ಉತ್ತರ ಕನ್ನಡ: ತಂದೆಯ ಶವಸಂಸ್ಕಾರಕ್ಕೆಂದು ಹೂವು ತರಲು ತೆರಳಿದ್ದ ಮಗ ಮತ್ತು ಇನ್ನೊಬ್ಬ ಸಂಬಂಧಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಎಸ್ಬಿಐ ಸರ್ಕಲ್‌ನಲ್ಲಿ ನಡೆದಿದೆ. ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದು ಬೈಕ್ ಸವಾರರಾದ ರವಿಚಂದ್ರನ್(34) ಹಾಗೂ ಸುನಿಲ್ ಇಂದೂರು(26) ಸಾವಿಗೀಡಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಶಿರಸಿಯ ಗಣೇಶ್ ನಗರದ ನಿವಾಸಿಯಾದ ರವಿಚಂದ್ರನ್ ತಂದೆ ಹನುಮಂತಪ್ಪ ನಿನ್ನೆ ನಸುಕಿನ ಜಾವ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಹೂವು ತರುವುದಕ್ಕೆ ಶಿರಸಿಗೆ ಬಂದಿದ್ದಾಗ ಘಟನೆ ನಡೆದಿದ್ದು, ಆ ಮೂಲಕ ಕುಟುಂಬದಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಸದ್ಯ ಈ ಸಂಬಂಧ ಶಿರಸಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರಿನಲ್ಲಿ ಬ್ರೇಕ್ ವಿಫಲವಾಗಿ ರಸ್ತೆಬದಿ ನುಗ್ಗಿದ ತೂಫಾನ್ ವಾಹನ:
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವನಗೂಲ್ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ವಾಹನದಲ್ಲಿದ್ದ 13 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಬಳ್ಳಾಪುರದಿಂದ ಧರ್ಮಸ್ಥಳಕ್ಕೆ ಹೋಗುವಾಗ ಬ್ರೇಕ್ ಫೇಲ್ ಆಗಿ ರಸ್ತೆ ಬದಿಗೆ ತೂಫಾನ್ ವಾಹನ ನುಗ್ಗಿದ್ದು, ಈ ಅವಗಢ ಸಂಭವಿಸಿದೆ. ಈ ಸಂಬಂಧ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರಿನಲ್ಲಿ ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು:
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೋಳೂರು ಗ್ರಾಮದಲ್ಲಿ ಅಲ್ಯುಮಿನಿಯಂ ಏಣಿಗೆ ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವಿಗೀಡಾಗಿದ್ದಾರೆ. ಮಹಾಲಿಂಗಂ(25) ಮೃತ ದುರ್ದೈವಿ. ಚಂದ್ರೇಗೌಡ ಎಂಬುವರ ಕಾಫಿ ತೋಟದಲ್ಲಿ ಏಣಿ ಮೇಲೆ ನಿಂತು ಕಾಳುಮೆಣಸು ಬಿಡಿಸುವಾಗ ಈ ಘಟನೆ ಸಂಭವಿಸಿದ್ದು, ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Road Accident | ಹಾವೇರಿ, ನೆಲಮಂಗಲದಲ್ಲಿ ಪ್ರತ್ಯೇಕ ಅಪಘಾತ.. ನಜ್ಜುಗುಜ್ಜಾದ ವಾಹನದಲ್ಲಿ ಸಿಲುಕಿ ವ್ಯಕ್ತಿ ಪರದಾಟ
ಇದನ್ನೂ ಓದಿ: ಪ್ರತ್ಯೇಕ ಘಟನೆಯಲ್ಲಿ ನಾಲ್ವರ ದುರ್ಮರಣ: ಚಿತ್ರದುರ್ಗ, ವಿಜಯಪುರ, ಹಾಸನದಲ್ಲಿ ಅಪಘಾತ