Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಪ ಶಿವಕುಮಾರ್ ಮನೆ ಮೇಲೆ ಎಂಥ ಸಂದರ್ಭದಲ್ಲಿ ರೇಡ್ ಮಾಡಿದ್ದಾರೆ ನೋಡಿ: ಸಿದ್ದು

ಬೆಂಗಳೂರು: ಡಿ.ಕೆ.ಶಿವಕುಮಾರ್ ಮನೆ ಸೇರಿ ಹಲವೆಡೆ ಸಿಬಿಐ ದಾಳಿ ವಿಚಾರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಪಾಪ ಶಿವಕುಮಾರ್ ಮನೆ ಮೇಲೆ ಎಂಥ ಸಂದರ್ಭದಲ್ಲಿ ರೇಡ್ ಮಾಡಿದ್ದಾರೆ. ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ, ಉಪಚುನಾವಣೆ ಬರುತ್ತಿದೆ. ತಪ್ಪು ಇದ್ರೆ ದಾಳಿ ಮಾಡಲಿ. ಆದರೆ, ರಾಜಕೀಯ ದುರುದ್ದೇಶದಿಂದ ಮಾಡಬೇಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಜೊತೆಗೆ, ಈಗ ಮಾಧ್ಯಮಗಳನ್ನ ಹತ್ತಿಕ್ಕೋ ಕೆಲಸ ನಡೀತಿದೆ. ಅವರಿಗೆ ವಾಕ್ ಸ್ವಾತಂತ್ರ್ಯ ಇದೆ. ಅವರು ಮಾಡಲಿ ಬಿಡಿ. ನನ್ನನ್ನೂ ಮಾಧ್ಯಮವರು ಟೀಕೆ ಮಾಡಿದ್ದಾರೆ. ನಾನು ಎಂದೂ […]

ಪಾಪ ಶಿವಕುಮಾರ್ ಮನೆ ಮೇಲೆ ಎಂಥ ಸಂದರ್ಭದಲ್ಲಿ ರೇಡ್ ಮಾಡಿದ್ದಾರೆ ನೋಡಿ: ಸಿದ್ದು
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us
KUSHAL V
|

Updated on:Oct 05, 2020 | 3:09 PM

ಬೆಂಗಳೂರು: ಡಿ.ಕೆ.ಶಿವಕುಮಾರ್ ಮನೆ ಸೇರಿ ಹಲವೆಡೆ ಸಿಬಿಐ ದಾಳಿ ವಿಚಾರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಪಾಪ ಶಿವಕುಮಾರ್ ಮನೆ ಮೇಲೆ ಎಂಥ ಸಂದರ್ಭದಲ್ಲಿ ರೇಡ್ ಮಾಡಿದ್ದಾರೆ. ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ, ಉಪಚುನಾವಣೆ ಬರುತ್ತಿದೆ. ತಪ್ಪು ಇದ್ರೆ ದಾಳಿ ಮಾಡಲಿ. ಆದರೆ, ರಾಜಕೀಯ ದುರುದ್ದೇಶದಿಂದ ಮಾಡಬೇಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಜೊತೆಗೆ, ಈಗ ಮಾಧ್ಯಮಗಳನ್ನ ಹತ್ತಿಕ್ಕೋ ಕೆಲಸ ನಡೀತಿದೆ. ಅವರಿಗೆ ವಾಕ್ ಸ್ವಾತಂತ್ರ್ಯ ಇದೆ. ಅವರು ಮಾಡಲಿ ಬಿಡಿ. ನನ್ನನ್ನೂ ಮಾಧ್ಯಮವರು ಟೀಕೆ ಮಾಡಿದ್ದಾರೆ. ನಾನು ಎಂದೂ ಅವ್ರನ್ನ ಪ್ರಶ್ನಿಸಿಲ್ಲ. ಈಗ ಮಾಧ್ಯಮದವರನ್ನೇ ಬಲಿ ಹಾಕೋಕೆ ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಜೊತೆಗೆ, ‌ಉತ್ತರ ಪ್ರದೇಶದ ಅನ್ಯಾಯವನ್ನು ಖಂಡಿಸಿ ಈಗಾಗ್ಲೆ ಪಂಜಿನ ಮೆರವಣಿಗೆ ಮೂಲಕ ನಾವು ಪ್ರತಿಭಟನೆ ಮಾಡಿದ್ದೇವೆ. AICCಯಿಂದ ಎಲ್ಲಾ ಕಡೆ ಪ್ರತಿಭಟನೆ ಆಗಬೇಕು ಅನ್ನೋ ಸೂಚನೆ ಇದೆ. ಹಾಗಾಗಿ KPCCಯಿಂದ ಇಡೀ ಕರ್ನಾಟಕ ಮತ್ತು ಬೆಂಗಳೂರಿನ ಪ್ರತೀ ವಾರ್ಡ್​ನಲ್ಲೂ ಪ್ರತಿಭಟನೆ ಆಗೋ ಸೂಚನೆ ಕೊಟ್ಟಿದ್ದಾರೆ. ಇಂಥ ಘಟನೆಯನ್ನ ಎಲ್ಲರೂ ಪಕ್ಷಾತೀತವಾಗಿ ವಿರೋಧಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಅನಾಗರಿಕ ಸಮಾಜದಲ್ಲಿ ಮಾತ್ರ ಇಂಥ ಘಟನೆ ಆಗೋದು. ನಾಗರೀಕರು ಇದನ್ನ ಸಹಿಸಿಕೊಳ್ಳಬಾರದು. ಬಿಜೆಪಿ ಅವ್ರು ನಮಗೆ ಸಂಸ್ಕಾರ ಇದೆ, ಸುಸಂಸ್ಕೃತರು ಅಂತಾ ಎಲ್ಲಾ ಕಡೆ ಹೇಳ್ತಾರೆ. ಇದು ಸಂಸ್ಕೃತಿಯ ಲಕ್ಷಣನಾ? ನಾಗರೀಕತೆಯ ಲಕ್ಷಣನಾ? ಯೋಗಿ ಆದಿತ್ಯನಾಥ್ ಕಾವಿ ಬಟ್ಟೆ ಹಾಕಿಕೊಳ್ಳಲು ನಾಲಾಯಕ್.  ಈ ಯೋಗಿಯೇ ಸುಮಾರು 25 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಅವನು ಯೋಗಿ ಅಲ್ಲ ಅಯೋಗ್ಯನಾಥ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಖಾರವಾಗಿ ಮಾತನಾಡಿದ್ದಾರೆ.

‘ಕುಮಾರಿ ಶೋಭಾ ಕರಂದ್ಲಾಜೆ ಎಲ್ಲಿದ್ದೀರಿ ಈಗ?’ ಕುಮಾರಿ ಶೋಭಾ ಕರಂದ್ಲಾಜೆ ಎಲ್ಲಿದ್ದೀರಿ ಈಗ? ನಾನು ಸಿಎಂ ಆಗಿದ್ದಾಗ  ಏನು ಕೂಗಾಡಿದ್ದೇ, ಕೂಗಾಡಿದ್ದು. ಇಂಥ ಡೋಂಗಿಗಳು ಸರ್ಕಾರವನ್ನ ಆಳ್ತಾರೆ. ಬಿಜೆಪಿ ಇರೋವರೆಗು ದುರ್ಬಲರು, ದಲಿತರಿಗೆ ರಕ್ಷಣೆ ಸಿಗೋದಿಲ್ಲ. ಅವ್ರು ಮೇಲ್ವರ್ಗದ ಜನರಪರ ಇರೋರು. ಮೋದಿಯ ಬಣ್ಣದ ಮಾತಿಗೆ ಮರುಳಾಗಿ ಅಧಿಕಾರ ಕೊಟ್ರಿ. ಈಗ ಏನು ಮಾಡ್ತಿದ್ದಾರೆ ಮೋದಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೊರೊನಾ ಬಂತು. ಜನ ಸತ್ತರು.‌ ಏನಾಯ್ತು? ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿದ್ರಲ್ಲ. ನಾಚಿಕೆ ಆಗಲ್ವಾ ನಿಮಗೆ? ರೋಗಕ್ಕೆ ವೈಜ್ಞಾನಿಕ ಕ್ರಮ ತೆಗೆದುಕೊಳ್ಳೋ ಬದಲು ಜಾಗಟೆ ಬಾರಿಸಿದ್ರಲ್ಲ ಎಂದು ಹೇಳಿದ್ದಾರೆ.

Published On - 2:46 pm, Mon, 5 October 20