ಮುಡಾ ಹಗರಣ: ಮತ್ತೊಂದು ಮಹತ್ವದ ದಾಖಲೆ ಬಿಡುಗಡೆ ಮಾಡಿದ ಸ್ನೇಹಮಯಿ ಕೃಷ್ಣ

ಸ್ನೇಹಮಯಿ ಕೃಷ್ಣ ಅವರು ಮೈಸೂರು ಮುಡಾ ಹಗರಣದ ತನಿಖಾ ಆಯೋಗದ ಅಧ್ಯಕ್ಷರಾಗಿರುವ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರ ನೇಮಕವನ್ನು ಪ್ರಶ್ನಿಸಿದ್ದಾರೆ. ದೇಸಾಯಿ ಅವರು ಹಿಂದೆ ಸಿಎಟಿ ಸದಸ್ಯತ್ವವನ್ನು ನಿರಾಕರಿಸಿದ್ದು, ಅದರ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರು ದಾಖಲೆಗಳೊಂದಿಗೆ ಬಹಿರಂಗಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ದೇಸಾಯಿ ಅವರನ್ನು ಆಯೋಗದ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಬೇಕೆಂದು ಅವರು ಆಗ್ರಹಿಸಿದ್ದಾರೆ.

ಮುಡಾ ಹಗರಣ: ಮತ್ತೊಂದು ಮಹತ್ವದ ದಾಖಲೆ ಬಿಡುಗಡೆ ಮಾಡಿದ ಸ್ನೇಹಮಯಿ ಕೃಷ್ಣ
ಸ್ನೇಹಮಯಿ ಕೃಷ್ಣ
Follow us
ರಾಮ್​, ಮೈಸೂರು
| Updated By: Ganapathi Sharma

Updated on: Dec 19, 2024 | 10:11 AM

ಮೈಸೂರು, ಡಿಸೆಂಬರ್ 19: ಮುಡಾ ಹಗರಣ ಹಗರಣ ಸಂಬಂಧ ಪಟ್ಟು ಬಿಡದೆ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತರ ಸ್ನೇಹಮಯಿ ಕೃಷ್ಣ ಇದೀಗ ಮತ್ತೊಂದು ಮಹತ್ವದ ದಾಖಲೆ ಬಿಡುಗಡೆ ಮಾಡಿದ್ದಾರೆ. ಜತೆಗೆ, ಮುಡಾ ಅಕ್ರಮ ತನಿಖೆ ಮಾಡಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ರಚಿಸಿರುವ ಆಯೋಗದ ಅಧ್ಯಕ್ಷರಾಗಿರುವ ನಿವೃತ್ತ ನ್ಯಾಯಮೂರ್ತಿ ಪಿಎನ್ ದೇಸಾಯಿ ಅದಕ್ಕೆ ಅರ್ಹರಲ್ಲ ಎಂದು ಪ್ರತಿಪಾದಿಸಿದ್ದಾರೆ. ಅದಕ್ಕೆ ಕಾರಣವೇನು ಎಂಬುದನ್ನೂ ಅವರು ಬಹಿರಂಗಪಡಿಸಿದ್ದಾರೆ.

ನಿವೃತ್ತ ನ್ಯಾಯಮೂರ್ತಿ ಪಿಎನ್ ದೇಸಾಯಿ ಅವರನ್ನು ಸಿಎಟಿ (Central Administrative Tribunal) ಸದಸ್ಯರನ್ನಾಗಿ‌ ನೇಮಕ ಮಾಡಿ ಈ ಹಿಂದೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ವೈಯಕ್ತಿಕ ಕಾರಣದಿಂದ‌ ಪಿಎನ್ ದೇಸಾಯಿ ಸದಸ್ಯತ್ವ ಒಪ್ಪಿರಲಿಲ್ಲ. ಆ ಸಂದರ್ಭದಲ್ಲಿ ಅವರ ಅರ್ಜಿಯಲ್ಲಿ ಹಲವು ನಿಬಂಧನೆಗಳಿಗೆ ಪಿಎನ್ ದೇಸಾಯಿ ಒಪ್ಪಿದ್ದರು.

ಪಿಎನ್ ದೇಸಾಯಿ ಒಪ್ಪಿದ್ದ ನಿಬಂಧನೆಗಳೇನು?

ನೇಮಕಾತಿ ಆದೇಶವನ್ನು ನಿರಾಕರಿಸದೇ ಇರುವುದು, ಆದೇಶ ಆದ 30 ದಿನಗಳ ಒಳಗಾಗಿ ಜವಾಬ್ದಾರಿ ಸ್ವೀಕರಿಸುವ ನಿಬಂಧನೆಗಳನ್ನು ಪಿಎನ್ ದೇಸಾಯಿ ಒಪ್ಪಿದ್ದರು. ಒಂದ ವೇಳೆ ನಿಬಂಧನೆಗಳನ್ನು ಉಲ್ಲಂಘಿಸಿದರೆ ಮೂರು ವರ್ಷಗಳ ಕಾಲ ಯಾವುದೇ ಆಯೋಗಕ್ಕೆ ನೇಮಕ ಮಾಡದಂತೆ ಡಿಬಾರ್ ಆಗಬಹುದು ಎಂಬ ನಿಬಂಧನೆಗೂ ಒಪ್ಪಿದ್ದರು. ಹೀಗಾಗಿ, ನಂತರದಲ್ಲಿ ಸಿಎಟಿ ಸದಸ್ಯತ್ವ ಒಪ್ಪದ ಕಾರಣ ಅವರನ್ನು ಮೂರು ವರ್ಷ ಶಾಸನಬದ್ಧ ಸಮಿತಿ, ಸ್ವಾಯತ್ತ ಸಮಿತಿ, ನಿಯಂತ್ರಕ ಸಮಿತಿಗೆ ನೇಮಕ ಮಾಡದಂತೆ ಆದೇಶ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಈ ವಿಚಾರ ಸಂಬಂಧ ಸ್ನೇಹಮಯಿ ಕೃಷ್ಣ ದಾಖಲೆ ಬಿಡುಗಡೆ ಮಾಡಿದ್ದಾರೆ.

ಮುಖ್ಯ ಕಾರ್ಯದರ್ಶಿಗೆ ಪತ್ರ

ಪಿಎನ್ ದೇಸಾಯಿ ವಿಚಾರವಾಗಿ ದಾಖಲೆ ಬಿಡುಗಡೆ ಮಾಡಿದ ಸ್ನೇಹಮಯಿ‌ಕೃಷ್ಣ, ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಶ್ರೀ ಪದ್ಮರಾಜ್ ನೇಮಚಂದ್ರ ದೇಸಾಯಿ (ಪಿ.ಎನ್.ದೇಸಾಯಿ) ಅವರನ್ನು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನೆ ಮಾಡಿರುವ ಏಕಸದಸ್ಯ ಆಯೋಗದ ಅಧ್ಯಕ್ಷರನ್ನಾಗಿ ಮಾಡಿರುವ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕಂದಾಯ ಇಲಾಖೆಯ ಕೆಳ ಹಂತದಲ್ಲಿ ಭ್ರಷ್ಟಾಚಾರ ಇದೆ: ಸದನದಲ್ಲೇ ಒಪ್ಪಿಕೊಂಡ ಸಚಿವ ಕೃಷ್ಣಬೈರೇಗೌಡ

ಪಿಎನ್ ದೇಸಾಯಿ ಅವರಿಗೆ ನೀಡಿರುವ ಮುಡಾ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು. ಅವರು ಆಯೋಗದ ಅಧ್ಯಕ್ಷರಾಗಲು ಅರ್ಹರಲ್ಲ ಎಂಬ ವಿಚಾರ ಗೊತಿದ್ದರೂ ಕೂಡ ಅವರು ಅಧ್ಯಕ್ಷರಾಗಿ ಮುಂದುವರೆದಿರುವ ಬಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಮತ್ತು ಭಾರತ ಸರ್ಕಾರಕ್ಕೆ ವರದಿಯನ್ನು ನೀಡಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲು ಸ್ನೇಹಮಯಿ‌ಕೃಷ್ಣ ಮನವಿ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗೌತಮಿನ ಸ್ವಮ್ಮಿಂಗ್​ಪೂಲ್​ಗೆ ತಳ್ಳಿದ ಮೋಕ್ಷಿತಾ; ಹೆಚ್ಚಿತು ದ್ವೇಷ
ಗೌತಮಿನ ಸ್ವಮ್ಮಿಂಗ್​ಪೂಲ್​ಗೆ ತಳ್ಳಿದ ಮೋಕ್ಷಿತಾ; ಹೆಚ್ಚಿತು ದ್ವೇಷ
ಮನೆಯಲ್ಲಿ ಕೆಲವು ವಸ್ತುಗಳನ್ನು ಭೂಮಿ ಮೇಲೆ ಇಡಬಾರದು: ಇದೆ ಅಧ್ಯಾತ್ಮ ಕಾರಣ!
ಮನೆಯಲ್ಲಿ ಕೆಲವು ವಸ್ತುಗಳನ್ನು ಭೂಮಿ ಮೇಲೆ ಇಡಬಾರದು: ಇದೆ ಅಧ್ಯಾತ್ಮ ಕಾರಣ!
ದಿನ ಭವಿಷ್ಯ; ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲ!
ದಿನ ಭವಿಷ್ಯ; ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲ!
ಜಾಮೀನು ಸಿಕ್ಕ 6 ದಿನದ ಬಳಿಕ ಶಿವಮೊಗ್ಗ ಜೈಲಿನಿಂದ ಆರೋಪಿ ಜಗದೀಶ್ ರಿಲೀಸ್​
ಜಾಮೀನು ಸಿಕ್ಕ 6 ದಿನದ ಬಳಿಕ ಶಿವಮೊಗ್ಗ ಜೈಲಿನಿಂದ ಆರೋಪಿ ಜಗದೀಶ್ ರಿಲೀಸ್​
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಚೈತ್ರಾ ಮೋಸದಾಟ; ಮನ ಒಲಿಸಲು ಹೊಸ ಉಪಾಯ ಕಂಡುಹಿಡಿದ ರಜತ್
ಚೈತ್ರಾ ಮೋಸದಾಟ; ಮನ ಒಲಿಸಲು ಹೊಸ ಉಪಾಯ ಕಂಡುಹಿಡಿದ ರಜತ್
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಹೊರಡುವ ಮುನ್ನ ಸುದೀಪ್, ಉಪೇಂದ್ರಗೆ ಶುಭ ಹಾರೈಸಿದ ಶಿವಣ್ಣ
ಹೊರಡುವ ಮುನ್ನ ಸುದೀಪ್, ಉಪೇಂದ್ರಗೆ ಶುಭ ಹಾರೈಸಿದ ಶಿವಣ್ಣ