ಯಾಕಪ್ಪಾ ನೀನು ಬೇಲ್ ಮೇಲೆ ಹೊರಗೆ ಇದ್ದೀಯಾ? ತಿಹಾರ್ ಜೈಲಿಗೆ ಪುಕ್ಸಟ್ಟೆ ಕಳುಹಿಸುತ್ತಾರೆಯೇ? ಕೆ.ಎಸ್.ಈಶ್ವರಪ್ಪ ವಾಗ್ದಾಳಿ
ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ರೆ ನಂಬುತ್ತಾರಾ? ಭ್ರಷ್ಟಾಚಾರದ ಮಾಡಿದರೆ ಜನರು ನಿಮ್ಮನ್ನು ನಂಬುತ್ತಾರೆಯೇ? ಸಿಎಂ ಆಗಬೇಕೆಂಬ ಕಾರಣಕ್ಕೆ ಈ ಎಲ್ಲಾ ಆಟ ಆಡುತ್ತಿದ್ದೀರಿ.
ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ D.K.ಶಿವಕುಮಾರ್ ಬೇಲ್ ಮೇಲೆ ಇರುವ ವ್ಯಕ್ತಿ. ಯಾಕಪ್ಪಾ..ನೀನು ಬೇಲ್ ಮೇಲೆ ಹೊರಗೆ ಇದ್ದೀಯಾ? ದೆಹಲಿಯ ತಿಹಾರ್ ಜೈಲಿಗೆ ಪುಕ್ಸಟ್ಟೆ ಕಳುಹಿಸುತ್ತಾರೆಯೇ? ಕೋಟಿ ಕೋಟಿ ಹಣ ಡಿಕೆಶಿ ಬಳಿ ಸಿಕ್ಕಿದ್ದು ಸತ್ಯ ತಾನೇ? ಸತ್ಯ ಹರಿಶ್ಚಂದ್ರ ಮಾತನಾಡಿದ್ದಂತೆ ನಿತ್ಯ ಮಾತನಾಡುತ್ತಿದ್ದೀರಾ ಎಂದು ಮಾಜಿ ಸಚಿವ ಈಶ್ವರಪ್ಪ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ರೆ ನಂಬುತ್ತಾರಾ? ಭ್ರಷ್ಟಾಚಾರದ ಮಾಡಿದರೆ ಜನರು ನಿಮ್ಮನ್ನು ನಂಬುತ್ತಾರೆಯೇ? ಸಿಎಂ ಆಗಬೇಕೆಂಬ ಕಾರಣಕ್ಕೆ ಈ ಎಲ್ಲಾ ಆಟ ಆಡುತ್ತಿದ್ದೀರಿ. ಇಡೀ ದೇಶದಲ್ಲೇ ಕಾಂಗ್ರೆಸ್ ನಿರ್ನಾಮ ಆಗಿದೆ. ಅನೇಕ ಕಾಂಗ್ರೆಸ್ ನಾಯಕರು ಬಿಜೆಪಿ ಪಕ್ಷಕ್ಕೆ ಬರಲಿದ್ದಾರೆ. ಅನೇಕ ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದರು.
ಶಿವಮೊಗ್ಗದಲ್ಲಿ ಪ್ರೇಮ್ಸಿಂಗ್ಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಪೊಲೀಸರು ಜಬೀವುಲ್ಲಾನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ವಿಚಾರಣೆ ವೇಳೆ ಉಗ್ರರ ಜೊತೆ ಲಿಂಗ್ ಇರುವುದು ಪತ್ತೆಯಾಗಿದೆ. ಸಮಾಜದಲ್ಲಿ ಯಾರು ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ ಅಂಥವರನ್ನು ಠಾಣೆಗೆ ಕರೆದೊಯ್ದು ರುಬ್ಬಿದಾಗ ಬಾಯಿ ಬಿಡ್ತಾರೆ.
ಕೆಂಪಣ್ಣರನ್ನ ಬಿಟ್ಟುಬಿಡಿ ಅವರಿಗೆ ಕೆಟ್ಟ ಹೆಸರು ತರಬೇಡಿ
ಕೆಂಪಣ್ಣ ಈವರೆಗೆ ಒಂದೇ ಒಂದು ದಾಖಲೆ ಬಿಡುಗಡೆ ಮಾಡಿಲ್ಲ. ಸುಮ್ಮನೆ 40 ಪರ್ಸೆಂಟ್ ಕಮಿಷನ್ ಅಂದ್ರೆ ಯಾರು ನಂಬಲ್ಲ. ಯಾವುದೇ ದಾಖಲೆ ನೀಡದೆ ಪುಕ್ಸಟೆ ಹೇಳಿಕೆ ನೀಡಿದರೆ ನಂಬಲ್ಲ. ಕಾಂಗ್ರೆಸ್ನವರು ಭ್ರಷ್ಟಾಚಾರ ಮಾಡಿದ್ದಕ್ಕೆ ಅಧಿಕಾರ ಕಳೆದುಕೊಂಡ್ರು. ಆದರೂ ಭಂಡತನದಿಂದ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕೆಂಪಣ್ಣರಂತಹ ಯಜಮಾನರನ್ನ ಬಿಟ್ಟುಬಿಡಿ ಅವರಿಗೆ ಕೆಟ್ಟ ಹೆಸರು ತರಬೇಡಿ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:40 pm, Mon, 5 September 22