Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ಬೂದಿ ಮುಚ್ಚಿದ ಕೆಂಡದಂತಿರುವ ಈದ್ ಮಿಲಾದ್ ಕಟೌಟ್​ ವಿವಾದ: ಏನಿದು ವಿವಾದ? ಆರಂಭವಾಗಿದ್ದೇಗೆ? ಇಲ್ಲಿದೆ ವಿವರ

ಶಿವಮೊಗ್ಗದಲ್ಲಿಂದು ಸಂಭ್ರಮ ಸಡಗರದಿಂದ ಈದ್ ಮಿಲಾದ್ ಹಬ್ಬದ ಆಚರಣೆ ನಡೆಯುತ್ತಿದೆ. ಮೊನ್ನೆಯಷ್ಟೇ ಹಿಂದೂ ಮಹಾಸಭಾ ಗಣಪತಿ ಅಬ್ಬರ ನೋಡಿದ ಜನರಿಗೆ ಇಂದು ಈದ್ ಮಿಲಾದ್ ಅಬ್ಬರದ ಮೆರವಣಿಗೆಯು ಗಮನ ಸೆಳೆದಿತ್ತು. ಈ ಹಬ್ಬದ ಸಂಭ್ರಮದ ನಡುವೆ ಟಿಪ್ಪು ಕಟೌಟ್ ವಿಚಾರವಾಗಿ ಒಂದಿಷ್ಟು ಗೊಂದಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.  ಏನೀದು ಟಿಪ್ಪು ಕಟೌಟ್ ವಿವಾದ ಅಂತೀರಾ? ಇಲ್ಲಿದೆ.

ಶಿವಮೊಗ್ಗ: ಬೂದಿ ಮುಚ್ಚಿದ ಕೆಂಡದಂತಿರುವ ಈದ್ ಮಿಲಾದ್ ಕಟೌಟ್​ ವಿವಾದ: ಏನಿದು ವಿವಾದ? ಆರಂಭವಾಗಿದ್ದೇಗೆ? ಇಲ್ಲಿದೆ ವಿವರ
ಶಿವಮೊಗ್ಗ ಈದ್​-ಮಿಲಾದ್​
Follow us
Basavaraj Yaraganavi
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 01, 2023 | 6:15 PM

ಶಿವಮೊಗ್ಗ, ಅ.01: ಇಂದು ಶಿವಮೊಗ್ಗ(Shivamogga)ದಲ್ಲಿ ಸಂಭ್ರಮ ಸಡಗರದಿಂದ ಈದ್ ಮಿಲಾದ್ ಹಬ್ಬದ ಆಚರಣೆ ನಡೆಯುತ್ತಿದೆ. ಆದರೆ, ಇದ್ದಕ್ಕಿದ್ದಂತೆ ಮುಸ್ಲಿಂ ಮಹಿಳೆಯರು ಸೇರಿದಂತೆ ಹಲವರು ಬೀದಿಗೆ ಇಳಿದು ಹೋರಾಟಕ್ಕೆ ಧುಮುಕಿದ್ದಲ್ಲದೆ, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಅಷ್ಟೇ ಅಲ್ಲದೇ ಶಿವಮೊಗ್ಗ-ಹೊನ್ನಾಳಿ ರಸ್ತೆಯನ್ನು ತಡೆದು ನ್ಯಾಯಬೇಕೆಂದು ಘೋಷಣೆ  ಕೂಡ ಕೂಗಿದ್ದರು. ಹೌದು, ಈದ್‌ ಮಿಲಾದ್‌ (Eid Milad Un Nabi) ಮೆರವಣಿಗೆ ಹಿನ್ನಲೆ ಶಿವಮೊಗ್ಗದ ರಾಗಿಗುಡ್ಡ- ಶಾಂತಿನಗರದಲ್ಲಿ ಟಿಪ್ಪು ಸುಲ್ತಾನ್ ಕಟೌಟ್ (CutOut) ಅಳವಡಿಸಲಾಗಿತ್ತು. ಈ ವೇಳೆ ಟಿಪ್ಪುವಿನ ಕಟೌಟ್​ನ ಕೆಳಭಾಗದಲ್ಲಿ ಆಕ್ಷೇಪಾರ್ಹ ಸಂಗತಿ ಇದ್ದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯು ಬಿಳಿ ಬಣ್ಣವನ್ನು ಬಳಿದಿದ್ದರು. ಇದರಿಂದ ರೊಚ್ಚಿಗೆದ್ದ ರಾಗಿಗುಡ್ಡದ ಶಾಂತಿನಗರ ನಿವಾಸಿಗಳು, ಯಾಕೇ ಟಿಪ್ಪುವಿನ ಕಟೌಟ್​ನ ಕೆಳಭಾಗದಲ್ಲಿರುವ ಚಿತ್ರಕ್ಕೆ ಬಿಳಿ ಬಣ್ಣ ಹಾಕಿದ್ದೀರಿ ಎಂದು ವಿರೋಧ ವ್ಯಕ್ತಪಡಿಸಿದರು.

ಘಟನಾ ಸ್ಥಳಕ್ಕೆ ಎಂಟ್ರಿ ಕೊಟ್ಟು ಪರಿಸ್ಥಿತಿ ತಿಳಿಗೊಳಿಸಿದ ಎಸ್ಪಿ

ಇನ್ನು ಕೆಲವೇ ಕ್ಷಣದಲ್ಲಿ ಪರಿಸ್ಥಿತಿಯು ಮಿತಿಮೀರಿ ಹೋಗಿತ್ತು. ಸ್ಥಳದಲ್ಲಿ ಬಿಗುವಿನ ವಾತಾವರಣ. ಹೆಚ್ಚಿನ ಪೊಲೀಸ್ ಭದ್ರತೆಗೆ ಎಸ್ಪಿ ಮುಂದಾಗಿದ್ದರು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಘಟನಾ ಸ್ಥಳಕ್ಕೆ ಎಸ್ಪಿ ಭೇಟಿ ನೀಡಿದರು. ಈ ವೇಳೆ ಎಸ್ಪಿ ಅವರ ಮುಂದೆ ಸ್ಥಳೀಯರು ತಮ್ಮ ಬೇಸರ, ಸಿಟ್ಟು ಹೊರಹಾಕಿದರು. ಟಿಪ್ಪುವಿನ ಕಟೌಟ್ ಗೆ ಬಿಳಿ ಬಣ್ಣ ಹಾಕಿ ಕೆಳಭಾಗವನ್ನು ಕವರ್ ಮಾಡಿರುವ ಕ್ರಮವನ್ನು ಪ್ರಶ್ನಿಸಿದರು. ಒಂದೆಡೆ ಎಸ್ಪಿ ಅವರು ಮುಸ್ಲಿಂ ಮುಖಂಡರ ಮತ್ತು ಸ್ಥಳೀಯರ ಜೊತೆ ಘಟನೆ ಕುರಿತು ಚರ್ಚೆ ಮಾಡುತ್ತಿದ್ದರೆ, ಮತ್ತೊಂದೆಡೆ ಈ ಭಾಗದ ಮಹಿಳೆಯರು ರಾಜ್ಯ ಹೆದ್ದಾರಿ ತಡೆದು ಆಕ್ರೋಶ ಹೊರಹಾಕುತ್ತಿದ್ದರು. ಹಠಾತ್ ರಸ್ತೆ ತಡೆಯಿಂದ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಗಿ, ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು. ಬಳಿಕ ಎಸ್ಪಿ ಅವರು ಮಾತುಕತೆ ನಡೆಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಇದನ್ನೂ ಓದಿ:ಶಿವಮೊಗ್ಗ: ತೀವ್ರ ಸ್ವರೂಪ ಪಡೆದ ಈದ್ ಮಿಲಾದ್​ ಕಟೌಟ್ ವಿವಾದ: ಶೇರ್ ಟಿಪ್ಪು ಎಂದು ರಕ್ತದಲ್ಲೇ ಬರೆದ ಮುಸ್ಲಿಂ ಯುವಕ

ರಕ್ತದಿಂದ ಪೊಲೀಸರು ಬಳಿದ ಬಿಳಿ ಬಣ್ಣಕ್ಕೆ ಶೇರ್ ಟಿಪ್ಪು ಎಂದು ಬರೆದ ಯುವಕ

ಹೌದು, ರಾಗಿಗುಡ್ಡದಲ್ಲಿ ಟಿಪ್ಪುವಿನ ಕಟೌಟ್ ವಿವಾದವು ತಾರಕ್ಕೇರಿತ್ತು. ಬಿಳಿ ಬಣ್ಣ ಹಾಕಿದ ಸ್ಥಳಕ್ಕೆ ಏನಾದ್ರೂ ಬರೆಯಬೇಕೆಂದು ಸ್ಥಳೀಯ ಮುಸ್ಲಿಂ ಅವರು ಪಟ್ಟು ಹಿಡಿದಿದ್ದರು. ಈ ನಡುವೆ ಅಲ್ಲಿದ್ದ ಓರ್ವ ಯುವಕ ರಕ್ತದಿಂದ ಪೊಲೀಸರು ಬಳಿದ ಬಿಳಿ ಬಣ್ಣಕ್ಕೆ ಶೇರ್ ಟಿಪ್ಪು ಎಂದು ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದ. ನೂರಾರು ಜನರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು. ಇನ್ನು ಯಾವಾಗ ಬಿಳಿ ಬಣ್ಣದ ಮೇಲೆ ಶೇರ್ ಟಿಪ್ಪು ಬರೆದನೋ ಆವಾಗ ಪ್ರತಿಭಟನಾಕಾರರ ಆಕ್ರೋಶವು ತಣ್ಣಗಾಯಿತು. ಸೂಕ್ತ ಸಮಯದಲ್ಲಿ ಎಸ್ಪಿ ಅವರು ಕ್ರಮಕ್ಕೆ ಮುಂದಾಗಿದ್ದರಿಂದ ಮುಂದೆ ಆಗುವ ಎಲ್ಲ ಗಂಡಾಂತರಗಳನ್ನು ತಪ್ಪಿಸುವಲ್ಲಿ ಯಶಸ್ವಿಯಾದರು.

ಬೂದಿ ಮುಚ್ಚಿದ ಕೆಂಡದಂತಾಗಿದ್ದ ರಾಗಿಗುಡ್ಡ

ಇನ್ನು ರಾಗಿಗುಡ್ಡ ಮತ್ತು ಶಾಂತಿನಗರ ತಡರಾತ್ರಿಯಿಂದ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಬಳಿಕ ಹಂತ ಹಂತವಾಗಿ ಸಹಜ ಸ್ಥಿತಿಗೆ ಬಂದಿತು. ಮದ್ಯಾಹ್ನ ಮೂರು ಘಂಟೆಯಿಂದ ಶಿವಮೊಗ್ಗದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮೆರವಣಿಗೆಯು ಆರಂಭಗೊಂಡಿತ್ತು. ಅಮೀರ್ ಅಹ್ಮದ್ ವೃತ್ತ, ಗಾಂಧಿ ಬಜಾರ್, ಟ್ಯಾಂಕ್ ಮೊಹಲ್ಲಾ, ದೇವರಾಜ್ ಅರಸ ರಸ್ತೆ, ಮಾಹವೀರ್ ವೃತ್ತ ಗೋಪಿ ವೃತ್ತ. ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಅಬ್ಬರದ ಈದ್ ಮಿಲಾದ್ ಮೆರವಣಿಗೆಯು ನಡೆಯಿತು. ಮೆರವಣಿಗೆಯಲ್ಲಿ ಟಿಪ್ಪು ವೇಷ ಭೂಷಣ ಮತ್ತು ವಿವಿಧ ಮುಸ್ಲಿಂರ ಧಾರ್ಮಿಕ ಧ್ವಜಗಳು ರಾರಾಜಿಸುತ್ತಿದ್ದವು.  ನಗರದಲ್ಲಿ ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದು, ಪೊಲೀಸರ ಬಿಗಿ ಭದ್ರತೆಯಲ್ಲಿ ಈದ್ ಮಿಲಾದ್ ಮೆರವಣಿಗೆಯು ಸಡಗರದಿಂದ ನಡೆಯಿತು.

ಸಣ್ಣ ವಿಚಾರ, ದೊಡ್ಡ ವಿವಾದಕ್ಕೆ ಕಾರಣವಾಗಿತ್ತು

ಒಂದೇ ಒಂದು ಸಣ್ಣ ವಿಚಾರವು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಟಿಪ್ಪುವಿನ ಕಟೌಟ್​ನಲ್ಲಿಯ ವಿವಾದವು ಇಂದಿನ ಹಬ್ಬದ ಮೇಲೆ ಕರಿನೆರಳು ಬಿದ್ದಿತ್ತು. ಆದ್ರೆ, ಶಿವಮೊಗ್ಗ ಎಸ್ಪಿ ಅವರ ಜಾಣತನದಿಂದ ಬಿರುಗಾಳಿ ಅಂತೆ ಎದ್ದಿದ್ದ ಟಿಪ್ಪು ಕಟೌಟ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು. ಇದರ ಪರಿಣಾಮ ನಗರದಲ್ಲಿ ಶಾಂತಿಯುತವಾಗಿ ಈದ್ ಮಿಲಾದ್ ಹಬ್ಬದ ಆಚರಣೆಯು ಅದ್ಧೂರಿಯಾಗಿ ನಡೆಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಾಸನ: ಭಾರಿ ಮಳೆಗೆ ಸೋರುತಿಹುದು ರೈಲ್ವೆ ನಿಲ್ದಾಣ ಮಾಳಿಗಿ!
ಹಾಸನ: ಭಾರಿ ಮಳೆಗೆ ಸೋರುತಿಹುದು ರೈಲ್ವೆ ನಿಲ್ದಾಣ ಮಾಳಿಗಿ!
ಪೈಲಟ್​ ಸಿದ್ಧಾರ್ಥ್​ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು
ಪೈಲಟ್​ ಸಿದ್ಧಾರ್ಥ್​ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು
ತಮ್ಮ 25ನೇ ವಿವಾಹ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡುತ್ತಿರುವಾಗ ಹೃದಯಾಘಾತ
ತಮ್ಮ 25ನೇ ವಿವಾಹ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡುತ್ತಿರುವಾಗ ಹೃದಯಾಘಾತ
Daily Devotional: ಮಡಿಕೆಯಲ್ಲಿ ನೀರಿನ ಮಹತ್ವ ಹಾಗೂ ಅದರ ಹಿಂದಿನ ರಹಸ್ಯ
Daily Devotional: ಮಡಿಕೆಯಲ್ಲಿ ನೀರಿನ ಮಹತ್ವ ಹಾಗೂ ಅದರ ಹಿಂದಿನ ರಹಸ್ಯ
Daily Horoscope: ಈ ರಾಶಿಗಳಿಗೆ ಇಂದು ಅನುಕೂಲಕರವಾದ ದಿನವಾಗಿರಲಿದೆ
Daily Horoscope: ಈ ರಾಶಿಗಳಿಗೆ ಇಂದು ಅನುಕೂಲಕರವಾದ ದಿನವಾಗಿರಲಿದೆ
ಸಾಲ ಮಾಡಿದ್ದೇನೆ, ಎಲ್ಲ ಅಡ ಇಟ್ಟಿದ್ದೇನೆ: ಪರಿಸ್ಥಿತಿ ತಿಳಿಸಿದ ಅಜಯ್ ರಾವ್
ಸಾಲ ಮಾಡಿದ್ದೇನೆ, ಎಲ್ಲ ಅಡ ಇಟ್ಟಿದ್ದೇನೆ: ಪರಿಸ್ಥಿತಿ ತಿಳಿಸಿದ ಅಜಯ್ ರಾವ್
ಜಿಲ್ಲಾಧಿಕಾರಿ ಕಚೇರಿಯೆದುರು ನಮಾಜ್ ಮಾಡಿದ ವೃದ್ಧೆ; ಸೆಕ್ಯುರಿಟಿ ಸಸ್ಪೆಂಡ್
ಜಿಲ್ಲಾಧಿಕಾರಿ ಕಚೇರಿಯೆದುರು ನಮಾಜ್ ಮಾಡಿದ ವೃದ್ಧೆ; ಸೆಕ್ಯುರಿಟಿ ಸಸ್ಪೆಂಡ್
ಜಾಮ್‌ನಗರದ ಬಳಿ ವಾಯುಪಡೆಯ ಯುದ್ಧ ವಿಮಾನ ಪತನವಾದ ಕ್ಷಣ ಸಿಸಿಟಿವಿಯಲ್ಲಿ ಸೆರೆ
ಜಾಮ್‌ನಗರದ ಬಳಿ ವಾಯುಪಡೆಯ ಯುದ್ಧ ವಿಮಾನ ಪತನವಾದ ಕ್ಷಣ ಸಿಸಿಟಿವಿಯಲ್ಲಿ ಸೆರೆ
ಮಳೆಯಿಂದ ಕೆರೆಯಂತಾದ ಬೆಂಗಳೂರಿನ ಕಲ್ಯಾಣ ನಗರದ ಓಆರ್​ಆರ್​ ಸರ್ವಿಸ್ ರಸ್ತೆ
ಮಳೆಯಿಂದ ಕೆರೆಯಂತಾದ ಬೆಂಗಳೂರಿನ ಕಲ್ಯಾಣ ನಗರದ ಓಆರ್​ಆರ್​ ಸರ್ವಿಸ್ ರಸ್ತೆ
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು