‘ಸಿಡಿ’ ಆರೋಪಿ ನರೇಶ್​ ಬಿಡುಗಡೆ ಮಾಡಿದ ವಿಡಿಯೋ ಮೂಲ ಪತ್ತೆ ಹಚ್ಚಿದ ಎಸ್​ಐಟಿ!

ನರೇಶ್​ ಬಿಡುಗಡೆ ಮಾಡಿದ ಆ ವಿಡಿಯೋ ದೆಹಲಿಯಿಂದ ಅಪ್ಲೋಡ್ ಆಗಿದೆ ಎಂದು ಎಸ್​ಐಟಿ ಅಧಿಕಾರಿಗಳು ಕಂಡುಹಿಡಿದಿದ್ದಾರೆ. ಅಲ್ಲದೇ, ‘ಸಿಡಿ ಯುವತಿ’ ಮೊಬೈಲ್​ ನಿನ್ನೆ ಮಧ್ಯಾಹ್ನದ ವೇಳೆಗೆ ದೆಹಲಿಯಲ್ಲಿ ಆನ್​ ಆಗಿತ್ತು ಎಂಬ ವಿಚಾರವೂ ಗೊತ್ತಾಗಿದೆ.

‘ಸಿಡಿ’ ಆರೋಪಿ ನರೇಶ್​ ಬಿಡುಗಡೆ ಮಾಡಿದ ವಿಡಿಯೋ ಮೂಲ ಪತ್ತೆ ಹಚ್ಚಿದ ಎಸ್​ಐಟಿ!
ಪ್ರಮುಖ ಆರೋಪಿ ನರೇಶ್​
Follow us
Skanda
| Updated By: ಸಾಧು ಶ್ರೀನಾಥ್​

Updated on: Mar 19, 2021 | 11:54 AM

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದ ಕಿಂಗ್​ ಪಿನ್​ ಎಂದು ಗುರುತಿಸಲ್ಪಟ್ಟಿರುವ ಮಾಜಿ ಪತ್ರಕರ್ತ ನರೇಶ್ ಗೌಡ ನಿನ್ನೆ ಬಿಡುಗಡೆ ಮಾಡಿದ್ದ ವಿಡಿಯೋ ಮೂಲವನ್ನು ಎಸ್​ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ನಿನ್ನೆ (ಮಾರ್ಚ್​ 18) ಮಧ್ಯಾಹ್ನದ ಹೊತ್ತಿಗೆ 8 ನಿಮಿಷದ ವಿಡಿಯೋ ಬಿಡುಗಡೆ ಮಾಡಿದ್ದ ನರೇಶ್​, ಸಿಡಿ ಬಿಡುಗಡೆ ವಿಚಾರದಲ್ಲಿ ತನ್ನ ಪಾತ್ರ ಇಲ್ಲ. ಸುಖಾಸುಮ್ಮನೆ ಸಿಕ್ಕಿಹಾಕಿಸುವ ಪ್ರಯತ್ನವಾಗುತ್ತಿದೆ ಎಂದು ದೂರುವುದರ ಜೊತೆಗೆ, ಮಾಡಬಾರದ ತಪ್ಪು ಮಾಡಿದ್ದು ರಮೇಶ್ ಜಾರಕಿಹೊಳಿ ಎಂದು ಆರೋಪಿಸಿದ್ದರು.

ನರೇಶ್​ ಬಿಡುಗಡೆ ಮಾಡಿದ ಆ ವಿಡಿಯೋ ದೆಹಲಿಯಿಂದ ಅಪ್ಲೋಡ್ ಆಗಿದೆ ಎಂದು ಎಸ್​ಐಟಿ ಅಧಿಕಾರಿಗಳು ಇಂದು ಕಂಡುಹಿಡಿದಿದ್ದಾರೆ. ಅಲ್ಲದೇ, ‘ಸಿಡಿ ಯುವತಿ’ ಮೊಬೈಲ್​ ನಿನ್ನೆ ಮಧ್ಯಾಹ್ನದ ವೇಳೆಗೆ ದೆಹಲಿಯಲ್ಲಿ ಆನ್​ ಆಗಿತ್ತು ಎಂಬ ವಿಚಾರವೂ ಗೊತ್ತಾಗಿದೆ. ಆದರೆ, ವಿಡಿಯೋ ಅಪ್ಲೋಡ್​ ಆಗಿರುವ ಸ್ಥಳದಿಂದ ತಂಡ ನಾಪತ್ತೆಯಾಗಿದ್ದು, ಅಧಿಕಾರಿಗಳು ದೆಹಲಿಯ ಸುತ್ತಮುತ್ತ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮಾಡಬಾರದ ಕೆಲಸ ಮಾಡಿದ್ದು ರಮೇಶ್ ಜಾರಕಿಹೊಳಿ, ನನ್ನದು ಎಳ್ಳಷ್ಟೂ ಪಾತ್ರವಿಲ್ಲ; ತನಿಖಾಧಿಕಾರಿಗಳ ಮುಂದೆಯೂ ಇದನ್ನೇ ಹೇಳುವೆ- ವಿಡಿಯೋದಲ್ಲಿ ನರೇಶ್ 

ಸಿಡಿ ಪ್ರಕರಣದ ರೂವಾರಿ ಎಂದು ಶಂಕಿಸಲಾದ ನರೇಶ್​ ಗೌಡ ಹೇಳಿಕೆಯ ವಿಡಿಯೋ ಬಿಡುಗಡೆ; ಹೊಸ ತಿರುವು ಪಡೆದ ಕೇಸ್