ಕೊವಿಡ್ ಕೇರ್ ಸೆಂಟರ್​ನಲ್ಲಿ ಸುಗಮ ಸಂಗೀತ ಕಾರ್ಯಕ್ರಮ.. ಹಾಡು ಕೇಳಿ ನೋವು ಮರೆತ ಸೋಂಕಿತರು

|

Updated on: May 19, 2021 | 9:00 AM

ಕಾರ್ಯಕ್ರಮದಲ್ಲಿ ಒಳಿತು ಮಾಡು ಮನುಷ ನೀ ಇರೋದು ಮೂರು ದಿವಸ ಹಾಡು ಹಾಡೊ ಮೂಲಕ ಕೆ.ಆರ್ ಪೇಟೆ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡರು ಕಾರ್ಯಕ್ರಮವನ್ನು ಉದ್ಘಾಟಿಸಿ ಸೋಂಕಿತರನ್ನು ರಂಜಿಸಿದ್ರು.

ಕೊವಿಡ್ ಕೇರ್ ಸೆಂಟರ್​ನಲ್ಲಿ ಸುಗಮ ಸಂಗೀತ ಕಾರ್ಯಕ್ರಮ.. ಹಾಡು ಕೇಳಿ ನೋವು ಮರೆತ ಸೋಂಕಿತರು
ಕೊವಿಡ್ ಕೇರ್ ಸೆಂಟರ್ನಲ್ಲಿ ಸುಗಮ ಸಂಗೀತ ಕಾರ್ಯಕ್ರಮ
Follow us on

ಮಂಡ್ಯ: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ನ ಅಟ್ಟಹಾಸ ದಿನೇ ದಿನೇ ಮಿತಿ ಮೀರುತ್ತಿದೆ. ಈ ನಡುವೆ ಕೊವಿಡ್ ಕೇರ್ ಸೆಂಟರ್ಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಸೋಂಕಿತರು ಪರದಾಡುತ್ತಿದ್ದಂತಹ ಸುದ್ದಿಗಳನ್ನು ನಾವು ನೋಡಿದ್ದೇವೆ. ಆದರೆ ಮಂಡ್ಯದ ಕೆ.ಆರ್. ಪೇಟೆಯ ಹೊಸ ಹೊಳಲು ಬಿಸಿಎಂ ವಿದ್ಯಾರ್ಥಿ ನಿಲಯದ ಕೊವಿಡ್ ಕೇರ್ ಸೆಂಟರ್ನಲ್ಲಿ ಸುಗಮ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಕೆ.ಆರ್ ಪೇಟೆ ತಾಲೂಕು ಆಡಳಿತದ ವತಿಯಿಂದ ಸೋಂಕಿತರ ಮನರಂಜನೆಗಾಗಿ ಸಂಗೀತ ಕಾರ್ಯಕ್ರಮ ನೆರವೇರಿದೆ. ತಾಲೂಕು ಆಡಳಿತದ ಮಂಡಳಿ ವಸತಿ ಶಾಲೆಯನ್ನ ಕೊವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದೆ. ಹಲವು ಸೋಂಕಿತರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾದಿಂದ ನೊಂದ ಸೋಂಕಿತರಿಗೆ ಮನರಂಜನೆಯಾಗಲೆಂದು ಸುಗಮ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಒಳಿತು ಮಾಡು ಮನುಷ ನೀ ಇರೋದು ಮೂರು ದಿವಸ ಹಾಡು ಹಾಡೊ ಮೂಲಕ ಕೆ.ಆರ್ ಪೇಟೆ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡರು ಕಾರ್ಯಕ್ರಮವನ್ನು ಉದ್ಘಾಟಿಸಿ ಸೋಂಕಿತರನ್ನು ರಂಜಿಸಿದ್ರು.

ಸಂಗೀತಕ್ಕೆ ನೋವನ್ನು ಮರೆಸಿ ಸಂತೋಷ ನೀಡುವ ಶಕ್ತಿಯಿದೆ. ಆದ್ದರಿಂದ ಕೊವಿಡ್ ಸೋಂಕಿತರಲ್ಲಿ ಆತ್ಮವಿಶ್ವಾಸ ತುಂಬಲು ಸಚಿವರ ನಿರ್ದೇಶನದಂತೆ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ತಹಶೀಲ್ದಾರ್ ಶಿವಮೂರ್ತಿ ತಿಳಿಸಿದ್ರು.

ಹಾಡು ಕೇಳಿ ನೋವು ಮರೆತ ಸೋಂಕಿತರು

ಇದನ್ನೂ ಓದಿ: ಲಾಕ್​ಡೌನ್​ ಎಫೆಕ್ಟ್: ಐನೂರು ಎಕರೆ ಕಲ್ಲಂಗಡಿ ಬೆಳೆದ ಬಾಗಲಕೋಟೆ ರೈತರಿಗೆ ಸಂಕಷ್ಟ