AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೋನೂ ಇಲ್ಲ, ಮೆಸೇಜ್​ ಇಲ್ಲ! ಎಲ್ಲಿರುವೆ? ಸಿಡಿ ಯುವತಿಯ ಬೆನ್ನು ಹತ್ತಿದ ಎಸ್​ಐಟಿ ಹೈರಾಣ.. ನೋಟಿಸ್ ಮೇಲೆ ನೋಟಿಸ್!

ಯುವತಿ ಸೇರಿದಂತೆ ಪ್ರಕರಣದ ಸಂಬಂಧ ನಾಪತ್ತೆ ಆಗಿರುವ ಇನ್ನೂ ಮೂವರಿಗೂ ನೋಟಿಸ್ ನೀಡಲಾಗಿದೆ. ಸಿಡಿಯಲ್ಲಿದ್ದ ಯುವತಿ ಅಲ್ಲದೆ ಕಿಂಗ್​ ಪಿನ್​ ಎನ್ನಲಾದ ಮಾಜಿ ಪತ್ರಕರ್ತ ನರೇಶ್ ಮತ್ತು ಶ್ರವಣ್​ಗೆ ನೋಟಿಸ್ ಜಾರಿ ಮಾಡಲಾಗಿದೆ. ಅವರಿಂದಲೂ ಉತ್ತರ ಇಲ್ಲವಾಗಿದೆ.

ಫೋನೂ ಇಲ್ಲ, ಮೆಸೇಜ್​ ಇಲ್ಲ! ಎಲ್ಲಿರುವೆ? ಸಿಡಿ ಯುವತಿಯ ಬೆನ್ನು ಹತ್ತಿದ ಎಸ್​ಐಟಿ ಹೈರಾಣ.. ನೋಟಿಸ್ ಮೇಲೆ ನೋಟಿಸ್!
ಸಿಡಿಯಲ್ಲಿರುವ ಸಂತ್ರಸ್ತ ಯುವತಿ
ಸಾಧು ಶ್ರೀನಾಥ್​
| Edited By: |

Updated on: Mar 19, 2021 | 11:32 AM

Share

ಬೆಂಗಳೂರು: ಫೋನೂ ಇಲ್ಲ; ಮೆಸೇಜ್​ ಇಲ್ಲ! ಎಲ್ಲಿರುವೆ? ಎಂಬಂತಾಗಿದೆ ರಾಜ್ಯ ಪೊಲೀಸರ ಅಸಹಾಯಕತೆ. ಏಕೆಂದರೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಮಾಜಿ ಸಚಿವರೊಬ್ಬರ ಲೈಂಗಿಕ ಸಿಡಿ ಪ್ರಕರಣದಲ್ಲಿ ಪ್ರಧಾನ ಪಾತ್ರಧಾರಿ ಎನ್ನಲಾಗಿರುವ ಯುವತಿಯ ಬೆನ್ನು ಹತ್ತಿದ ಎಸ್​ಐಟಿ ಹೈರಾಣಗೊಂಡಿದೆ.. ನೋಟಿಸ್ ಮೇಲೆ ನೋಟಿಸ್ ನೀಡುತ್ತಲೇ ಆ ಕಡೆಯಿಂದ ಮಾತ್ರ ಫೋನೂ ಇಲ್ಲ; ಮೆಸೇಜ್​ ಇಲ್ಲ- ಈ ಮೈಲ್​ ಸಹ ಇಲ್ಲ! ಹಾಗಾಗಿ ಎಸ್​ಐಟಿ ಪೊಲೀಸರು ಎಲ್ಲಿರುವೆ? ಎಂದು ಕುಂತ್ರೂ ನಿಂತ್ರೂ ಆ ಯುವತಿಯನ್ನೇ ಧ್ಯಾನಿಸುತ್ತಿದ್ದಾರೆ.

ಹೌದು ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಿಡಿಯಲ್ಲಿದ್ದ ಯುವತಿಗೆ ಎಸ್​ಐಟಿ ಪೊಲೀಸರು ಮತ್ತೊಂದು ನೋಟಿಸ್​ ಜಾರಿ ಮಾಡಿದ್ದಾರೆ. ಬಹುಶಃ ಈಗಾಗಲೇ ಮೂರ್ನಾಲ್ಕು ಬಾರಿ ನೋಟಿಸ್ ಜಾರಿ ಮಾಡಿರಬಹುದು. ಶೀಘ್ರವಾಗಿ ಪೊಲೀಸರ ಮುಂದೆ ಹಾಜರಾಗಲು ಯುವತಿಯ ವಾಟ್ಸಾಪ್​, ಇ-ಮೇಲ್, ಮನೆಗೆ ನೋಟಿಸ್ ಅಂಟಿಸಿ ಸರಕಾರಿ ಸೂಚನೆ ನೀಡಲಾಗಿದೆ. ಆದರೆ ಆ ಕಡೆಯಿಂದ ಬಿಲ್ಕುಲ್ ಪ್ರತಿಕ್ರಿಯೆ ಇಲ್ಲವಾಗಿದೆ. ​ ಯುವತಿ ಸೇರಿದಂತೆ ಪ್ರಕರಣದ ಸಂಬಂಧ ನಾಪತ್ತೆ ಆಗಿರುವ ಇನ್ನೂ ಮೂವರಿಗೂ ನೋಟಿಸ್ ನೀಡಲಾಗಿದೆ. ಸಿಡಿಯಲ್ಲಿದ್ದ ಯುವತಿ ಅಲ್ಲದೆ ಕಿಂಗ್​ ಪಿನ್​ ಎನ್ನಲಾದ ಮಾಜಿ ಪತ್ರಕರ್ತ ನರೇಶ್ ಮತ್ತು ಶ್ರವಣ್​ಗೆ ನೋಟಿಸ್ ಜಾರಿ ಮಾಡಲಾಗಿದೆ. ಅವರಿಂದಲೂ ಉತ್ತರ ಇಲ್ಲವಾಗಿದೆ.

ಇದನ್ನೂ ಓದಿ: ಮಾಡಬಾರದ ಕೆಲಸ ಮಾಡಿದ್ದು ರಮೇಶ್ ಜಾರಕಿಹೊಳಿ, ನನ್ನದು ಎಳ್ಳಷ್ಟೂ ಪಾತ್ರವಿಲ್ಲ; ತನಿಖಾಧಿಕಾರಿಗಳ ಮುಂದೆಯೂ ಇದನ್ನೇ ಹೇಳುವೆ- ವಿಡಿಯೋದಲ್ಲಿ ನರೇಶ್ 

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಮೊದಲ ದಿನದ 5 ಕೋಟಿ ಹೇಳಿಕೆ ನೆನಪಿಸಿಕೊಂಡ ಎಚ್​.ಡಿ.ಕುಮಾರಸ್ವಾಮಿ

ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು