19 ವಯಸ್ಸಿನ ಯುವಕನೊಂದಿಗೆ 32ರ ಆಂಟಿ ಎಸ್ಕೇಪ್, ತಮಿಳುನಾಡಿಗೆ ಹೋಗಿ ಮದುವೆಯಾದ ಜೋಡಿ
ಮಲ್ಲಿಗೆನಹಳ್ಳಿ ದಿನಸಿ ಅಂಗಡಿ ಇಟ್ಟುಕೊಂಡಿದ್ದ ಆರ್ಚನಾ ಆಂಟಿಯೊಂದಿಗೆ ಮಧು ಪರಿಚಯವಾಗಿದೆ. ಇಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿದೆ. ಅಂದಹಾಗೆ ಮಧು ನಾಪತ್ತೆಯಾದ ದಿನದಿಂದಲೂ ಆಂಟಿ ದಿನಸಿ ಅಂಗಡಿಯೂ ಕ್ಲೋಸ್ ಆಗಿದೆ.
ಶಿವಮೊಗ್ಗ: ಈ ಪ್ರೀತಿಗಿರೋ ಪವರ್ ಅಂತಹದು.. ಯಾವ್ ಟೈಮ್ನಲ್ಲಿ.. ಯಾರ್ ಮೇಲೆ ಲವ್ ಆಗಿಬಿಡುತ್ತೋ ಹೇಳೋಕೆ ಆಗಲ್ಲ. ಆದ್ರೆ, ಒಂದ್ ಸಾರಿ ಕಮಿಟ್ ಆದ್ರೆ ಮುಗೀತ್.. ಪ್ರಪಂಚವೇ ತಲೆಕೆಳಗಾದ್ರೂ ಪ್ರೇಮಿಗಳು ಮಾತ್ರ ಬೇರೆ ಆಗಲ್ಲ.. ಇಲ್ಲೂ ಅಷ್ಟೇ ಅಂತಹದ್ದೇ ಒಂದು ಲವ್ ಸ್ಟೋರಿ ಇದೆ.
ತಾಯಿ-ತಂದೆ ನೂರಾರು ಕನಸುಗಳನ್ನ ಕಂಡಿದ್ರು. ಪ್ರತಿದಿನ, ಪ್ರತಿಕ್ಷಣ ಮಗನ ಭವಿಷ್ಯಕ್ಕಾಗಿ ದುಡಿಯುತ್ತಿದ್ರು. ಮಗನಿಗೆ ಒಂದೊಳ್ಳೆ ಜೀವನ ರೂಪಿಸಿ ಖುಷಿಯಾಗಿ ಇರಿಸೋಣ ಅಂತಿದ್ರು. ಆದ್ರೆ ಹೆತ್ತವರ ಆಸೆ.. ಆಕಾಂಕ್ಷೆಗಳನ್ನ ಈ ಕುಲಪುತ್ರ ಚಿವುಟಿ ಹಾಕಿದ್ದಾನೆ. ಹಗಲು ರಾತ್ರಿ ಕಣ್ಣೀರು ಸುರಿಸುವಂತೆ ಮಾಡಿದ್ದಾನೆ.
ಶಿವಮೊಗ್ಗ ತಾಲೂಕಿನ ಮಲ್ಲಿಗೆನಹಳ್ಳಿ ನಿವಾಸಿ ಮಧು(19) ಆಟೋ ಓಡಿಸಿಕೊಂಡು ತಂದೆ ತಾಯಿ ಜೊತೆಯಲ್ಲೇ ಇದ್ದ. ಡಿಸೆಂಬರ್ 10ರಂದು ಮನೆಯಿಂದ ಹೋದವನ್ನು ವಾಪಸ್ ಬಂದೇ ಇಲ್ಲ.. ಪೋಷಕರು ಎಲ್ಲೋ ಟ್ರಿಪ್ ಹೋಗಿರಬೇಕು ಬರ್ತಾನೆ ಬಿಡು ಅಂತಾ ಸುಮ್ಮನಾಗಿದ್ದಾರೆ. ಮೂರ್ನಾಲ್ಕು ದಿನ ಆಗ್ತಿದ್ದಂತೆ ಊರಲ್ಲೆಲ್ಲಾ ಗುಸು ಗುಸು ಶುರುವಾಗಿದೆ. ವಿಧವೆ ಆಂಟಿಯೊಬ್ಬಳ ಲವ್ ಸ್ಟೋರಿ ಊರಿಗೆಲ್ಲಾ ಹಬ್ಬಿದೆ.
ಆಂಟಿ ಪ್ರೀತಿಯ ಬಲೆಯಲ್ಲಿ ಬಿದ್ದ ಆಟೋ ಡ್ರೈವರ್ ಮಲ್ಲಿಗೆನಹಳ್ಳಿ ದಿನಸಿ ಅಂಗಡಿ ಇಟ್ಟುಕೊಂಡಿದ್ದ ಆರ್ಚನಾ ಆಂಟಿಯೊಂದಿಗೆ ಮಧು ಪರಿಚಯವಾಗಿದೆ. ಇಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿದೆ. ಅಂದಹಾಗೆ ಮಧು ನಾಪತ್ತೆಯಾದ ದಿನದಿಂದಲೂ ಆಂಟಿ ದಿನಸಿ ಅಂಗಡಿಯೂ ಕ್ಲೋಸ್ ಆಗಿದೆ. ಮೊದಲೇ ಅನುಮಾನಿಸುತ್ತಿದ್ದ ಗ್ರಾಮಸ್ಥರು ಯಾವಾಗ ಇಬ್ಬರು ಒಂದೇ ದಿನ ಕಾಣೆಯಾಗಿದ್ರೋ ಆಗ ಗ್ರಾಮಸ್ಥರ ಅನುಮಾನ ನಿಜವಾಗಿದೆ. ಇಬ್ಬರು ಓಡಿಹೋಗಿರುವ ಸುದ್ದಿ ಗ್ರಾಮಕ್ಕೆಲ್ಲಾ ಹಬ್ಬಿದೆ. ಇದೀಗ ಮಧು ತಾಯಿ ಅರ್ಚನಾ ಆಂಟಿಯೇ ನನ್ನ ಮಗನ ದಾರಿ ತಪ್ಪಿಸಿ ಕರೆದುಕೊಂಡು ಹೋಗಿದ್ದಾಳೆ ಅಂತಾ ಕಿಡ್ಯ್ನಾಪ್ ಪ್ರಕರಣ ದಾಖಲಿಸಿದ್ದಾರೆ.
ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಮಧು ಹಾಗೂ ಆರ್ಚನಾ ಆಂಟಿ ತಮಿಳನಾಡಿಗೆ ಹೋಗಿ ಮದ್ವೆಯಾಗಿರುವುದು ಬೆಳಕಿಗೆ ಬಂದಿದೆ. ಇಬ್ಬರು ಮದ್ವೆಯಾಗಿರೋ ಫೋಟೋಗಳು ಖಾಕಿ ಕೈ ತಲುಪಿದ್ದು ತನಿಖೆ ಮುಂದುವರಿಸಿದ್ದಾರೆ.
ಇತ್ತ ಹೆತ್ತವರು ಮಾತ್ರ ಮಗ ಬರ್ತಾನೆ. ಮೊದಲಿನಂತೆ ನಮ್ಮ ಜೊತೆ ಬಂದು ಇರ್ತಾನೆ ಅನ್ನೋ ಆಸೆ ಇಟ್ಟುಕೊಂಡ್ದಿದ್ದಾರೆ. ಆದ್ರೆ ಮಗ ಮಧು ಮಾತ್ರ ವಿಧವೆ ಆಂಟಿಯೊಂದಿಗೆ ಗಪ್ ಚುಪ್ ಆಗಿ ಮದ್ವೆಯಾಗಿ ತಮಿಳುನಾಡಲ್ಲೇ ಸೆಟ್ಲ್ ಆಗಿದ್ದಾನೆ.
ವರದಿ: ಬಸವರಾಜ್ ಯರಗಣವಿ, ಟಿವಿ9 ಶಿವಮೊಗ್ಗ
ಇದನ್ನೂ ಓದಿ: Karnataka Dams Water Level: ತಗ್ಗಿದ ಮಳೆ, ಹೆಚ್ಚಿದ ಚಳಿ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
Published On - 7:10 am, Fri, 24 December 21