AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ದಿನ ಕೆಲಸ 6 ದಿನ ವಿಶ್ರಾಂತಿ, ವಿಮಾನದಲ್ಲಿ 1,500 ಕಿ.ಮೀ ದೂರ ಪ್ರಯಾಣಿಸಿ ದರೋಡೆ ಮಾಡ್ತಿದ್ದ ಗ್ಯಾಂಗ್​ ಸೆರೆ

ವಿಮಾನದಲ್ಲಿ 1,500 ಕಿ.ಮೀ ದೂರ ಪ್ರಯಾಣಿಸಿ ದರೋಡೆ ನಡೆಸುತ್ತಿದ್ದ ಗ್ಯಾಂಗ್​ನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಉತ್ತರ ಪ್ರದೇಶದಿಂದ ಮುಂಬೈಗೆ ತೆರಳಿ ಈ ಗ್ಯಾಂಗ್ ವಾರಕ್ಕೊಂದು ದರೋಡೆ ನಡೆಸುತ್ತಿತ್ತು.

ಒಂದು ದಿನ ಕೆಲಸ 6 ದಿನ ವಿಶ್ರಾಂತಿ, ವಿಮಾನದಲ್ಲಿ 1,500 ಕಿ.ಮೀ ದೂರ ಪ್ರಯಾಣಿಸಿ ದರೋಡೆ ಮಾಡ್ತಿದ್ದ ಗ್ಯಾಂಗ್​ ಸೆರೆ
ವಿಮಾನ
ನಯನಾ ರಾಜೀವ್
|

Updated on: Jul 12, 2024 | 9:13 AM

Share

ಕಳ್ಳ ಎಷ್ಟೇ ಬುದ್ಧಿವಂತನಾಗಿದ್ದರೂ ಒಂದಲ್ಲಾ ಒಂದು ದಿನ ಸಿಕ್ಕಿ ಬೀಳಲೇಬೇಕು, ವಿಮಾನದಲ್ಲಿ 1,500 ಕಿ.ಮೀ ದೂರ ಪ್ರಯಾಣಿಸಿ ದರೋಡೆ ಮಾಡುತ್ತಿದ್ದ ಗ್ಯಾಂಗ್​ನ್ನು ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್​ ವಾರಕ್ಕೆ ಒಂದು ದಿನ ಮಾತ್ರ ಕೆಲಸ ಮಾಡುತ್ತಿತ್ತು, ಬಳಿಕ ಗ್ಯಾಂಗ್​ನಲ್ಲಿದ್ದ ಜನರು ಆರು ದಿನಗಳ ಕಾಲ ವಿಶ್ರಾಂತಿ ಪಡೆಯುತ್ತಿದ್ದರು. ಉತ್ತರ ಪ್ರದೇಶದ ಮೀರತ್​ನಿಂದ ವಿಮಾನದಲ್ಲಿ 1500 ಕಿ.ಮೀ ದೂರದಲ್ಲಿರುವ ಮುಂಬೈಗೆ ತೆರಳಿ ಲೂಟಿ ಮಾಡುತ್ತಿದ್ದರು.

ಈ ಗ್ಯಾಂಗ್​ನ ವಿಶೇಷವೆಂದರೆ ಬೆಳಗ್ಗೆ ವಿಮಾನದಲ್ಲಿ ಹೋಗಿ ಲೂಟಿ ಮಾಡುತ್ತಿತ್ತು ಸಂಜೆ ವಿಮಾನದಲ್ಲಿ ವಾಪಸಾಗುತ್ತಿತ್ತು. ಮುಂಬೈನ ಮಾಟುಂಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಬಲ್ ಡೆಕ್ಕರ್ ಬಸ್‌ನಲ್ಲಿ ಮಹಿಳೆಯ ಚಿನ್ನಾಭರಣ ಲೂಟಿ ಮಾಡಿರುವ ಘಟನೆ ವರದಿಯಾಗಿತ್ತು.

ಗ್ಯಾಂಗ್​ನ ಸದಸ್ಯರು ಮಹಿಳೆಗೆ ಕಾಫಿ ಕುಡಿದಿ ಪ್ರಜ್ಞೆ ತಪ್ಪಿಸಿ ಸರ ಹಾಗೂ ಇತರೆ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಈ ಹಿಂದೆಯೂ ಇಂಥಾ ಕೆಲವು ಘಟನೆಗಳು ವರದಿಯಾಗಿದ್ದವು. ಮಾಟುಂಗಾ ಪೊಲೀಸರು ತನಿಖೆ ಆರಂಭಿಸಿದಾಗ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ.

ಮತ್ತಷ್ಟು ಓದಿ: ಪತಿಯ ಹಣಕ್ಕಿಂತ ಸ್ನೇಹ ಮುಖ್ಯ: ಸಾಲ ತೀರಿಸಲಾಗದೆ ಪರದಾಡುತ್ತಿದ್ದ ಸ್ನೇಹಿತೆಗಾಗಿ ದರೋಡೆ ನಾಟಕವಾಡಿದ ಗೆಳತಿ

ಈ ದುಷ್ಕರ್ಮಿಗಳು ಒಂದೇ ಗ್ಯಾಂಗ್‌ಗೆ ಸೇರಿದವರು ಎಂದು ತಿಳಿದುಬಂದಿದೆ. ವಾರಕ್ಕೊಮ್ಮೆ ಮಾತ್ರ ದರೋಡೆ ಮಾಡುತ್ತಾರೆ. ಇದಕ್ಕಾಗಿ ಅವರು ಮೀರತ್‌ನಿಂದ ಮುಂಬೈಗೆ ಬಂದು ಅದೇ ಸಂಜೆ ಹಿಂತಿರುಗುತ್ತಾರೆ. ಪೊಲೀಸರು ಆರೋಪಿಯ ಸ್ಥಳವನ್ನು ಪತ್ತೆ ಮಾಡಿದರು ಮತ್ತು ಮೀರತ್‌ನ ಕೊತ್ವಾಲಿ ಪ್ರದೇಶದಲ್ಲಿ ದಾಳಿ ನಡೆಸಿದರು.

ಮುಂಬೈ ಪೊಲೀಸರು ಮೀರತ್‌ನ ಶಹನಾಥನ್‌ನಿಂದ ಯೂನಸ್ ಎಂಬ ಕ್ರಿಮಿನಲ್ ಅನ್ನು ಹಿಡಿದಿದ್ದಾರೆ. ಆತನನ್ನು ವಿಚಾರಣೆಗೊಳಪಡಿಸಿದ ನಂತರ, ಪೊಲೀಸರು ಬ್ರಹ್ಮಪುರಿಯಲ್ಲಿ ಮತ್ತೊಬ್ಬ ಕ್ರಿಮಿನಲ್ ಹುಡುಕಲು ದಾಳಿ ನಡೆಸಿದರು ಆದರೆ ಆರೋಪಿಗಳು ಪರಾರಿಯಾಗಿದ್ದ.

ಮಾಟುಂಗಾ ಠಾಣೆಯಿಂದ ಬಂದ ಎಸ್‌ಐ ಸಂತೋಷ್ ಮಲಿಕ್ ಮಾತನಾಡಿ, ಈ ಇಬ್ಬರೂ ದುಷ್ಕರ್ಮಿಗಳು ಬಹಳ ದಿನಗಳಿಂದ ಅಪರಾಧ ಎಸಗುತ್ತಿದ್ದಾರೆ. ಅವರ ಗ್ಯಾಂಗ್‌ನಲ್ಲಿ ಇನ್ನೂ ಅನೇಕ ಜನರು ಸೇರಿದ್ದಾರೆ. ಅವರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ