ಅಂಬೇಡ್ಕರ್ ಪ್ರಶಸ್ತಿ ಸ್ವೀಕರಿಸಲು ಜು. 30 ರಂದು ಸಿದ್ದರಾಮಯ್ಯ ಚೆನ್ನೈಗೆ, ಕನ್ನಡದಲ್ಲೇ ಭಾಷಣ

| Updated By: ಸಾಧು ಶ್ರೀನಾಥ್​

Updated on: Jul 28, 2022 | 4:33 PM

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಿದ್ದರಾಮಯ್ಯ ಅವರು ಕನ್ನಡದಲ್ಲಿಯೇ ಭಾಷಣ ಮಾಡಲಿದ್ದಾರೆ. ಸಿದ್ದರಾಮಯ್ಯ ಭಾಷಣವನ್ನು ತಮಿಳು ಭಾಷೆಗೆ ತರ್ಜುಮೆ ಮಾಡುವ ವ್ಯವಸ್ಥೆಯೂ ಆಗಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸಿದ್ದರಾಮಯ್ಯ ಫುಲ್ ಹೈಲೆಟ್ ಆಗಿರುವುದು ಗಮನಾರ್ಹ.

ಅಂಬೇಡ್ಕರ್ ಪ್ರಶಸ್ತಿ ಸ್ವೀಕರಿಸಲು ಜು. 30 ರಂದು ಸಿದ್ದರಾಮಯ್ಯ ಚೆನ್ನೈಗೆ, ಕನ್ನಡದಲ್ಲೇ ಭಾಷಣ
ಅಂಬೇಡ್ಕರ್ ಪ್ರಶಸ್ತಿ ಸ್ವೀಕರಿಸಲು ಜು. 30 ರಂದು ಸಿದ್ದರಾಮಯ್ಯ ಚೆನ್ನೈಗೆ, ಕನ್ನಡದಲ್ಲೇ ಭಾಷಣ
Follow us on

ಬೆಂಗಳೂರು: ತಮಿಳುನಾಡಿನ ವಿಸಿಕೆ ಪಕ್ಷ ಕೊಡಮಾಡುವ ಡಾ. ಬಿ.‌ಆರ್. ಅಂಬೇಡ್ಕರ್ ಪ್ರಶಸ್ತಿಯನ್ನು (Dr B R Ambedkar) ಸ್ವೀಕರಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಜುಲೈ 30 ರಂದು ಚೆನ್ನೈಗೆ (Chennai) ತೆರಳಲಿದ್ದಾರೆ. ತಮಿಳುನಾಡಿನ ವಿಡುದಲೈ ಚಿರುದೈಗಳ್ (ವಿಸಿಕೆ) ಪಕ್ಷ ನೀಡುವ ಪ್ರಶಸ್ತಿ ಇದಾಗಿದೆ. ಜುಲೈ 30ರಂದು ಸಂಜೆ ನಾಲ್ಕು ಗಂಟೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಿದ್ದರಾಮಯ್ಯ ಅವರು ಕನ್ನಡದಲ್ಲಿಯೇ ಭಾಷಣ ಮಾಡಲಿದ್ದಾರೆ. ಸಿದ್ದರಾಮಯ್ಯ ಭಾಷಣವನ್ನು ತಮಿಳು ಭಾಷೆಗೆ ತರ್ಜುಮೆ ಮಾಡುವ ವ್ಯವಸ್ಥೆಯೂ ಆಗಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸಿದ್ದರಾಮಯ್ಯ ಫುಲ್ ಹೈಲೆಟ್ ಆಗಿರುವುದು ಗಮನಾರ್ಹ. ಆಹ್ವಾನ ಪತ್ರಿಕೆಯ ಒಂದು ಪುಟದಲ್ಲಿ ಡಾ. ಅಂಬೇಡ್ಕರ್, ಪೆರಿಯಾರ್ ರಾಮಸ್ವಾಮಿ, ಕಾರ್ಲ್ ಮಾರ್ಕ್ಸ್ ಸೇರಿದಂತೆ ಸಾಧಕರ ಪೋಟೋ ಇದೆ. ಕಾರ್ಯಕ್ರಮದ ಮುಗಿದ ಮೇಲೆ ಸಿದ್ದರಾಮಯ್ಯ ತಮಿಳುನಾಡಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ತಮಿಳುನಾಡು ಸಿಎಂ ಸ್ಟಾಲಿನ್ ಅವರನ್ನೂ ಸಹ ಭೇಟಿ ಮಾಡುವ ಸಾಧ್ಯತೆಯಿದೆ. ಸಿದ್ದರಾಮಯ್ಯ ಜುಲೈ 31 ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

Published On - 4:30 pm, Thu, 28 July 22