ಅಮ್ಮನ ಆಸರೆಯಲ್ಲೇ ಬೆಳೆದು ಸಾಧನೆಯ ಶಿಖರವೇರಿದ ಬಾಲಕಿ, ದೇಶದ ಹೆಮ್ಮೆಯ ಕ್ರೀಡಾಗಾರ್ತಿಯಾಗುವೆ ಅಂತಿದ್ದಾಳೆ!
ಮನೆಯಲ್ಲಿನ ಬಡತನದ ನಡುವೆಯೂ ಶ್ವೇತಾ ಬೆಳಗಟ್ಟಿ ಸೆಪ್ಟೆಂಬರ್ 19ರಂದು ಉತ್ತರ ಪ್ರದೇಶದ ಅಮೇತಿಯಲ್ಲಿ ನಡೆದ 23 ವರ್ಷದೊಳಗಿನ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗಳಿಸಿದ್ದಾಳೆ. ಹಲವು ರಾಜ್ಯಗಳ ಘಟಾನುಘಟಿ ಕುಸ್ತಿ ಪಟುಗಳ ಮಣಿಸಿದ ಕನ್ನಡದ ಕುವರಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ದಾಳೆ.
ಗದಗ: ಆಕೆ ಬಡತನದಲ್ಲಿ ಬೆಂದ ಯುವತಿ. ಅಪ್ಪ ಇಲ್ಲ, ಅಮ್ಮನ ಆಸರೆಯಷ್ಟೇ ದಕ್ಕಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಓದು ಬಿಟ್ಟಿಲ್ಲ. ವಿಶೇಷ ಅಂದ್ರೆ ಇಂತಹ ಕಷ್ಟದಲ್ಲಿ ಇದ್ದಾಗ ಓದು ಅಷ್ಟೇ ಸಾಕು ಅನ್ನೋವ್ರೆ ಹೆಚ್ಚು. ಅದ್ರೆ, ನಮ್ಮ ಹಳ್ಳಿ ಹುಡ್ಗಿ ಓದಿನ ಜೊತೆಗೆ ಭರ್ಜರಿ ಕುಸ್ತಿ ತಯಾರಿ ನಡೆಸಿದ್ದಾಳೆ. ಅದರಲ್ಲಿ ಒಬ್ಬ ಹೆಣ್ಮಗಳು ಕುಸ್ತಿ ಆಡ್ತಾಳೆ ಅಂದ್ರೆ ನಗೋವ್ರೆ ಬಹಳ ಜನ ಇರ್ತಾರೆ. ಆದ್ರೆ ಇವುಗಳೆಲ್ಲವನ್ನೂ ಮೀರಿ ಗದಗನಲ್ಲೊಂದು ಕುಸ್ತಿ ಪ್ರತಿಭೆ ಸತತ ಎರಡು ಬಾರಿ ಮೆಡಲ್ ಗಳಿಸಿದ್ದಾಳೆ. ಮುಂದೆ ದೇಶದ ಭವಿಷ್ಯದ ಹೆಮ್ಮೆಯ ಕ್ರೀಡಾಗಾರ್ತಿಯಾಗುತ್ತೇನೆ ಅನ್ನೋದನ್ನ ಈ ಮೂಲಕ ತೋರಿಸಿಕೊಟ್ಟಿದ್ದಾಳೆ.
ಗೆಲ್ಲಲೇಬೇಕು ಅನ್ನೋ ಛಲ ಕಾಣ್ತಿದೆ. ಅವಳ ಚಲನವಲಗಳು ಬಡತನವೂ ಮೀರಿ ಏನೋ ಸಾಧಿಸುವ ಹಂಬಲ ಕಾಣ್ತಿದೆ. ಅಂದಹಾಗೆ ಈಕೆಯ ಹೆಸರು ಶ್ವೇತಾ ಬೆಳಗಟ್ಟಿ ಅಂತ. ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರೋ ತರಬೇತಿ ಶಾಲೆಯ ಯುವತಿ. ನಗರದಲ್ಲಿ ಖಾಸಗಿ ಕಾಲೇಜೊಂದರಲ್ಲಿ ಪದವಿ ಓದುತ್ತಿದ್ದಾಳೆ. ಆದ್ರೆ ಈಕೆಯ ಒಲವು ಇರೋದು ಕುಸ್ತಿಯಲ್ಲಿ. ಅಂದಹಾಗೆ ಜಿಲ್ಲಾ ಕ್ರೀಡಾಂಗಣದಲ್ಲಿನ ತರಬೇತುದಾರ ಶರಣಪ್ಪ ಬೇಲೇರಿ ಎಂಬುವರ ಗರಡಿಯಲ್ಲಿ 8 ವರ್ಷಗಳಿಂದ ತರಬೇತಿ ಪಡೆಯುತ್ತಿದ್ದಾಳೆ.
ಅಂದಹಾಗೆ ಈಕೆಯ ಬಗ್ಗೆ ಹೇಳೋದಕ್ಕೆ ಕಾರಣ. ಸೆಪ್ಟೆಂಬರ್ 19ರಂದು ಉತ್ತರ ಪ್ರದೇಶದ ಅಮೇತಿಯಲ್ಲಿ ನಡೆದ 23 ವರ್ಷದೊಳಗಿನ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗಳಿಸಿದ್ದಾಳೆ. ಹಲವು ರಾಜ್ಯಗಳ ಘಟಾನುಘಟಿ ಕುಸ್ತಿ ಪಟುಗಳ ಮಣಿಸಿದ ಕನ್ನಡದ ಕುವರಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ದಾಳೆ.
ಇದು ಈಕೆಯ ಸತತವಾಗಿ ಈಕೆ ಗಳಿಸಿರೋ ಎರಡನೇ ಪದಕ. ಈ ಮೂಲಕ ದಕ್ಷಿಣ ಭಾರತದಲ್ಲಿ 23 ವರ್ಷದೊಳಗಿನ ಕುಸ್ತಿ ಪಂದ್ಯಾವಳಿಯಲ್ಲಿ ಸತತ ಎರಡು ಬಾರಿ ಮೆಡಲ್ ಗಳಿಸಿದ ಏಕೈಕ ಕನ್ನಡದ ಕುವರಿಯಾಗಿದ್ದಾಳೆ. ಭವಿಷ್ಯದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನ ಪ್ರತಿನಿಧಿಸುವ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಅಂತ ಕುಸ್ತಿಪಟು ಶ್ವೇತಾ ಹೇಳ್ತಿದ್ದಾಳೆ.
ಅಂದಹಾಗೆ ಶ್ವೇತಾ ಬೆಳಗಟ್ಟಿ ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿರುವ ಹಿನ್ನಲೆ ಈಗ ಆಕೆ ಅಂತರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅರ್ಹಳಾಗಿದ್ದಾಳೆ. ಸದ್ಯ ಅಂತರಾಷ್ಟ್ರೀಯ ಮಟ್ಟದ ಕುಸ್ತಿ ಕ್ಯಾಂಪ್ ಆರಂಭವಾದ್ರೆ ಅಲ್ಲಿ ಭಾಗವಹಿಸುವ ಕನಸು ಕಾಣ್ತಿದ್ದಾಳೆ. ಆ ಕ್ಯಾಂಪ್ನಲ್ಲಿ ಅಂತರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಗಳಿಗೆ ಆಯ್ಕೆಯಾಗುತ್ತೆನೆ ಅಂತ ಭರವಸೆ ವ್ಯಕ್ತಪಡಿಸಿದ್ದಾಳೆ.
ಇನ್ನು ತರಬೇತುದಾರ ಶರಣಗೌಡ ಬೇಲೆರಿ ಈ ಕುಸ್ತಿ ಪ್ರತಿಭೆಯನ್ನ ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಕುಸ್ತಿ ತರಬೇತಿ ನೀಡುತ್ತಿದ್ದಾರೆ. ಸುಮಾರು 7-8 ಕುಸ್ತಿ ಪಟುಗಳನ್ನ ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ವಿಶೇಷವಾದ ತರಬೇತಿ ನೀಡುತ್ತಿದ್ದಾರೆ. ಇದರಿಂದ ಅವರಿಗೆ ಮತ್ತಷ್ಟು ಬಲ ಬಂದಂತಾಗಿದೆ ಅಂತ ಕುಸ್ತಿ ತರಬೇತುದಾರ ಶರಣಗೌಡ ಬೇಲೇರಿ ಹೇಳಿದ್ದಾರೆ…
ಇನ್ನು ಇಂತಹ ಬಡ ಕ್ರಿಡಾಪಟುಗಳ ಜೀವನ ಉತ್ತಮಗೊಳಿಸಲು ಸರಕಾರದ ಎಲ್ಲಾ ಇಲಾಖೆಗಳಿಗೆ ಮೀಸಲಾತಿ ಕಲ್ಪಿಸಬೇಕೆಂದು ತರಬೇತುದಾರರು ಆಪೇಕ್ಷೆ ಪಟ್ಟಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಮಾತ್ರ ಕ್ರೀಡಾಪಟುಗಳಿಗೆ ಮೀಸಲಾತಿ ಇದೆ. ಅದರಂತೆ ಎಲ್ಲಾ ಇಲಾಖೆಯಲ್ಲಿಯೂ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ.
ಶ್ವೇತಾ ಬೆಳಗಟ್ಟಿಯೂ ಸಹ ತನ್ನ ಮನೆಯ ಬಡತನ ನೀಗಿಸಲು ಸದ್ಯ ನೌಕರಿಯ ಅಗತ್ಯವಿದೆ ಅಂತ ಹೇಳಿಕೊಂಡಿದ್ದಾಳೆ. ಒಟ್ಟಿನಲ್ಲಿ ಒಂದು ಹಳ್ಳಿ ಪ್ರತಿಭೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿ ಆಡಿ ದೇಶದ ಕೀರ್ತಿ ಹೆಚ್ಚಿಸಲಿ ಅಂತ ಕ್ರೀಡಾಭಿಮಾನಿಗಳು ಹಾರೈಸಿದ್ದಾರೆ.
– ಸಂಜೀವ ಪಾಂಡ್ರೆ
Dharawad Teacher ಧಾರವಾಡದ ಶಿಕ್ಷಕನ ಹಾವ ಭಾವದ ಪಾಠದ ಸ್ಟೈಲ್ ಮತ್ತಷ್ಟು ವಿಡಿಯೋ ವೈರಲ್ | Tv9kannada
Published On - 11:46 am, Sat, 9 October 21