ಶಿವಮೊಗ್ಗ, ಅಕ್ಟೋಬರ್ 02: ರೈತರಿಂದ ಖರೀದಿಸುವ ಹಾಲಿನ (milk) ದರವನ್ನು ಶಿಮುಲ್ ಒಕ್ಕೂಟ ಇಳಿಕೆ ಮಾಡಿದೆ. ಆ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ಶಾಕ್ ನೀಡಿದೆ. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟ ಶಿಮುಲ್, ಪ್ರತಿ ಲೀಟರ್ ಹಾಲಿನ ಮೇಲೆ 90 ಪೈಸೆ ಇಳಿಕೆ ಮಾಡಿದೆ. ಶಿಮುಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಾಗಿದೆ. ನಿನ್ನೆಯಿಂದಲೇ ಹಾಲಿನ ನೂತನ ದರ ಜಾರಿ ಆಗಿದೆ.
ಶಿಮುಲ್ 7 ಕೋಟಿ ನಷ್ಟದಲ್ಲಿದ್ದು ಅದರಿಂದ ಹೊರಬರಲು ಖರೀದಿ ದರ ಇಳಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಆ ಮೂಲ ನಷ್ಟದ ನೆಪ ಹೇಳಿ ರೈತರಿಂದ ಖರೀದಿಸುವ ಹಾಲಿನ ದರ ಇಳಿಕೆ ಮಾಡಿದೆ. 33.03 ರೂ.ಗೆ ಹಾಲು ಉತ್ಪಾದಕರ ಸೊಸೈಟಿಗಳಿಂದ ಶಿಮುಲ್ ಖರೀದಿಸುತ್ತಿದೆ.
ಇದನ್ನೂ ಓದಿ: Nandini Milk Price: ಮದರ್ ಡೈರಿ ಹಾಲಿನ ದರವೂ ಹೆಚ್ಚಳ; ಏರಿಕೆಯಾಗುತ್ತಾ ನಂದಿನಿ ಹಾಲಿನ ಬೆಲೆ?
ಶಿವಮೊಗ್ಗ ಶಿಮುಲ್ ಒಕ್ಕೂಟ ಹಾಲಿನ ಉತ್ಪಾದನೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಸಾಕ್ಷಿಯಾಗಿತ್ತು. ಬ್ರೆಡ್, ಬನ್ ಸೇರಿದಂತೆ ಹಾಲಿನ ಉತ್ಪನ್ನ ತಯಾರಿಕೆ ಮಾಡಲಾಗುತ್ತದೆ. ನಿತ್ಯ 6.27 ಲಕ್ಷ ಲೀಟರ್ ನಿಂದ 7.84 ಲಕ್ಷ ಲೀಟರ್ಗೆ ಹಾಲಿನ ಉತ್ಪಾದನೆ ಮಾಡಲಾಗುತ್ತಿತ್ತು. ಕೆಲವೇ ತಿಂಗಳಲ್ಲಿ 1.60 ಲಕ್ಷ ಲೀಟರ್ ಹೆಚ್ಚಳವಾಗಿತ್ತು.
ಈ ಮೊದಲು ರೈತರಿಗೆ ನ್ಯಾಯಯುತ ಬೆಲೆಯನ್ನು ನೀಡಲಾಗುತ್ತಿತ್ತು. ಹಾಗಾಗಿ ಹಾಲಿನ ಉತ್ಪಾದನೆ ಹೆಚ್ಚಿದ್ದು, ಹಾಲಿನ ಪ್ಯಾಕ್‌ಗಳ ಪ್ರಮಾಣವನ್ನು 50 ಮಿಲಿ ಹೆಚ್ಚಿಸಲಾಗಿತ್ತು. ಅದಕ್ಕೆ ಅನುಗುಣವಾಗಿ 2 ಬೆಲೆ ಏರಿಕೆ ಕೂಡ ಮಾಡಲಾಗಿತ್ತು.
ಕೋಲಾರ: ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳು ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದಿದೆ. ಅವಿಭಜಿತ ಜಿಲ್ಲೆಗಳಲ್ಲಿ ಸುಮಾರು ಒಂದುವರೆ ಲಕ್ಷಕ್ಕೂ ಅಧಿಕ ಜನ ಹಾಲು ಉತ್ಪಾದಕರಿದ್ದಾರೆ. ಜೊತೆಗೆ ಕಳೆದ ವರ್ಷ ರಾಜ್ಯ ಸೇರಿದಂತೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಬರಗಾಲಕ್ಕೆ ತುತ್ತಾಗಿವೆ. ಹೀಗಿರುವಾಗ, ರಾಜ್ಯದಲ್ಲಿ ರೈತರು ಹಾಗೂ ಹಾಲು ಉತ್ಪಾದಕರಿಗೆ ನೆರವಿಗೆ ನಿಲ್ಲಬೇಕಿದ್ದ ರಾಜ್ಯ ಸರ್ಕಾರ ರೈತ ವಿರೋಧಿ ದೋರಣೆ ಅನುಸರಿಸುತ್ತಿದೆ ಎಂದು ರೈತರು ಮತ್ತು ವಿಪಕ್ಷ ನಾಯಕರು ಆರೋಪ ಮಾಡಿದ್ದರು.
ಇದನ್ನೂ ಓದಿ: ಹೆಚ್ಚುವರಿ ಹಾಲು, ಹೆಚ್ಚು ಬೆಲೆಯೆಂದ ಸಿಎಂ; ಯಾವ ಪ್ಯಾಕೆಟ್ಗೆ ಎಷ್ಟು ದರ? ಇಲ್ಲಿದೆ ಪಟ್ಟಿ
ಕೋಲಾರ, ಚಿಕ್ಕಬಳ್ಳಾಪುರದಲ್ಲಿ 1800 ಹಾಲು ಉತ್ಪಾದಕರ ಸ್ವಸಹಾಯ ಸಂಘಗಳಿವೆ. ಜಿಲ್ಲೆಯಲ್ಲಿ ನಿತ್ಯ ಸುಮಾರು ಹತ್ತು ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಹಾಗಾಗಿ ಹೈನೋದ್ಯಮವನ್ನು ನಂಬಿ ಬದುಕುತ್ತಿರುವ ರೈತರ ಸಂಖ್ಯೆ ಹೆಚ್ಚಾಗಿಯೇ ಇದೆ. ಹೀಗಿರುವ ಕೋಲಾರ ಜಿಲ್ಲೆಯ ಸರ್ಕಾರದ ನಿರ್ಧಾರಗಳು ಹೊರೆಯಾಗುತ್ತಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕ ಬಂದ ನಂತರ ಎರಡು ಬಾರಿ ಹಾಲಿನ ದರ ಏರಿಕೆ ಮಾಡಿ, ಎರಡು ಬಾರಿ ರೈತರಿಂದ ಹಾಲಿನ ಖರೀದಿ ದರವನ್ನು ಇಳಿಕೆ ಮಾಡಿದೆ. ಇದರಿಂದ ಮೊದಲು ರೈತರಿಗೆ ಲೀಟರ್ ಹಾಲಿಗೆ 34 ರೂಪಾಯಿ ಸಿಗುತ್ತಿತ್ತು, ಆದರೆ ಹಾಲು ಖರೀದಿ ದರ ಎರಡು ಬಾರಿ ಇಳಿಕೆ ಮಾಡಿದ ನಂತರ ಈಗ ಲೀಟರ್ ಹಾಲಿಗೆ ರೈತರಿಗೆ ಸಿಗುತ್ತಿರುವುದು ಕೇವಲ 30 ರೂಪಾಯಿ 15 ಪೈಸೆ ಮಾತ್ರ. ಆದರೆ ಹಾಲು ದರ ಏರಿಕೆ ಮಾಡಿ ಸರ್ಕಾರ ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ಮಾತ್ರ 60 ರೂಪಾಯಿಗೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:16 pm, Wed, 2 October 24