ಬಿಜೆಪಿಯವರು ಹಿಂದುತ್ವ ಅಂತಾರೆ, ನಾವು ಹಿಂದೂಗಳಲ್ವಾ ಎಂದು ಬಿಜೆಪಿ ವಿರುದ್ಧ ಗುಡುಗಿದ ಸಿದ್ದರಾಮಯ್ಯ
ಮೋದಿ ಯಾವತ್ತಾದರೂ ನಿರುದ್ಯೋಗದ ಬಗ್ಗೆ ಮಾತನಾಡಿದ್ದಾರಾ, ಸಿಲಿಂಡರ್, ತೈಲ ಬೆಲೆ ಏರಿಕೆಯಾಗಿದೆ, ಶೋಭಾ ಈಗೆಲ್ಲಿದ್ದಾರೆ. ಗೋವನ್ನು ಹೊರದೇಶದಿಂದ ತಂದು ತಿನ್ನಬಹುದಂತೆ. ಅಲ್ಲಿ ಗೋಮಾತೆ ಇಲ್ವಾ ಎಂದು ಬಿಜೆಪಿ ವಿರುದ್ಧ ಮಾತನಾಡಿದ್ದಾರೆ.
ಹುಬ್ಬಳ್ಳಿ: ನಮ್ಮದು ಗಾಂಧಿ, ನೆಹರು, ಬೋಸ್, ಪಟೇಲ್ ಹಿಂದುತ್ವ. ಬಿಜೆಪಿಯವರು ಹಿಂದುತ್ವ ಅಂತಾರೆ, ನಾವು ಹಿಂದೂಗಳಲ್ವಾ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಟೀಕೆಗೆ ಮರುಪ್ರಶ್ನೆ ಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಗೋಮಾತೆ ವಿರೋಧಿ ಎನ್ನುತ್ತಾರೆ. ತಾಕತ್ತಿದ್ದರೆ ಬಿಜೆಪಿ ಗೋಮಾಂಸ ರಫ್ತು, ಆಮದು ಎರಡನ್ನೂ ನಿಲ್ಲಿಸಲಿ ಎಂದು ಗುಡುಗಿದ್ದಾರೆ.
ಮೋದಿ ಯಾವತ್ತಾದರೂ ನಿರುದ್ಯೋಗದ ಬಗ್ಗೆ ಮಾತನಾಡಿದ್ದಾರಾ, ಸಿಲಿಂಡರ್, ತೈಲ ಬೆಲೆ ಏರಿಕೆಯಾಗಿದೆ, ಶೋಭಾ ಈಗೆಲ್ಲಿದ್ದಾರೆ. ಗೋವನ್ನು ಹೊರದೇಶದಿಂದ ತಂದು ತಿನ್ನಬಹುದಂತೆ. ಅಲ್ಲಿ ಗೋಮಾತೆ ಇಲ್ವಾ ಎಂದು ಬಿಜೆಪಿ ವಿರುದ್ಧ ಮಾತನಾಡಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಯಾವ ಭಾಗ್ಯಗಳು ಜನರಿಗೆ ತಲುಪಿಲ್ಲ: ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ
Published On - 10:20 pm, Mon, 11 January 21