ರಮೇಶ್​ ಜಾರಕಿಹೊಳಿ ‘ಸಿಡಿ’ ಮಾಸ್ಟರ್​ ಮೈಂಡ್​ ಮನೆ ಮೇಲೆ ಎಸ್​ಐಟಿ ಅಧಿಕಾರಿಗಳ ದಾಳಿ

ಬೆಂಗಳೂರಿನ ಮಂಜುನಾಥ ನಗರದಲ್ಲಿರುವ ನರೇಶ್ ನಿವಾಸ ಹಾಗೂ ಲಗ್ಗೆರೆಯಲ್ಲಿರುವ ನರೇಶ್ ಆಪ್ತ ಅರುಣ್ ನಿವಾಸದ ಮೇಲೆ ಸರ್ಚ್ ವಾರಂಟ್‌ ಪಡೆದು ದಾಳಿ ನಡೆಸಿರುವ ಎಸ್​ಐಟಿ ಅಧಿಕಾರಿಗಳು ತನಿಖೆಗೆ ಬೇಕಾದ ಮಾಹಿತಿ ಕಲೆಹಾಕುತ್ತಿದ್ದಾರೆ.

ರಮೇಶ್​ ಜಾರಕಿಹೊಳಿ ‘ಸಿಡಿ’ ಮಾಸ್ಟರ್​ ಮೈಂಡ್​ ಮನೆ ಮೇಲೆ ಎಸ್​ಐಟಿ ಅಧಿಕಾರಿಗಳ ದಾಳಿ
ಸಾಂದರ್ಭಿಕ ಚಿತ್ರ
Follow us
Skanda
|

Updated on:Mar 17, 2021 | 6:21 PM

ಬೆಂಗಳೂರು: ರಮೇಶ್​ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದ ಪ್ರಮುಖ ಮಾಸ್ಟರ್​ ಮೈಂಡ್​ ಎಂಬ ಆರೋಪ ಹೊತ್ತಿರುವ ನರೇಶ್​ ಮನೆ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಿಡಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನರೇಶ್ ಹಾಗೂ ಆಪ್ತ ಅರಣ್​ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ಬೆಂಗಳೂರಿನ ಮಂಜುನಾಥ ನಗರದಲ್ಲಿರುವ ನರೇಶ್ ನಿವಾಸ ಹಾಗೂ ಲಗ್ಗೆರೆಯಲ್ಲಿರುವ ನರೇಶ್ ಆಪ್ತ ಅರುಣ್ ನಿವಾಸದ ಮೇಲೆ ಸರ್ಚ್ ವಾರಂಟ್‌ ಪಡೆದು ದಾಳಿ ನಡೆಸಿರುವ ಎಸ್​ಐಟಿ ಅಧಿಕಾರಿಗಳು ತನಿಖೆಗೆ ಬೇಕಾದ ಮಾಹಿತಿ ಕಲೆಹಾಕಿದ್ದು, ತನಿಖೆ ಯಾವ ಹಾದಿಯಲ್ಲಿ ಸಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಇನ್ನೊಂದೆಡೆ ನರೇಶ್​ ಕುಟುಂಬಸ್ಥರ ಮೇಲೆ ಕಣ್ಣಿಟ್ಟಿರುವ ಎಸ್​ಐಟಿ ಶಿರಾ, ಭುವನಹಳ್ಳಿ ಬಳಿ ಮಫ್ತಿಯಲ್ಲಿ ಶೋಧಕಾರ್ಯ ನಡೆಸಿದೆ. ವಿಶೇಷ ತನಿಖಾ ತಂಡದ 6 ಜನರಿಂದ ಹುಡುಕಾಟ ಮುಂದುವರೆದಿದ್ದು, 2 ದಿನದಿಂದ ಶಿರಾ ಸಮೀಪ ಬೀಡುಬಿಟ್ಟಿರುವ ಮಾಹಿತಿ ಲಭ್ಯವಾಗಿದೆ.

ಮಾಜಿ ಪತ್ರಕರ್ತ ನರೇಶ್ ಗೌಡ ಬಗ್ಗೆ ಹಾಗೂ ಸ್ನೇಹಿತರ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಅಧಿಕಾರಿಗಳು, ನರೇಶ್ ಗೌಡನ ಚಲನವಲನ ಹಾಗೂ ಆತನ ಕುಟುಂಬಸ್ಥರ ಮೇಲೆ ನಿಗಾ ವಹಿಸಿದ್ದಾರೆ. ಸದ್ಯ ತನಿಖೆ ಬಗ್ಗೆ ವಿವಿಧ ಆಯಾಮದಲ್ಲಿ ಮಾಹಿತಿ ಕಲೆ ಹಾಕುತ್ತಿರುವ ಎಸ್​ಐಟಿ ಅಧಿಕಾರಿಗಳು ಸಿಡಿ ಹಿಂದಿನ ವಿವರಗಳನ್ನು ಕಲೆ ಹಾಕಲು ಪ್ರಯತ್ನಿಸುತ್ತಿದ್ದಾರೆ.ಇನ್ನು ಆಗಾಗ ಮನೆಗೆ ಬಂದು ಹೋಗುತ್ತಿದ್ದ ಆರೋಪಿ ನರೇಶ್​​, ಪ್ರಕರಣ ಬಯಲಾಗುವ ಮುನ್ನ ಮನೆಗೆ ಬರುವುದು ನಿಲ್ಲಿಸಿದ್ದ ಎನ್ನುವುದು ತಿಳಿದುಬಂದಿದೆ. ಮಂಜುನಾಥನಗರದ ಮನೆ ಮುಂದೆ ನರೇಶ್ ಬೈಕ್ ನಿಲ್ಲಿಸಿ ಹೋಗಿದ್ದು, ಆತನ ಬೆಂಗಳೂರು ವಿಳಾಸ ಸಿಕ್ಕಿದ್ದ ಕಾರಣ ಎಸ್ಐಟಿ ಅಧಿಕಾರಿಗಳು, ಕೇವಲ ಮಾಲೀಕರನ್ನ ವಿಚಾರಿಸಿ ವಾಪಸಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‘ಸಿಡಿ ಲೇಡಿ’ಗೆ ಎಸ್‌ಐಟಿಯಿಂದ ಮತ್ತೆ ನೋಟಿಸ್ ಜಾರಿ 

ಇನ್ನೂ ಹಲವರ ಸಿಡಿಗಳಿವೆ, ಎಸ್​ಐಟಿ ಬದಲು ಸಿಬಿಐ ತನಿಖೆ ಒಳ್ಳೇದು: ಬಸನಗೌಡ ಪಾಟೀಲ್ ಯತ್ನಾಳ್

Published On - 5:11 pm, Wed, 17 March 21