ಹವಾಮಾನ ವೈಪರೀತ್ಯ, ಲ್ಯಾಂಡ್‌ ಆಗದ ಪರಮೇಶ್ವರ್ ಪ್ರಯಾಣಿಸ್ತಿದ್ದ ವಿಮಾನ ಬೆಂಗಳೂರಿಗೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 13, 2024 | 3:23 PM

ಸೊರಬ ಹಾಗೂ ತೀರ್ಥಹಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪೊಲೀಸ್ ಠಾಣೆ ಉದ್ಘಾಟನೆ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಗೃಹ ಸಚಿವ ಜಿ.ಪರಮೇಶ್ವರ ವಿಮಾನದ ಮೂಲಕ ಬರುತ್ತಿದ್ದರು. ಈ ವೇಳೆ ಹವಾಮಾನ ವೈಪರಿತ್ಯದಿಂದ ವಿಮಾನ ಶಿವಮೊಗ್ಗದಲ್ಲಿ ಲ್ಯಾಂಡ್ ಆಗದೆ, ಪುನಃ ಬೆಂಗಳೂರಿಗೆ ವಾಪಸ್ಸಾ ಆಗಿದೆ.

ಹವಾಮಾನ ವೈಪರೀತ್ಯ, ಲ್ಯಾಂಡ್‌ ಆಗದ ಪರಮೇಶ್ವರ್ ಪ್ರಯಾಣಿಸ್ತಿದ್ದ ವಿಮಾನ ಬೆಂಗಳೂರಿಗೆ
ಹವಾಮಾನ ವೈಪರೀತ್ಯದಿಂದ ಲ್ಯಾಂಡ್‌ ಆಗದ ಪರಮೇಶ್ವರ್ ಪ್ರಯಾಣಿಸ್ತಿದ್ದ ವಿಮಾನ
Follow us on

ಶಿವಮೊಗ್ಗ, ಜು.13: ಹವಾಮಾನ ವೈಪರಿತ್ಯ ಹಿನ್ನೆಲೆ ಗೃಹ ಸಚಿವ ಪರಮೇಶ್ವರ್(G.Parameshwara ) ಪ್ರಯಾಣಿಸುತ್ತಿದ್ದ ಇಂಡಿಗೋ‌ ವಿಮಾನ(indigo flight) ಲ್ಯಾಂಡ್ ಆಗಿಲ್ಲ. ಸೊರಬದಲ್ಲಿ ನೂತನ ಪೊಲೀಸ್ ಠಾಣೆ ಉದ್ಘಾಟನೆ ಕಾರ್ಯಕ್ರಮಕ್ಕಾಗಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನದಲ್ಲಿ ಆಗಮಿಸುತ್ತಿದ್ದರು. ಬಳಿಕ ಶಿವಮೊಗ್ಗದಿಂದ ಸೊರಬಕ್ಕೆ ರಸ್ತೆ ಮಾರ್ಗವಾಗಿ ಪರಮೇಶ್ವರ್ ತೆರಳಬೇಕಿತ್ತು. ಅಷ್ಟರಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರಿಗೆ ವಾಪಸ್ಸಾದ ವಿಮಾನ

ಸೊರಬ ಹಾಗೂ ತೀರ್ಥಹಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪೊಲೀಸ್ ಠಾಣೆ ಉದ್ಘಾಟನೆ ಕಾರ್ಯ್ರಮಕ್ಕೆ ವಿಮಾನದ ಮೂಲಕ ಬರುತ್ತಿದ್ದರು. ಈ ವೇಳೆ ವಿಮಾನ ಲ್ಯಾಂಡ್ ಆಗದ ಕಾರಣ ಪುನಃ ಬೆಂಗಳೂರಿಗೆ ವಾಪಸ್ಸಾ ಆಗಿದೆ.

ಇದನ್ನೂ ಓದಿ:ಒಂದು ದಿನ ಕೆಲಸ 6 ದಿನ ವಿಶ್ರಾಂತಿ, ವಿಮಾನದಲ್ಲಿ 1,500 ಕಿ.ಮೀ ದೂರ ಪ್ರಯಾಣಿಸಿ ದರೋಡೆ ಮಾಡ್ತಿದ್ದ ಗ್ಯಾಂಗ್​ ಸೆರೆ

ಈ ಕುರಿತು ಸೊರಬದಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ಗೃಹ ಸಚಿವರು ಬರಬೇಕಿದ್ದ ವಿಮಾನ ಲ್ಯಾಂಡ್ ಆಗದೆ  ವಾಪಾಸ್​ ಬೆಂಗಳೂರಿಗೆ ಹೋಗಿದೆ. ‘ತೀರ್ಥಹಳ್ಳಿ ಕಾರ್ಯಕ್ರಮಕ್ಕೆ ನಾನೇ ಹೋಗುತ್ತೇನೆ. ಮಳೆಗಾಲದಲ್ಲಿ ಏನಾದರೂ ಹಾನಿಯಾಗಿದೆಯಾ ಎನ್ನುವ ಕುರಿತು ಸಭೆ ನಡೆಸಿದ್ದೇನೆ. 34% ರಷ್ಟು ಸೊರಬದಲ್ಲಿ ಮಳೆ ಕಡಿಮೆ ಇದೆ. ಡೆಂಘೀ ಪ್ರಕರಣಗಳು ಸಹ ಕಡಿಮೆ ಆಗಿದೆ. ಆರೋಗ್ಯ ಇಲಾಖೆಯಿಂದ ಜಾಗೃತಿ ಚೆನ್ನಾಗಿ ಆಗಿದೆ. ಜೊತೆಗೆ ಈ ಬಾರೀ ಕೃಷಿ ಚಟುವಟಿಕೆಗಳೂ ಕೂಡ ಚೆನ್ನಾಗಿದೆ ಎಂದರು.

ಇದೇ ವೇಳೆ ‘ವರದಾ ನದಿಯಿಂದ ನೀರಾವರಿ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಎರಡು ತಿಂಗಳಲ್ಲಿ ಯೋಜನೆಯ ಕಾಮಗಾರಿ ಪ್ರಾರಂಭ ಆಗಲಿದೆ. ಇನ್ನು 5% ಅತಿಥಿ ಶಿಕ್ಷಕರ ಸಮಸ್ಯೆ ನನ್ನ ಕ್ಷೇತ್ರದಲ್ಲಿದೆ. ನಮ್ಮ ಇಲಾಖೆಯಿಂದ ವಾರಪೂರ್ತಿ ಮೊಟ್ಟೆ ಕೊಡುತ್ತಿದ್ದೇವೆ. 1500 ಕೋಟಿ ರೂಪಾಯಿ ಅಜೀತ್ ಪ್ರೇಮಜಿ ಫೌಂಡೇಷನ್ ನೀಡುತ್ತಿದೆ. ಮಕ್ಕಳಿಗೆ ಪೌಷ್ಟಿಕತೆ ನೀಡುವ ನಿಟ್ಟಿನಲ್ಲಿ ರಾಗಿ ಮಾಲ್ಟ್ ನೀಡುತ್ತಿದ್ದೇವೆ. ಅಭಿವೃದ್ಧಿ ಕಾರ್ಯಗಳು ಇನ್ನು ಮುಂದೆ ಆಗುವ ವಿಶ್ವಾಸ ಇದೆ. ಶರಾವತಿ ನದಿಯಿಂದ ಕುಡಿಯುವ ನೀರಿನ ಯೋಜ‌ನೆ ಮಾಡುತ್ತೇವೆ. ಇದರಿಂದ 354 ಹಳ್ಳಿಗಳಿಗೆ ಕುಡಿಯುವ ನೀರು ಕೊಡುವ ಯೋಜನೆ ಆರಂಭಿಸಲಿದ್ದೇವೆ.

‘ಕಾನೂನು ಬದಲಾವಣೆ ಮಾಡಿ ಜನರಿಗೆ ಸಹಕಾರ ಮಾಡಬೇಕು. ಅರಣ್ಯ ಇಲಾಖೆ ಅಧಿಕಾರಿಗಳಿಗೆ ರೈತರಿಗೆ ಒಕ್ಕಲೆಬ್ಬಿಸದಂತೆ ಸಚಿವರು ಸೂಚನೆ ನೀಡಿದ್ದಾರೆ. ದಂಡಾವತಿಯಲ್ಲಿ ಎರಡು ಚಾನಲ್ ಮಾಡಿ ನೀರಾವರಿ ಯೋಜನೆ ಮಾಡುತ್ತೇವೆ. ಡ್ಯಾಂ ಮಾಡಿ ಜನರನ್ನು ಮುಳುಗಿಸೋಲ್ಲ, ಜಲಾಶಯಗಳ ನೀರು ಪೋಲಾಗದಂತೆ ಕ್ರಿಯಾ ಯೋಜನೆ ಸಿದ್ದ ಮಾಡಲಾಗುತ್ತಿದೆ. ಡ್ಯಾಂ ನೀರಿನ ಸಂರಕ್ಷಣೆ ಮಾಡುವ ಕೆಲಸ ಮಾಡುತ್ತೇವೆ.

ಇನ್ನು ಮುಡಾ ಪ್ರಕರಣ ವಿಚಾರ, ‘ಮುಖ್ಯಮಂತ್ರಿ ಗಳು ಸ್ಪಷ್ಟವಾಗಿ ಮಾಹಿತಿ ನೀಡಿ, ಯಾವುದು ಭ್ರಷ್ಟಾಚಾರ ಆಗಿಲ್ಲ ಅಂದಿದ್ದಾರೆ. ಸಿಎಂ ತನಿಖೆ ಮಾಡಬೇಡಿ ಅಂದಿದ್ದಾರಾ ಇಲ್ಲಾ ತಾನೇ, ಈಗಾಗಲೇ ನಾಗೇಂದ್ರ ಅರೆಸ್ಟ್ ಆಗಿದ್ದಾರೆ. ಕಾನೂನು ಬದ್ದವಾಗಿ ತನಿಖೆ ಆಗಲಿ. ನಾನು ನೀವು ಏನು ಹೇಳಲು ಆಗೋದಿಲ್ಲ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:15 pm, Sat, 13 July 24