ಯಾದಗಿರಿ: ಪ್ರಚೋದನಕಾರಿ ಭಾಷಣ, ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಶ್ರೀ ವಿರುದ್ಧ ದೂರು ದಾಖಲು
ನಿಮ್ಮ ಹತ್ತಿರ ಮಂಡ್ ತಲ್ವಾರ್ ಇರಬಹುದು, ಆ ಮಂಡ್ ತಲ್ವಾರ್ನಿಂದ ನಮ್ಮನ್ನು ಹೆದುರಿಸಲು ಬಂದರೇ, ನಮ್ಮಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಖಡ್ಗ ಇದೆ, ಛತ್ರಪತಿ ಶಿವಾಜಿ ಮಹಾರಾಜರ ಖಡ್ಗ ಇದೆ ಏಕ್ ಮಾರ್ ದೋ ತುಕಡಾ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದ ಆಂದೋಲದ ಸಿದ್ದಲಿಂಗ ಶ್ರೀಗಳ ವಿರುದ್ಧ ಶಹಪುರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಾದಗಿರಿ ಅ.06: ಹಿಂದೂ ಮಹಾ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ (Sriram Sena) ರಾಜ್ಯಾಧ್ಯಕ್ಷ, ಆಂದೋಲದ ಸಿದ್ದಲಿಂಗ ಶ್ರೀಗಳ (Andola Siddalinga Sree) ವಿರುದ್ಧ ಶಹಾಪುರ ಠಾಣೆ (Shapur Police Station) ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ಟೋಬರ್ 3 ರಂದು ಯಾದಗಿರಿಯ ಶಹಾಪುರದ ನಗರದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮ ನಡೆದಿತ್ತು.
ಈ ಕಾರ್ಯಕ್ರಮದಲ್ಲಿ ಆಂದೋಲದ ಸಿದ್ದಲಿಂಗ ಶ್ರೀಗಳು, ನಿಮ್ಮ ಹತ್ತಿರ ಮಂಡ್ ತಲ್ವಾರ್ ಇರಬಹುದು, ಆ ಮಂಡ್ ತಲ್ವಾರ್ನಿಂದ ನಮ್ಮನ್ನು ಹೆದುರಿಸಲು ಬಂದರೇ, ನಮ್ಮಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಖಡ್ಗ ಇದೆ, ಛತ್ರಪತಿ ಶಿವಾಜಿ ಮಹಾರಾಜರ ಖಡ್ಗ ಇದೆ ಏಕ್ ಮಾರ್ ದೋ ತುಕಡಾ. ಹೊಡೆದರೆ ಒಂದು ದೇಹದ ಒಂದಯ ಪಾಕಿಸ್ತಾನಕ್ಕೆ ಹೋಗಿ ಬೀಳಬೇಕು, ಮತ್ತೊಂದು ದೇಹ ಬಾಂಗ್ಲಾದೇಶದಲ್ಲಿ ಬೀಳಬೇಕು. ಹಿಂದುಗಳನ್ನು ಕೆಣಕಬೆಡಿ, ಹಿಂದೂಗಳನ್ನ ಕೆಣಕಿದರೇ ಕರ್ನಾಟಕ ಎರಡನೇ ಗೋದ್ರಾ ಆಗುತ್ತದೆ ಎಂದು ಆಂದೋಲ ಶ್ರೀ ಕೋಮು ಪ್ರಚೋದನೆ ಭಾಷಣ ಮಾಡಿದ್ದರು.
ಇದನ್ನೂ ಓದಿ: ಕೊಪ್ಪಳ: ಗಣೇಶ ಮೆರವಣಿಗೆ ವೇಳೆ ಮಸೀದಿಗೆ ಮಂಗಳಾರತಿ; ಹಿಂದೂಪರ ಸಂಘಟನೆ ಕಾರ್ಯಕರ್ತರ ವಿರುದ್ಧ ದೂರು
ಈ ಹಿನ್ನೆಲೆಯಲ್ಲಿ ಶಹಾಪುರ ಠಾಣೆಯ ಪೊಲೀಸರು ಕೋಮು ಸೌಹಾರ್ದತೆಗೆ ಧಕ್ಕೆ, ಪ್ರಚೋದನೆ ಹಾಗೂ ಅನ್ಯ ಧರ್ಮೀಯರ ಭಾವನೆಗೆ ಧಕ್ಕೆ ತಂದ ಆರೋಪದಡಿ, ಶಹಾಪುರ ಪೊಲೀಸ್ ಠಾಣೆಯಲ್ಲಿ 295 (ಎ), 153 ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ