ಮತದಾರರಿಗೆ ಹಣ ನೀಡಿ ಭ್ರಷ್ಟರನ್ನಾಗಿಸಿದ ಸೋಮಣ್ಣರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮಾಡೋದು ಬೇಡ: ತೋಟದಪ್ಪ ಬಸವರಾಜು
ಹೊರಗಿನಿಂದ ಬಂದವರನ್ನು ಯಾಕೆ ಅಧ್ಯಕ್ಷ ಮಾಡುತ್ತೀರಿ? ಮೂಲ ಬಿಜೆಪಿಗರಲ್ಲಿ ಯೋಗ್ಯ ಮತ್ತು ಸಮರ್ಥ ನಾಯಕರ ಕೊರತೆ ಇದೆಯೇ? ಸೋಮಣ್ಣ ವಿಧಾನ ಸಭಾ ಚುನಾವಣೆಯಲ್ಲಿ ವರಣಾ ಕ್ಷೇತ್ರದ ಮತದಾರರಿಗೆ ತಲಾ ಎರಡೆರಡು ಸಾವಿರ ರೂ. ನೀಡಿ ಅವರನ್ನು ಭ್ರಷ್ಟರನ್ನಾಗಿಸಿದ್ದಾರೆ ಮತ್ತು ಸೋತ ಆಕ್ರೋಶ ಹಾಗೂ ಹತಾಶೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ತೋಟದಪ್ಪ ಬಸವರಾಜು ಹೇಳುತ್ತಾರೆ.
ಮೈಸೂರು, ಜೂನ್ 30: ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಒಬ್ಬ ಒಮ್ಮತದ ನಾಯಕನ್ನು ಆಯ್ಕೆ ಮಾಡೋದು ಸಾಧ್ಯವಿಲ್ಲ ಅನಿಸುತ್ತಿದೆ. ಕಳೆದ ವರ್ಷ ಬಿವೈ ವಿಜಯೇಂದ್ರರನ್ನು ಮಾಡಿದಾಗ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಬಹಳಷ್ಟು ಜನರ ವಿರೋಧ ಇತ್ತು. ಯತ್ನಾಳ್ ಅದನ್ನು ಬಹಿರಂಗವಾಗಿ ಹೇಳಿಕೊಂಡರೆ ಉಳಿದವರು ಗುಪ್ತವಾಗಿ ಸಭೆಗಳನ್ನು ನಡೆಸಿ ತಮ್ಮ ಅಸಮಾಧಾನ ಮತ್ತು ಆಕ್ರೋಶವನ್ನು ಸಭೆಗೆ ಮಾತ್ರ ಮೀಸಲಿಟ್ಟರು. ಈಗ ವಿ ಸೋಮಣ್ಣ ಅವರನ್ನು ಅಧ್ಯಕ್ಷ ಮಾಡಬೇಕೆಂಬ ವದಂತಿ ಹರಿದಾಡುವುದು ಶುರುವಾದ ಕೂಡಲೇ ಬಿಜೆಪಿ ನಾಯಕರಲ್ಲಿ ವಿರೋಧ ಶುರುವಾಗಿದೆ. ಮೈಸೂರಿನ ಹಿರಿಯ ಬಿಜೆಪಿ ಮುಖಂಡ ತೋಟದಪ್ಪ ಬಸವರಾಜು (Thotadappa Basavaraju), ಸೋಮಣ್ಣರನ್ನು ಪಕ್ಷದ ರಾಜ್ಯಾಧ್ಯಕ್ಷ ಮಾಡಿದರೆ ಅತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡುತ್ತಿದ್ದಾರೆ.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಮತ್ತೆ ಭಿನ್ನರ ಚಟುವಟಿಕೆ ಬಿರುಸು: ಇತ್ತೀಚಿನ ಬೆಳವಣಿಗೆಗಳ ಸಮಗ್ರ ಮಾಹಿತಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ