ಹುಬ್ಬಳ್ಳಿ: ದೇಶದಲ್ಲಿ 50 ಲಕ್ಷ ಜನ ಕೊವಿಡ್‌ಗೆ ಬಲಿಯಾಗಿದ್ದಾರೆ. ಆದ್ರೆ 100 ಕೋಟಿ ಲಸಿಕೆ ಹಾಕಿದ್ದೀವಚಿ ಅಂತಾ ಬಿಜೆಪಿಯವರು ಸಂಭ್ರಮಿಸುತ್ತಿದ್ದಾರೆ. ಇದರಲ್ಲಿ 29 ಕೋಟಿ ಜನರು 2 ಡೋಸ್ ಪಡೆದಿದ್ದಾರೆ. 42 ಕೋಟಿ ಜನರು ಸಿಂಗಲ್ ಡೋಸ್ ಪಡೆದಿದ್ದಾರೆ. ಇದು ವಿಪರ್ಯಾಸ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕೊರೊನಾದಿಂದ ಸತ್ತವರ ಸಂಖ್ಯೆ ಎಷ್ಟು? ಆಕ್ಸಿಜನ್ ಬೆಡ್, ಔಷಧಿ ಕೊಡದೇ ಇರುವುದಕ್ಕೆ 50 ಲಕ್ಷ ಜನರು ಸತ್ತಿದ್ದಾರೆ. ರಾಜ್ಯದಲ್ಲಿ ನಾಲ್ಕು ಲಕ್ಷ ಜನರು ಮೃತಪಟ್ಟಿದ್ದಾರೆ. ಈಗ ಅತ್ಯವಸರದಲ್ಲಿ ಸಂಭ್ರಮಾಚರಣೆ ಮಾಡಿಕೊಳ್ತಿದೆ. ಖಾಲಿ ತಟ್ಟೆ ಬಡಿದು ಸಂಭ್ರಮಿಸ್ತಿರುವುದು ಹಾಸ್ಯಾಸ್ಪದ ಎಂದು ಸಿದ್ದರಾಮಯ್ಯ ಛೇಡಿಸಿದರು. ಯಾವ ಸಾಧನೆಗಾಗಿ ನೀವು ಸಂಭ್ರಮ ಮಾಡಿಕೊಳ್ತಿದ್ದೀರಿ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ ಎಂದು ಟ್ವೀಟ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಟೀಕೆಗೆ ಮೂರು ನಯಾ ಪೈಸೆ ಬೆಲೆ ಇರೋಲ್ಲ: ಸಚಿವ ಅಶೋಕ್
ಇದೇ ವೇಳೆ ಕೊವಿಡ್ ಲಸಿಕಾ ಸಂಭ್ರಮಾಚಾರಣೆ ಬಗ್ಗೆ ಟ್ವೀಟ್ ಮಾಡಿ, ಟೀಕಿಸಿರುವ ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ ಸಚಿವ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯೇ (WHO) ದೇಶದ ಪ್ರಧಾನಿ ಮೋಡಿ ಮತ್ತು ಲಸಿಕೆ ನೀಡಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯೇ ಅಭಿನಂದನೆ ಸಲ್ಲಿಸಿದ ಮೇಲೆ ಬೇರೆ ಯಾರೇ ಕಾಮೆಂಟ್ ಮಾಡಿದರೂ ಮೂರು ನಯಾ ಪೈಸೆಯ ಬೆಲೆ ಇರೋಲ್ಲ. ಸಣ್ಣಪುಟ್ಟ ಜನ ಇದಕ್ಕೆ ಮಾತಾಡಿದ್ರೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.
ಸಿದ್ದರಾಮಯ್ಯ ವಿರೋಧ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಸಿದ್ದರಾಮಯ್ಯ ಹೀಗೆ ಮಾತಾಡ್ತಿರಲಿ. ಅದಕ್ಕೆ ಇನ್ನೂ ಕಳೆ ಬರುತ್ತೆ. ಪ್ರಧಾನಿ ಮೋದಿಯನ್ನ ಟೀಕೆ ಮಾಡದೇ ಹೋದ್ರೆ ಕಾಂಗ್ರೆಸ್ ಅವ್ರಿಗೆ ತಿಂದಿದ್ದು ಜೀರ್ಣ ಆಗೊಲ್ಲ. ಕುಡಿಯುವ ನೀರು ಜೀರ್ಣ ಆಗೊಲ್ಲ. ಟೀಕೆ ಮಾಡೋದು ಕಾಂಗ್ರೆಸ್ ಅವ್ರ ಗುಣ. ಕಾಂಗ್ರೆಸ್ ಹೈಕಮಾಂಡ್ ಕೂಡಾ ಮೋದಿಯನ್ನ ಟೀಕೆ ಮಾಡಿ ಅಂತ ಹೇಳಿದೆ. ಯಾವುದಕ್ಕೆ ಟೀಕೆ ಮಾಡಬೇಕು ಅನ್ನೊ ಪರಿಜ್ಞಾನ ಸಿದ್ದರಾಮಯ್ಯಗೆ ಇಲ್ಲ. ಒಳ್ಳೆ ಕೆಲಸ ಮಾಡಿದಾಗ ಒಳ್ಳೆಯದನ್ನ ಹೇಳಬೇಕು. ಇಂತಹ ನಾಯಕನ ಬಗ್ಗೆ ನಮಗೆ ಬೇಸರ ಆಗ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ಅಶೋಕ್ ಕಿಡಿಕಾರಿದರು.
ಇದನ್ನೂ ಓದಿ:
PM Modi Speech LIVE: ಶತಕೋಟಿ ಲಸಿಕೆ ಸಾಧನೆ; ದೇಶವನ್ನು ಉದ್ದೇಶಿಸಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ
CM Basavaraja ಬೊಮ್ಮಾಯಿ ಬಂದಾಗ ಸುನಾಮಿ ಆಗಲಿಲ್ವಂತಾ? | Siddaramaiah |Tv9Kannada
(siddaramaiah criticize 100 crore covid 19 vaccination but minister ashoka lambasts him)
Published On - 10:23 am, Fri, 22 October 21