ಪ್ರೀತಿಸಿ ಮದ್ವೆಯಾದ ಎರಡೇ ವರ್ಷಕ್ಕೆ ಗೃಹಿಣಿ ನಿಗೂಢ ಸಾವು: ಪ್ರೀತಿ ನಂಬಿ ಬಂದಾಕೆಗೆ ಚಟ್ಟ ಕಟ್ಟಿದ್ನಾ ಪತಿ?

ಪ್ರೀತಿಸಿ ಅವರಿಬ್ಬರು ಮದುವೆ ಆಗಿದ್ದರು. ಮದುವೆಯಾಗಿ ಎರಡು ವರ್ಷ ಆಗಿತ್ತು. ದಂಪತಿಗಳಿಗೆ ಮುದ್ದಾದ ಮಗು ಇತ್ತು. ಈ ನಡುವೆ ಪ್ರೀತಿಸಿ ಮದುವೆಯಾದ ಪತಿಗೆ ಪತ್ನಿ ಜೊತೆ ಜಗಳ. ನಿತ್ಯ ಕಿರುಕುಳ. ಮಾನಸಿಕ ಮತ್ತು ದೈಹಿಕ ಹಿಂಸೆ. ಕೊನೆಗೂ ಪ್ರೀತಿಸಿ ಮದುವೆಯಾದ ಮಹಿಳೆ ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಪ್ರೀತಿ ನಂಬಿ ಬಂದಾಕೆಗೆ ಪತಿ ಚಟ್ಟ ಕಟ್ಟಿದ್ನಾ ಎನ್ನುವ ಅನುಮಾನಗಳು ವ್ಯಕ್ತವಾಗಿವೆ.

ಪ್ರೀತಿಸಿ ಮದ್ವೆಯಾದ ಎರಡೇ ವರ್ಷಕ್ಕೆ ಗೃಹಿಣಿ ನಿಗೂಢ ಸಾವು: ಪ್ರೀತಿ ನಂಬಿ ಬಂದಾಕೆಗೆ ಚಟ್ಟ ಕಟ್ಟಿದ್ನಾ ಪತಿ?
ಕೌಸರ್
Updated By: ರಮೇಶ್ ಬಿ. ಜವಳಗೇರಾ

Updated on: Oct 26, 2025 | 9:15 PM

ಶಿವಮೊಗ್ಗ, (ಅಕ್ಟೋಬರ್ 26): ಇಬ್ಬರು ಪರಸ್ಪರ ಪ್ರೀತಿಸಿ ಎರಡು ವರ್ಷ ಹಿಂದೆ ಅಷ್ಟೇ ಮದುವೆಯಾಗಿದ್ದರು. ಪ್ರೀತಿಯ ಮದುವೆಗೊಂದು ಒಂದೂವರೆ ವರ್ಷದ ಮಗು ಸಹ ಇದೆ. ಸ್ವರ್ಗಕ್ಕೆ ಕಿಚ್ಚು ಹಚ್ಚುವಂಥಾ ಸಂಸಾರ ಇದ್ದಾಗ ಮಹಿಳೆ ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ದಾವಣಗೆರೆ ಜಿಲ್ಲೆಯ ಚನ್ನಗರಿ ತಾಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜಿಶಾನ್ (23) ಮತ್ತು ಜುನೇರಾ ಕೌಸರ್ (19) ಇಬ್ಬರು ಪ್ರೀತಿಸಿ ಮದುವೆಯಾಗಿ ಎರಡು ವರ್ಷವಾಗಿತ್ತು. ಈ ನಡುವೆ ಪತಿ ಪತ್ನಿ ನಡುವೆ ಮನಸ್ತಾಪ ಜಗಳ ಶುರುವಾಗಿತ್ತು. ಆದ್ರೆ, ಪ್ರೀತಿ ನಂಬಿ ಬಂದಿದ್ದ ಜುನೇರಾ ಕೌಸರ್ ಏಕಾಏಕಿ ಹೆಣವಾಗಿದ್ದು, ಈ ಸಾವಿನ ಸುತ್ತು ಅನುಮಾಗಳು ಹುಟ್ಟಿಕೊಂಡಿವೆ.

ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ವಾಸವಿದ್ದರು. ಚನ್ನಗಿರಿ ಪಟ್ಟಣದ ಜಿನೇರಾ ಕೌಸರ್ ಕಾಲೇಜ್‌ಗೆ ಹೋಗ್ತಿದ್ದಾಗ ಜಿಶಾನ್ ಪರಿಚಯವಾಗಿತ್ತು.  ಬಳಿಕ ಇಬ್ಬರಿಗೂ ಪ್ರೇಮಾಂಕುರವಾಗಿ  ಕೊನೆಗೆ ಪೋಷಕರನ್ನು ಒಪ್ಪಿಸಿ ಇಬ್ಬರು ಮದುವೆಯಾಗಿದ್ದರು. ಪತಿ ಜಿಶಾನ್ ಅಡಿಕೆ ವ್ಯಾಪಾರಸ್ಥನಾಗಿದ್ದ. ಮುದ್ದಾದ ಯುವತಿಯ ಜೊತೆ ಸಂಸಾರ ಮಾಡಬೇಕಿದ್ದ ಪತಿಯು ಪದೇ ಪದೇ ಜಗಳವಾಡುತ್ತಿದ್ದ. ಪತಿಯ ಕಾಟ ತಾಳಲಾರದೇ ಪತ್ನಿಯು ಕಳೆದ ವಾರ ತವರು ಮನೆಗೆ ಹೋಗಿದ್ದಳು. ಹೆತ್ತವರು ಗಂಡನ ಮನೆಗೆ ಬಂದು ಗುರುವಾರ ರಾಜೀ ಪಂಚಾಯತಿ ಮಾಡಿದ್ದರು. ರಾಜೀ ಪಂಚಾಯಿತಿ ಆಗಿ ಮೂರೇ ದಿನಕ್ಕೆ ಮಗಳು ಸಾವಿನ ಮನೆ ಸೇರಿದ್ದಾಳೆ. ಅವನು ಮಾಡಿದ ವಂಚನೆ ಮೋಸದಿಂದ ಮಗಳು ಸಾವು ಆಗಿದೆ. ಮಗಳ ಸಾವಿನ ಕುರಿತು ಸೂಕ್ತ ತನಿಖೆಯಾಗಬೇಕೆಂದು ಹೆತ್ತವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ: ಮಹಾರಾಷ್ಟ್ರದ ಯುವಕನನ್ನ ಬೀದರ್​ನಲ್ಲಿ ಹೇಗೆ ಹೊಡೆದು ಕೊಂದ್ರು ನೋಡಿ

ಪ್ರೀತಿಸಿ ಮದುವೆಯಾದ ಪತ್ನಿ ಜೊತೆ ಪತಿ ನಿತ್ಯ ಗಲಾಟೆ ಮಾಡಿ ವಿನಾಕಾರಣ ಕಿರುಕುಳ ನೀಡುತ್ತಿದ್ದ. ತಾನು ಮತ್ತೊಂದು ಯುವತಿಯನ್ನು ಲವ್ ಮಾಡುತ್ತಿದ್ದೇನೆ. ಅವಳ ಜೊತೆ ಮದುವೆ ಆಗುತ್ತೇನೆಂದು ಪತ್ನಿಗೆ ಮಾನಸಿಕ ದೈಹಿಕ ಕಿರುಕುಳ ಕೊಡುತ್ತಿದ್ದ. ಈ ನಡುವೆ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿಸಿದ್ದಾನೆ. ಇದರ ಬಳಿಕ ಕೌಸರ್ ನೇಣು ಬಿಗಿದ ಸ್ಥಿತಿಯಲ್ಲಿ ಬೆಡ್ ರೂಂನಲ್ಲಿ ಪತ್ತೆಯಾಗಿದ್ದಾಳೆ. ಪತಿ ಮತ್ತು ಆತನ ಕುಟುಂಬಸ್ಥರು ಅವಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ, ಇಂದು (ಅಕ್ಟೋಬರ್ 26) ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಪತ್ನಿಯು ಮೃತಪಟ್ಟಿದ್ದಾಳೆ.

ಪತ್ನಿ ಶಿವನೊಗ್ಗದಲ್ಲಿ ಮೃತಪಟ್ಟಿರುವುದು ಖಚಿತವಾಗುತ್ತಿದ್ದಂತೆ ಅತ್ತ ಪತಿಯು ಚನ್ನಗಿರಿ ಠಾಣೆಗೆ ಹೋಗಿ ಶರಣಾಗತಿಯಾಗಿದ್ದಾನೆ. ಮೃತಳ ದೇಹದ ತುಂಬೆಲ್ಲೆ ಹಲ್ಲೆ ಮಾಡಿರುವ ಗಾಯಗಳಿವೆ. ಇದನ್ನು ಗಮನಿಸಿದ ಮೃತಳ ಕುಟುಂಬಸ್ಥರು ಪತಿಯ ವಿರುದ್ದ ಕೊಲೆ ಕೇಸ್ ದಾಖಲಿಸಿದ್ದಾರೆ. ಈ ಸಂಬಂಧ ಚನ್ನಗಿರಿ ಪೊಲೀಸರು ಅನುಮಾನಸ್ಪದ ಸಾವು ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ