‘CBI ದಾಳಿ ರಾಜಕೀಯ ಪ್ರೇರಿತ ಅನ್ನೋದು ಅರ್ಥಹೀನ ಮತ್ತು ಹಾಸ್ಯಾಸ್ಪದ’
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಮಾಧ್ಯಮ ಪ್ರಕಟಣೆ ನೀಡಿದ್ದಾರೆ. ಸಿಬಿಐ, ಇಡಿ ಮತ್ತು ಐಟಿ ಸ್ವಾಯತ್ತ ಸಂಸ್ಥೆಗಳು. ಹಣಕಾಸು ಕ್ಷೇತ್ರದ ಮೋಸ ಮತ್ತು ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳ ವಿರುದ್ಧ ಕಾರ್ಯಾಚರಣೆ ಮತ್ತು ವಿಚಾರಣೆ ನಡೆಸಲು ಅವರು ಸ್ವತಂತ್ರರು. ತನಿಖೆ ನಡೆಸಲು ಈ ಸಂಸ್ಥೆಗಳಿಗೆ ನೀಡಿದ ಸ್ವಾಯತ್ತತೆಯನ್ನು ಬಿಜೆಪಿ ಗೌರವಿಸುತ್ತದೆ. ದಾಳಿಯ ವಿರುದ್ಧ ರಾಜಕೀಯ ಪ್ರೇರಿತ ಕಾರಣಗಳಿಗಾಗಿ ಪ್ರತಿಭಟನೆ ನಡೆಸಲಾಗುತ್ತದೆ. ಇದು […]
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಮಾಧ್ಯಮ ಪ್ರಕಟಣೆ ನೀಡಿದ್ದಾರೆ. ಸಿಬಿಐ, ಇಡಿ ಮತ್ತು ಐಟಿ ಸ್ವಾಯತ್ತ ಸಂಸ್ಥೆಗಳು. ಹಣಕಾಸು ಕ್ಷೇತ್ರದ ಮೋಸ ಮತ್ತು ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳ ವಿರುದ್ಧ ಕಾರ್ಯಾಚರಣೆ ಮತ್ತು ವಿಚಾರಣೆ ನಡೆಸಲು ಅವರು ಸ್ವತಂತ್ರರು. ತನಿಖೆ ನಡೆಸಲು ಈ ಸಂಸ್ಥೆಗಳಿಗೆ ನೀಡಿದ ಸ್ವಾಯತ್ತತೆಯನ್ನು ಬಿಜೆಪಿ ಗೌರವಿಸುತ್ತದೆ. ದಾಳಿಯ ವಿರುದ್ಧ ರಾಜಕೀಯ ಪ್ರೇರಿತ ಕಾರಣಗಳಿಗಾಗಿ ಪ್ರತಿಭಟನೆ ನಡೆಸಲಾಗುತ್ತದೆ. ಇದು ಅರ್ಥಹೀನ ಮತ್ತು ಹಾಸ್ಯಾಸ್ಪದ ಎಂದು ಕ್ಯಾ. ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟಿದ್ದಾರೆ.
2017ರಲ್ಲಿ ಡಿ.ಕೆ. ಶಿವಕುಮಾರ್ ಮೇಲೆ ಇ.ಡಿ. ನಡೆಸಿದ ದಾಳಿಯ ಮುಂದುವರಿದ ಭಾಗವಾಗಿ ಈ ದಾಳಿ ನಡೆಸಲಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಸುದೀರ್ಘ ಕಾಲ ಅಧಿಕಾರದಲ್ಲಿದ್ದ(ಕಾಂಗ್ರೆಸ್) ಪಕ್ಷದ ಮುಖಂಡರು ಈ ಸಂಸ್ಥೆಗಳ ಕಾರ್ಯ ನಿರ್ವಹಣೆ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿದಿರಬೇಕಿತ್ತು ಎಂದು ಸೂಚ್ಯವಾಗಿ ಅವರು ಹೇಳಿದರು.
Published On - 2:28 pm, Mon, 5 October 20