ಬೆಂಗಳೂರು: ‘ಮಹಾನಾಯಕನ’ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮೊದಲೇ ಮಾಹಿತಿ ಪಡೆದುಕೊಂಡಿದ್ದರು ಎಂಬ ಮಾಹಿತಿ ಸಿಕ್ಕಿದೆ. ಡಿ.ಕೆ.ಶಿವಕುಮಾರ್ ಹೆಸರು ಹೊರಬರುತ್ತೆ ಎಂದು ಸಿದ್ದರಾಮಯ್ಯ ಈ ಮೊದಲೇ ಖಚಿತಪಡಿಸಿಕೊಂಡಿದ್ರು ಎಂದು ಹೇಳಲಾಗಿದೆ. ಒಂದಲ್ಲ ಒಂದು ಸಂದರ್ಭದಲ್ಲಿ ಡಿಕೆಶಿ ಹೆಸರು ಹೊರ ಬರುತ್ತೆಂದು ಮಾಹಿತಿ ಪಡೆದಿದ್ದರಂತೆ. ಖಚಿತ ಮಾಹಿತಿ ಪಡೆದುಕೊಂಡಿದ್ದ ಕಾಂಗ್ರೆಸ್ ಹಿರಿಯ ನಾಯಕರು ಇದೇ ಕಾರಣಕ್ಕೆ ಸದನದಲ್ಲಿ ವಿಚಾರ ಪ್ರಸ್ತಾಪಕ್ಕೆ ಹಿಂದೇಟು ಹಾಕಿದ್ದರು ಎಂದು ಹೇಳಲಾಗಿದೆ. ಸದನದಲ್ಲಿ ಸಿಡಿ ವಿಚಾರ ಪ್ರಸ್ತಾಪಿಸಲು ಪಕ್ಷದ ನಾಯಕರು ಹಾಗೂ ಸಿದ್ದರಾಮಯ್ಯ ಹಿಂದೇಟು ಹಾಕಿದ್ದರಂತೆ.
ಆದರೆ, ಪಟ್ಟು ಬಿಡದೇ ಸಿಡಿ ವಿಚಾರಕ್ಕೆ ಅತ್ಯುತ್ಸಾಹ ತೋರಿದ್ದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಒಪ್ಪದೇ ಇದ್ದಾಗ ದೆಹಲಿಯಿಂದ ಸೂಚನೆ ಪಡೆದು ಸಿಡಿ ವಿಚಾರ ಪ್ರಸ್ತಾಪಿಸುವಂತೆ ಮಾಡಿದ್ದರಂತೆ. ಡಿಕೆಶಿ ದೆಹಲಿಯಿಂದ ಸಿದ್ದರಾಮಯ್ಯಗೆ ಸೂಚನೆ ಕೊಡಿಸಿದ್ದರಂತೆ. ಆ ಬಳಿಕವೇ ಸಿದ್ದರಾಮಯ್ಯ ಸದನದಲ್ಲಿ ಸಿಡಿ ವಿಚಾರ ಪ್ರಸ್ತಾಪಿಸಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ, ಇದೀಗ, ಬಯಲಾಗಿರುವ ಸ್ಫೋಟಕ ಆಡಿಯೋದಲ್ಲಿ ಡಿಕೆಶಿ ಹೆಸರು ಪ್ರಸ್ತಾಪದಿಂದ ಕಾಂಗ್ರೆಸ್ಗೆ ಮುಜುಗರ ಉಂಟಾಗುವ ಎಲ್ಲಾ ಸಾಧ್ಯತೆ ಎದುರಾಗಿದೆ.
ಇತ್ತ, ಸಿಡಿಯಲ್ಲಿದ್ದ ಯುವತಿ ತಮ್ಮ ಕುಟುಂಬದವರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಡಿಕೆಶಿ ಹೆಸರು ಪ್ರಸ್ತಾಪಿಸಿರುವ ಬಗ್ಗೆ ಎಲ್ಲಡೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ನಡುವೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಾಸಗಿ ಕೆಲಸದ ನಿಮಿತ್ತ ಹೊರಗಡೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಶಿವಕುಮಾರ್ ಸದಾಶಿವನಗರದಲ್ಲಿರುವ ತಮ್ಮ ಮನೆಯಿಂದ ತೆರಳಿದ್ದಾರೆ. ಅಂದ ಹಾಗೆ, ಡಿ.ಕೆ.ಶಿವಕುಮಾರ್ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಾಳೆ ಪ್ರಚಾರಕ್ಕೆ ತೆರಳಿದ್ದಾರೆ.
‘ಸದನದಲ್ಲಿ ಬೊಬ್ಬಿರಿದ ಮಹಾಶೂರರು ಈಗೇನು ಹೇಳುತ್ತಾರೆ?’
ಇತ್ತ, ಸಿಡಿಯಲ್ಲಿದ್ದ ಲೇಡಿ ಮಾತನಾಡಿದ ಆಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ. ಪ್ರಕರಣದ ‘ಸಂತ್ರಸ್ತೆ’ ಮಹಾನಾಯಕನ ಹೆಸರು ಪ್ರಸ್ತಾಪಿಸಿದ್ದಾಳೆ. ಮಹಾನಾಯಕ ನಮ್ಮ ಜತೆಗಿದ್ದಾನೆ ಎಂಬ ಮಾತು ಆಡಿದ್ದಾರೆ. ಸದನದಲ್ಲಿ ಬೊಬ್ಬಿರಿದ ಮಹಾಶೂರರು ಈಗೇನು ಹೇಳುತ್ತಾರೆ? ಕಾಂಗ್ರೆಸ್ ಕಚೇರಿಯಲ್ಲೇ ಷಡ್ಯಂತ್ರ ನಡೆದಿದೆಯೇ ಎಂದು ಕಾಂಗ್ರೆಸ್ಗೆ ಟ್ವೀಟ್ ಮೂಲಕ ರಾಜ್ಯ ಬಿಜೆಪಿ ಘಟಕ ಪ್ರಶ್ನೆ ಹಾಕಿದೆ.
ಆರಂಭದಿಂದಲೂ #ಮಹಾನಾಯಕನ ಸುತ್ತಲೂ ಪ್ರಕರಣ ಗಿರಕಿ ಹೊಡೆಯುತ್ತಿತ್ತು.
ಮಹಾನಾಯಕನ ಮನೆಯ ಬಳಿಗೆ ನಾನು ಬಂದಿದ್ದೇನೆ ಎಂದು ಸಂತ್ರಸ್ಥೆ ಹೇಳಿಕೊಂಡಿದ್ದಾಳೆ.
ಮಹಾನಾಯಕನಿಗೂ ಪ್ರಕರಣದ ಮಾಸ್ಟರ್ ಮೈಂಡ್‌ಗಳಿಗೂ ಇರುವ ಸಂಬಂಧವವನ್ನು @INCKarnataka ಬಹಿರಂಗಗೊಳಿಸಬೇಕು. pic.twitter.com/YVyM5JXfsT
— BJP Karnataka (@BJP4Karnataka) March 26, 2021
ಆರಂಭದಿಂದಲೂ ಸಿಡಿ ಕೇಸ್ ಮಹಾನಾಯಕನ ಸುತ್ತಲೂ ಪ್ರಕರಣ ಗಿರಕಿ ಹೊಡೆಯುತ್ತಿತ್ತು. ಮಹಾನಾಯಕನ ಮನೆ ಬಳಿಗೆ ಬಂದಿದ್ದೇನೆ ಎಂದು ಹೇಳಿದ್ದಾಳೆ. ಮಹಾನಾಯಕನಿಗೂ ಪ್ರಕರಣದ ಮಾಸ್ಟರ್ ಮೈಂಡ್‌ಗಳಿಗೂ ಇರುವ ಸಂಬಂಧವವನ್ನ ಕಾಂಗ್ರೆಸ್ ಬಹಿರಂಗಗೊಳಿಸಬೇಕು. ಸಿಡಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪವಾಗಿದೆ. ಅನೈತಿಕ, ಅಧರ್ಮ ರಾಜಕಾರಣಕ್ಕೆ ಮುನ್ನುಡಿ ಬರೆದ ತಕ್ಷಣ ಮಹಾನಾಯಕನ ರಾಜೀನಾಮೆಯನ್ನ ಪಡೆಯಬೇಕು. ರಾಷ್ಟ್ರೀಯ ಮಹಾನಾಯಕಿ ತಕ್ಷಣ ರಾಜೀನಾಮೆ ಪಡೀಬೇಕು. ಒಬ್ಬ ಹೆಣ್ಣನ್ನ ದುರ್ಬಳಕೆ ಮಾಡಿಕೊಂಡು ಅಧಿಕಾರ ಪಡೆಯುಲು ಷಡ್ಯಂತ್ರ ರೂಪಿಸಿದ ಕಾಂಗ್ರೆಸ್ ಜನರ ಕ್ಷಮೆ ಕೇಳಬೇಕು ಎಂದು ಬಿಜೆಪಿ ಟ್ವೀಟ್ ಮಾಡಿದೆ.
‘ಜೈಲಿನಲ್ಲಿ ಮುದ್ದೆ ಮುರಿದಿದ್ದ ಡಿಕೆಶಿ ಅವರನ್ನು ಸಿಡಿ ಪ್ರಕರಣದಲ್ಲೂ ತಿಹಾರ್ ಜೈಲಿಗೆ ಕಳುಹಿಸಬೇಕಿದೆ’
ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿನಲ್ಲಿ ಮುದ್ದೆ ಮುರಿದಿದ್ದ ಡಿಕೆಶಿ ಅವರನ್ನು ಸಿಡಿ ಪ್ರಕರಣದಲ್ಲೂ ತಿಹಾರ್ ಜೈಲಿಗೆ ಕಳುಹಿಸಬೇಕಿದೆ. ದ್ವೇಷ ಸಾಧಿಸಲು ರಾಜಕಾರಣದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ನಿರ್ಮಾಪಕ ಮಹಾನಾಯಕನ ಕುತಂತ್ರಕ್ಕೆ ಅಂತ್ಯ ಹಾಡಬೇಕು ಎಂದು ಆಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.
‘ಮೂರು ಬಿಟ್ಟವರು ಊರಿಗೆ ದೊಡ್ಡವರೆಂಬ ಮಾತಿದೆ’
ಮೂರು ಬಿಟ್ಟವರು ಊರಿಗೆ ದೊಡ್ಡವರೆಂಬ ಮಾತಿದೆ. ಆ ಮಾತನ್ನ ಕಾಂಗ್ರೆಸ್ ನಾಯಕರನ್ನ ನೋಡಿ ಮಾಡಿರಬೇಕು. ಅಧಿಕಾರಕ್ಕಾಗಿ ಯಾವ ನೀಚ ಮಟ್ಟಕ್ಕೆ ಬೇಕಾದ್ರೂ ಇಳೀಬಹುದು. ಯಾವ ಮಟ್ಟಕ್ಕೆ ಬೇಕಾದ್ರೂ ಇಳೀಬಹುದೆಂದು ತೋರಿಸಿದ್ದಾರೆ. ಮಹಾನಾಯಕನಿಗೆ ಸ್ವಲ್ಪವಾದ್ರೂ ಮಾನ ಮರ್ಯಾದೆ ಉಳಿದಿದ್ದರೆ ತಕ್ಷಣ ರಾಜೀನಾಮೆ ನೀಡಲಿ. ಮಹಾನಾಯಕ ಕೂಡಲೇ ರಾಜೀನಾಮೆಯನ್ನ ನೀಡಲಿ ಎಂದು ಕರ್ನಾಟಕ ರಾಜ್ಯ ಬಿಜೆಪಿ ಘಟಕ ಟ್ವೀಟ್ ಆಗ್ರಹ ಮಾಡಿದೆ.
ಯಡಿಯೂರಪ್ಪ ವಿಚಾರದಲ್ಲಿ ಟ್ವೀಟ್ ಮಾಡಿದ ಕಾಂಗ್ರೆಸ್
ಸಿಡಿಯಲ್ಲಿದ್ದ ಲೇಡಿ ಮಾತನಾಡಿದ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಟ್ವೀಟ್ ಮಾಡಿದೆ. ಸಿಡಿ ಲೇಡಿಯಿಂದ ಡಿಕೆಶಿ ಹೆಸರು ಪ್ರಸ್ತಾಪವಾದ ಬಳಿಕ ಯಡಿಯೂರಪ್ಪ ವಿಚಾರದಲ್ಲಿ ಟ್ವೀಟ್ ಮಾಡಿದ ಕಾಂಗ್ರೆಸ್ ಟ್ವಿಟ್ವರ್ ಖಾತೆಯಲ್ಲಿ ವಿಷಯಾಂತರ ಮಾಡುವ ಪ್ರಯತ್ನ ನಡೆಸಿದೆ.
ಬಿಜೆಪಿ VS ಬಿಜೆಪಿ ಕಿತ್ತಾಟ ತಾರಕಕ್ಕೇರುತ್ತಿದೆ. ಕೇವಲ ಒಬ್ಬ ಯತ್ನಾಳ್‌ರನ್ನು ಎದುರಿಸಲು ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಬಿಎಸ್ವೈ ಪರ ಶಕ್ತಿ ಪ್ರದರ್ಶಿಸುವ ಅಗತ್ಯವೇ ಇಲ್ಲ. ಬದಲಿಗೆ ದೊಡ್ಡ ‘ಸಂತೋಷ’ ಕೂಟಕ್ಕೆ ಕೊಟ್ಟ ಸಂದೇಶವಿದು. BSY ಮುಕ್ತ ಅಭಿಯಾನಕ್ಕೆ ಯತ್ನಾಳ್ ಕೇವಲ ಮುಖವಾಣಿ. ತೆರೆಮರೆಯಲ್ಲಿ ದೊಡ್ಡ ದಂಡೇ ಇದೆ ಎನ್ನುವುದು ತಿಳೀತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಟ್ವೀಟ್ ಮಾಡಿದೆ.
‘ಇನ್ನೂ ಯಾಕೆ ಅತ್ಯಾಚಾರವೆಸಗಿದ ರಮೇಶ್‌ರನ್ನು ಬಂಧಿಸಿಲ್ಲ?’
ಜೊತೆಗೆ, ಸಿಡಿಯಲ್ಲಿದ್ದ ಲೇಡಿ ದೂರು ಆಧರಿಸಿ ಎಫ್‌ಐಆರ್ ದಾಖಲಾಗಿದೆ. ಇನ್ನೂ ಯಾಕೆ ಅತ್ಯಾಚಾರವೆಸಗಿದ ರಮೇಶ್‌ರನ್ನು ಬಂಧಿಸಿಲ್ಲ? ಎಂದು ಟ್ವೀಟ್ ಮಾಡಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆ ಹಾಕಿದೆ. ರಾಜ್ಯಸರ್ಕಾರಕ್ಕೆ ಭಯವೇ ಎಂದು ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್ ಪ್ರಶ್ನೆ ಹಾಕಿದೆ.
ಮಾಜಿ ಸಚಿವರೆಂದ ಮಾತ್ರಕ್ಕೆ ಕಾನೂನಿಗೆ ಅತೀತರೇ? ಬಿಲ್ಡಪ್ ಬೊಮ್ಮಾಯಿರವರೇ ಈ ರಕ್ಷಣಾತ್ಮಕ ಆಟ ಸಾಕು. ಕೂಡಲೇ ರೇಪಿಸ್ಟ್ ರಮೇಶ್ ಬಂಧಿಸಿ, ರಾಜ್ಯದ ಮಾನ ಉಳಿಸಿ ಎಂದು ಟ್ವೀಟ್ ಮಾಡಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಒತ್ತಾಯ ಮಾಡಿದೆ.
Published On - 8:36 pm, Fri, 26 March 21