ಬಾಗಲಕೋಟೆ ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ

ಬಾಗಲಕೋಟೆ ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್

ಜೂ.21ರಂದು ಪಟ್ಟದಕಲ್ಲಿನಲ್ಲಿ ಯೋಗ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಮಾಹಿತಿ ನೀಡದೆ ಕಾರ್ಯಕ್ರಮ ಆಯೋಜಿಸುತ್ತಿರುವುದಕ್ಕೆ ಮಾಜಿ ಸಿಎಂ ಗರಂ ಆಗಿದ್ದರು. ಇನ್ನೊಂದು ಬಾರಿ ಹೀಗಾದರೆ ಸುಮ್ಮನೆ ಬಿಡೋದಿಲ್ಲ.

sandhya thejappa

|

Jun 19, 2022 | 2:07 PM

ಬಾಗಲಕೋಟೆ: ಮಾಹಿತಿ ನೀಡದೇ ಕಾರ್ಯಕ್ರಮದಲ್ಲಿ ಹೆಸರು ಹಾಕಿದ್ದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಬಾಗಲಕೋಟೆ ಜಿಲ್ಲಾಧಿಕಾರಿಯನ್ನು (Bagalkot DC) ತರಾಟೆ ತೆಗೆದುಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆಯಿತು. ಜೂ.21ರಂದು ಪಟ್ಟದಕಲ್ಲಿನಲ್ಲಿ ಯೋಗ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಮಾಹಿತಿ ನೀಡದೆ ಕಾರ್ಯಕ್ರಮ ಆಯೋಜಿಸುತ್ತಿರುವುದಕ್ಕೆ ಮಾಜಿ ಸಿಎಂ ಗರಂ ಆಗಿದ್ದರು. ಇನ್ನೊಂದು ಬಾರಿ ಹೀಗಾದರೆ ಸುಮ್ಮನೆ ಬಿಡೋದಿಲ್ಲ. ವಿಧಾನಸಭೆಯಲ್ಲಿ ಚರ್ಚಿಸಬೇಕಾಗುತ್ತೆ ಎಂದು ಫೋನ್ ಮಾಡಿ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ಗೆ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡರು.

ಪ್ರಧಾನಿ, ಮೈಸೂರಿಗೆ ಬಂದರೆ ತಪ್ಪೇನು ಇಲ್ಲ- ಸಿದ್ದರಾಮಯ್ಯ: ವಿಜಯಪುರ: ನಾಳೆ ಪ್ರಧಾನಿ ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಮೋದಿ ಈ ದೇಶದ ಪ್ರಧಾನಿ, ಮೈಸೂರಿಗೆ ಬಂದರೆ ತಪ್ಪೇನು ಇಲ್ಲ. ನಾವು ಪ್ರಧಾನಿಗಳನ್ನು ಬರಬೇಡಿ ಎಂದು ಹೇಳುವುದಕ್ಕೆ ಬರಲ್ಲ. ಪ್ರಧಾನಿ ಮೋದಿ ಯೋಗ ದಿನಾಚರಣೆಯಲ್ಲಿ ಭಾಗಿಯಾಗುತ್ತಾರೆ.  ಜೊತೆಗೆ ರಾಜಕೀಯ ಮಾಡಲಿಕ್ಕೂ ಬರುತ್ತಿದ್ದಾರೆ ಎಂದರು.

ಮುಂದುವರಿದು ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್‌ನವರು ಸಭೆ, ಸಮಾರಂಭ ಮಾಡಿದರೆ ಕೊರೊನಾ ಬರುತ್ತದೆ ಎಂದು‌ ಬಿಜೆಪಿ ಸರ್ಕಾರ ಹೇಳುತ್ತದೆ. ಅವರೇ ಸಭೆ ಸಮಾರಂಭ ಮಾಡುತ್ತಾರೆ ಎಂಬ ಪ್ರಶ್ನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿ, ಇದಕ್ಕೆ ಅವರೇ ಉತ್ತರ ಕೊಡಬೇಕು. ನಿನ್ನೆ ‌ನಡ್ಡಾ ಬಂದಿದ್ದರು. ತಾಪಂ, ಜಿಪಂ‌ ಚುನಾಯಿತ ಪ್ರತಿನಿಧಿಗಳ ಹೆಸರಲ್ಲಿ ಸಾರ್ವಜನಿಕ ಸಭೆ ಮಾಡಿದರು. ಅಲ್ಲಿಯೂ ಸಾಕಷ್ಟು‌ ಜನರು ಸೇರಿದ್ದರು. ನರೇಂದ್ರ ಮೋದಿ‌ ಅವರು ನಾಳೆ ಬರುತ್ತಾರೆ. ಬೆಂಗಳೂರಿನಲ್ಲಿ ಸಭೆ ಮಾಡುತ್ತಾರೆ. ಮೈಸೂರಿನಲ್ಲಿ ಯೋಗಾ ಮಾಡಲಿದ್ದಾರೆ. ಯೋಗಾ ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಜನ ಸೇರುತ್ತಾರೆ. ನಂತರ ಸಾರ್ವಜನಿಕ ಸಭೆ ಮಾಡಲಿದ್ದಾರೆ. ಅಲ್ಲಿ ಕೊರೋನಾ ಹಬ್ಬಲ್ವಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಪರಿಸರ ಉಳಿಸಲು ಸರ್ಕಾರದಿಂದ ನೂರು ಕೋಟಿ ಮೊತ್ತದ ಎಕಾಲಾಜಿಕಲ್ ಬಜೆಟ್: ಸಿಎಂ ಬಸವರಾಜ ಬೊಮ್ಮಾಯಿ

ಸಿಟಿ ರವಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು: ಟಿಪ್ಪು ಮೇಲೆ ಸಿದ್ದರಾಮಯ್ಯಗೆ ಮಾತ್ರ ಪ್ರೀತಿ ಎಂಬ ಬಿಜೆಪಿ ಶಾಸಕ ಸಿಟಿ ರವಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ರಾಣಿ ಚೆನ್ನಮ್ಮ, ಕೆಂಪೇಗೌಡ ಜಯಂತಿ ಮಾಡಿದ್ದು ನಾನು. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋ ಹಾಕಿದ್ದೇವೆ. ಹಾಗಾದ್ರೆ ಪ್ರೀತಿ ಇಲ್ವಾ?, ಇದನ್ನೆಲ್ಲ ಮಾಡಿದ್ದು ಇವರಾ? ಜನರ ಮಧ್ಯೆ ವಿಷ ಹಾಕೋದೇ ಆರ್​ಎಸ್​ಎಸ್ ಕೆಲಸ. ಆರ್​ಎಸ್​ಎಸ್ನವರಿಂದ​ ಇನ್ನೇನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯ? ಎಂದು ಕಿಡಿಕಾರಿದರು.

ಪಠ್ಯಪುಸ್ತಕಗಳನ್ನು ವಾಪಸ್ ಪಡೆಯಬೇಕು: ಪರಿಷ್ಕರಣಾ ಪಠ್ಯ ವಿಸರ್ಜಿಸಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದರು. ಬರಗೂರು ರಾಮಚಂದ್ರಪ್ಪ ಮಾಡಿದ್ದ ಪಠ್ಯ ಮಕ್ಕಳಿಗೆ ಕೊಡಬೇಕು. ತಿರುಚಿ ಕೇಸರೀಕರಣ ಮಾಡಿರುವ ಪಠ್ಯವನ್ನು ಓದಿಸಬಾರದು. ಶಿಕ್ಷಣ ಇಲಾಖೆ ಸಚಿವ ನಾಗೇಶ್ ರಾಜೀನಾಮೆ ನೀಡಬೇಕು. ಕೃತಿಚೌರ್ಯ ಮಾಡಿದ ಚಕ್ರತೀರ್ಥ ಅರೆಸ್ಟ್​ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada