ಕೊಪ್ಪಳ: ಗಣೇಶ ಮೆರವಣಿಗೆ ವೇಳೆ ಮಸೀದಿಗೆ ಮಂಗಳಾರತಿ; ಹಿಂದೂಪರ ಸಂಘಟನೆ ಕಾರ್ಯಕರ್ತರ ವಿರುದ್ಧ ದೂರು

ಗಣೇಶ ಮೂರ್ತಿ ಮೆರವಣಿಗೆ ವೇಳೆ ದೊಡ್ಡ ಜಾಮೀಯಾ ಮಸೀದಿಗೆ ಮಂಗಳಾರತಿ ಮಾಡಿದ ಆರೋಪದಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ಪೊಲೀಸ್​ ಠಾಣೆಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ.

ಕೊಪ್ಪಳ: ಗಣೇಶ ಮೆರವಣಿಗೆ ವೇಳೆ ಮಸೀದಿಗೆ ಮಂಗಳಾರತಿ; ಹಿಂದೂಪರ ಸಂಘಟನೆ ಕಾರ್ಯಕರ್ತರ ವಿರುದ್ಧ ದೂರು
ಮಸಿದಿಗೆ ಮಂಗಳಾರತಿ
Follow us
| Updated By: ವಿವೇಕ ಬಿರಾದಾರ

Updated on: Oct 02, 2023 | 1:29 PM

ಕೊಪ್ಪಳ ಅ.02: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ (Ganesh Idol Procession) ವೇಳೆ ಮಸೀದಿಗೆ ಮಂಗಳಾರತಿ ಮಾಡಿದ ಹಿಂದೂಪರ ಸಂಘಟನೆಯ ಕಾರ್ಯಕರ್ತರ (Hindu Activist) ವಿರುದ್ಧ ಗಂಗಾವತಿ (Gangavati) ನಗರ ಠಾಣೆ ಪೊಲೀಸರು, ಧಾರ್ಮಿಕ ಸೌಹಾರ್ದಕ್ಕೆ ಧಕ್ಕೆ ಆರೋಪದ ಅಡಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಶ್ರೀಕಾಂತ್, ಕುಮಾರ್ ಹೂಗಾರ್, ಚನ್ನಬಸವ ಹೂಗಾರ್, ಸಂಗಮೇಶ ಅಯೋಧ್ಯಾ, ಯಮನೂರ ಎಂಬವವರ ಮೇಲೆ ಪ್ರಕರಣ ದಾಖಲಾಗಿದೆ.

ದೊಡ್ಡ ಜಾಮೀಯಾ ಮಸೀದಿಗೆ ಮಂಗಳಾರತಿ

2023ರ ಸೆಪ್ಟೆಂಬರ್​ 28 ರಂದು ಗಾಂಗಾವತಿ ನಗರದಲ್ಲಿ ಹಿಂದೂ ಮಹಾ ಮಂಡಳಿಯ ಗಣೇಶ ವಿಸರ್ಜನಾ ಮೆರವಣಿಗೆ ನಡೆದಿತ್ತು. ಮೆರವಣಿಗೆಯು ಸಾಯಂಕಾಲ 4 ಗಂಟೆಗೆ ಗಂಗಾವತಿ ಬಸ್ ನಿಲ್ದಾಣದಿಂದ ಪ್ರಾರಂಭವಾಗಿದ್ದು ಮೆರವಣಿಗೆ ಕೋರ್ಟಿ ಸರ್ಕಲ್, ಪಂಪಾನಗರ ಸರ್ಕಲ್, ಬಸವಣ್ಣ, ಸರ್ಕಲ್‌ ಮೂಲಕ ಸಾಗಿ ರಾತ್ರಿ 9: 45ರ ಸುಮಾರಿಗೆ ಗಾಂಧಿವೃತ್ತದ ಬಳಿ ಇದ್ದ ದೊಡ್ಡ ಜಾಮೀಯಾ ಮಸೀದಿಯ ಬಳಿ ಬಂದಿತ್ತು.

ಗಣೇಶ ಮೂರ್ತಿಯು ಮಸೀದಿಯ ಗೇಟ್​ನ ನೇರಕ್ಕೆ ಬಂದಾಗ ಮೆರವಣಿಗೆಯಲ್ಲಿದ್ದ ಶ್ರೀಕಾಂತ ಹೊಸಕೇರಿ, ಕುಮಾರ ಹೂಗಾರ, ಚನ್ನಬಸವ ಹೂಗಾರ, ಸಂಗಮೇಶ ಅಯೋಧ್ಯ ಹಾಗೂ ಇತರರು ಸೇರಿಕೊಂಡು ಗಲಭೆಯನ್ನು ಸೃಷ್ಟಿ ಮಾಡುವ ಉದ್ದೇಶದಿಂದಲೇ ಜೈ ಶ್ರೀರಾಮ, ಜೈ ಶ್ರೀರಾಮ, ಜೈ ಭೋಲೋ ಭಾರತ ಮಾತಾಕಿ ಜೈ, ಗವಿ ಗಂಗಾಧರೇಶ್ವರ ಮಹಾರಾಜಕಿ ಜೈ ಅಂತಾ ಘೋಷಣೆ ಕೂಗಿದ್ದರು.

ಇದನ್ನೂ ಓದಿ: 4 ವರ್ಷದ ಮಗು ಕೂದಲೆಳೆ ಅಂತರದಲ್ಲಿ ಪಾರು ! ರಾಗಿಗುಡ್ಡದ ಕಲ್ಲು ತೂರಾಟದ ಕರಾಳತೆ ಬಿಚ್ಚಿಟ್ಟ ಹಿಂದೂಗಳು

ನಂತರ ಕುಮಾರ ಹೂಗಾರ ಎಂಬವರು ಮಸೀದಿಯ ಬಾಗಿಲಿಗೆ ಆರತಿ ಮಾಡುತ್ತಾ ಜೈ ಶ್ರೀರಾಮ, ಜೈ ಶ್ರೀರಾಮ ಅಂತಾ ಘೋಷಣೆ ಕೂಗಿದ್ದಾರೆ. ಘಟನೆಯ ವಿಡಿಯೋವು ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ವೈರಲ್ ಆಗಿದೆ. ಯಮನೂರ ರಾಠೋಡ ಎಂಬುವರು ಸಾಮಾಜಿಕ ಜಾಲತಾಣ ಫೇಸ್​ಬುಕ್​ನಲ್ಲಿ ಮಸೀದಿಗೆ ಮಂಗಳಾರತಿ ಮಾಡಿರುವ ವಿಡಿಯೋವನ್ನು ಹಂಚಿಕೊಂಡು ಧರ್ಮೋ ರಕ್ಷತಿ ರಕ್ಷಿತಃ ಅಂತ ಕ್ಯಾಪ್ಷನ್​ ಬರೆದು ವೈರಲ್ ಮಾಡಿದ್ದಾರೆ.

ಅದರಂತೆ ಇತರರು ಸಹ ಮಸೀದಿಗೆ ಮಂಗಳಾರತಿ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲಾತಾಣಾದಲ್ಲಿ ವೈರಲ್ ಮಾಡಿದ್ದಾರೆ. ಇದರಿಂದ ಧಾರ್ಮಿಕ ಭಾವನಗಳಿಗೆ ದಕ್ಕೆ, ಮತ್ತು ನಗರದಲ್ಲಿ ಶಾಂತಿ ಕದಡುವ ಸಾಧ್ಯತೆ ಇರುತ್ತದೆ” ಎಂದು ಎಫ್​ಐಆರ್​​ನಲ್ಲಿ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ