ಆತ್ಮೀಯ ಮಿತ್ರ ರೇವಣ್ಣ ಇದ್ದ ಮನೆಗೆ ಸಿದ್ದರಾಮಯ್ಯ ಪ್ರವೇಶ

ಬೆಂಗಳೂರು: ಕೊನೆಗೂ ತಾವಿದ್ದ ಕಾವೇರಿ ನಿವಾಸವನ್ನ ಖಾಲಿ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಮನೆ ಖಾಲಿ ಮಾಡಿ ಹೊಸ ಮನೆ ಪ್ರವೇಶಿಸಲಿದ್ದಾರೆ. ಈ ಹಿಂದೆ ಮಾಜಿ ಸಚಿವ ಹೆಚ್.​ಡಿ ರೇವಣ್ಣರಿದ್ದ ಗಾಂಧಿ ಭವನದ ಹಿಂಭಾಗದಲ್ಲಿರುವ ನಿವಾಸಕ್ಕೆ ಇದೀಗ ಸಿದ್ದರಾಮಯ್ಯ ಮನೆ ಪ್ರವೇಶಿಸಲು ಮುಂದಾಗಿದ್ದಾರೆ. ನೂತನ ಮನೆಗೆ ಪ್ರವೇಶಿಸಲಿರುವ ಹಿನ್ನೆಲೆ ಈಗಾಗಲೇ ಮನೆಗೆ ಸುಣ್ಣ ಬಣ್ಣ ಹೊಡೆದು ಸಿದ್ಧಮಾಡಲಾಗಿದೆ. ಸಿಬ್ಬಂದಿ ಇಂದು ಮನೆ ಬಾಗಿಲಿಗೆ ಹೂ ಕಟ್ಟಿ ಪೂಜೆ ನೆರವೇರಿಸಿದ್ದಾರೆ. ಸಿದ್ದರಾಮಯ್ಯ ಕುಟುಂಬಸ್ಥರು ಮನೆ ಪ್ರವೇಶಕ್ಕೂ ಮುನ್ನ […]

ಆತ್ಮೀಯ ಮಿತ್ರ ರೇವಣ್ಣ ಇದ್ದ ಮನೆಗೆ ಸಿದ್ದರಾಮಯ್ಯ ಪ್ರವೇಶ
Follow us
ಸಾಧು ಶ್ರೀನಾಥ್​
|

Updated on:Jan 29, 2020 | 1:28 PM

ಬೆಂಗಳೂರು: ಕೊನೆಗೂ ತಾವಿದ್ದ ಕಾವೇರಿ ನಿವಾಸವನ್ನ ಖಾಲಿ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಮನೆ ಖಾಲಿ ಮಾಡಿ ಹೊಸ ಮನೆ ಪ್ರವೇಶಿಸಲಿದ್ದಾರೆ. ಈ ಹಿಂದೆ ಮಾಜಿ ಸಚಿವ ಹೆಚ್.​ಡಿ ರೇವಣ್ಣರಿದ್ದ ಗಾಂಧಿ ಭವನದ ಹಿಂಭಾಗದಲ್ಲಿರುವ ನಿವಾಸಕ್ಕೆ ಇದೀಗ ಸಿದ್ದರಾಮಯ್ಯ ಮನೆ ಪ್ರವೇಶಿಸಲು ಮುಂದಾಗಿದ್ದಾರೆ.

ನೂತನ ಮನೆಗೆ ಪ್ರವೇಶಿಸಲಿರುವ ಹಿನ್ನೆಲೆ ಈಗಾಗಲೇ ಮನೆಗೆ ಸುಣ್ಣ ಬಣ್ಣ ಹೊಡೆದು ಸಿದ್ಧಮಾಡಲಾಗಿದೆ. ಸಿಬ್ಬಂದಿ ಇಂದು ಮನೆ ಬಾಗಿಲಿಗೆ ಹೂ ಕಟ್ಟಿ ಪೂಜೆ ನೆರವೇರಿಸಿದ್ದಾರೆ. ಸಿದ್ದರಾಮಯ್ಯ ಕುಟುಂಬಸ್ಥರು ಮನೆ ಪ್ರವೇಶಕ್ಕೂ ಮುನ್ನ ಆರ್ಚಕರಿಂದ ವಿಶೇಷ ಪೂಜೆ ಮಾಡಿಸಿದ್ದಾರೆ. ಇಂದು ಪೂಜೆ ನೆರವೇರಿದ್ದು, ಇನ್ನೆರಡು ದಿನಗಳಲ್ಲಿ ಹೊಸ ಮನೆಗೆ ಬರಲಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕೊನೆಗೂ ಸಿಎಂ ಯಡಿಯೂರಪ್ಪಗೆ ಕಾವೇರಿ ನಿವಾಸವನ್ನ ಬಿಟ್ಟು ಕೊಟ್ಟಿದ್ದಾರೆ. ಸುಮಾರು 6.5 ವರ್ಷಗಳ ಕಾಲ ವಾಸ್ತವ್ಯ ಹೂಡಿದ್ದ ನಿವಾಸ ತೊರೆದು ಹೊಸ ನಿವಾಸಕ್ಕೆ ಗೃಹ ಪ್ರವೇಶ ಮಾಡಲಿದ್ದಾರೆ.

ನೂತನ ನಿವಾಸಕ್ಕೆ ಆಗಮಿಸುತ್ತಿದ್ದಂತೆಯೇ ಸಿದ್ದು ಗರಂ: ನೂತನ ನಿವಾಸಕ್ಕೆ ಪೂಜೆಗೆ ಆಗಮಿಸುತ್ತಿದ್ದಂತೆಯೇ ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಮೇಲೆ ಗರಂ ಆಗಿದ್ದಾರೆ. ಮಾಧ್ಯಮದವರನ್ನ ಗೇಟ್ ಒಳಗಡೆ ಬಿಟ್ಟಿದ್ದಕ್ಕೆ ಸಿದ್ದು ಸಿಡಿಮಿಡಿಗೊಂಡಿದ್ದಾರೆ. ಎಲ್ಲರೂ ಇಲ್ಲಿಂದ ಹೊರಡಿ ಎಂದು ಮಾಧ್ಯಮದವರಿಗೆ ಗದರಿದ್ದಾರೆ.

Published On - 1:10 pm, Wed, 29 January 20

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ