿ ಕುರಿ ಕಡಿದಂತೆ ಕಡಿಯುತ್ತೇವೆ. ನಾವೂ ಒಟ್ಟಾಗಿ ಇರಬೇಕೆಂದರೆ ಇವರು ಬಿಡುತ್ತಿಲ್ಲ ಎಂದು ಆಕ್ರೋಶದ ಮಾತುಗಳಾಡಿದ್ದರು. ಇದೀಗ ಈ ಹೇಳಿಕೆಗಳಿಗೆ ಸಂಬಂಧಪಟ್ಟಂತೆ ಮಾಜಿ ಸಚಿವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ