ವೈದ್ಯರ ನಿರ್ಲಕ್ಷ್ಯ ಆರೋಪ.. ಚೊಚ್ಚಲ ಹೆರಿಗೆಗೆ ಬಂದಿದ್ದ ತಾಯಿ ಮತ್ತು ಗರ್ಭದಲ್ಲೇ ಮಗು ಸಾವು

ಹೆರಿಗೆಗೆ ಬಂದಿದ್ದ ಗರ್ಭಿಣಿಗೆ ಸರಿಯಾಗಿ ಚಿಕಿತ್ಸೆ ಕೊಡದೆ ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ ಇದರಿಂದಲೇ ತಾಯಿ ಜೊತೆ ಗರ್ಭದಲ್ಲೇ ಮಗು ಇಬ್ಬರೂ ತೀರಿಕೊಂಡಿದ್ದಾರೆ ಎಂದು ಮೃತ ಗರ್ಭಿಣಿಯ ಕುಟುಂಬಸ್ಥರು ವೈದ್ಯರ ವಿರುದ್ಧ ಆರೋಪ ಮಾಡಿದ್ದು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ವೈದ್ಯರ ನಿರ್ಲಕ್ಷ್ಯ ಆರೋಪ.. ಚೊಚ್ಚಲ ಹೆರಿಗೆಗೆ ಬಂದಿದ್ದ ತಾಯಿ ಮತ್ತು ಗರ್ಭದಲ್ಲೇ ಮಗು ಸಾವು
ಹೆರಿಗೆ ವಿಭಾಗದ ಮುಂದೆ ಜಮಾಯಿಸಿರುವ ಕಾವ್ಯಾ ಕುಟುಂಬಸ್ಥರು
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Mar 15, 2021 | 3:10 PM

ದಾವಣಗೆರೆ: ಹೆರಿಗೆಗಾಗಿ ಬಂದಿದ್ದ ತಾಯಿಯ ಜೊತೆಗೆ ಗರ್ಭದಲ್ಲಿಯೇ ಮಗು ಸಹ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಕಾವ್ಯಾ(21) ಮತ್ತು ಆಕೆಯ ಜೊತೆಗೆ ಗರ್ಭದಲ್ಲೇ ಮಗು ಸಹ ತೀರಿಕೊಂಡಿದೆ. ಹೆರಿಗೆಗೆ ಬಂದಿದ್ದ ಗರ್ಭಿಣಿಗೆ ಸರಿಯಾಗಿ ಚಿಕಿತ್ಸೆ ಕೊಡದೆ ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಮೃತ ಗರ್ಭಿಣಿಯ ಕುಟುಂಬಸ್ಥರು ವೈದ್ಯರ ವಿರುದ್ಧ ಆರೋಪ ಮಾಡಿದ್ದು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನಿಲವಂಜಿ ಗ್ರಾಮದ ನಿವಾಸಿ ಕಾವ್ಯಾ ತನ್ನ ಪೋಷಕರಿಗೆ ಒಬ್ಬಳೇ ಮಗಳು. ತಂದೆ ಸಾವನ್ನಪ್ಪಿ ಎಷ್ಟೋ ವರ್ಷಗಳಾದವು. ಮುದ್ದಾದ ಮಗಳಿಗೆ ಸಂಭ್ರಮದಿಂದ ಮದ್ವೆ ಮಾಡಿದ್ದ ಅವಳ ತಾಯಿ ಮೊಮ್ಮಗುವನ್ನ ಎತ್ತಿ ಆಡಿಸುವ ಸಂಭ್ರಮದಲ್ಲಿದ್ದರು. ಕಾವ್ಯಾಳಿಗೆ ಮದ್ವೆಯಾಗಿ ಒಂದು ವರ್ಷವಾಗಿದ್ದು ಚೊಚ್ಚಲ ಹೆರಿಗೆಗಾಗಿ ಬೆಳಿಗ್ಗೆ 11 ಗಂಟೆಗೆ ಆಸ್ಪತ್ರೆಗೆ ಬಂದರು. ರಾತ್ರಿ 12 ಗಂಟೆಯಾದ್ರೂ ಕಾವ್ಯಳಿಗೆ ಮಗು ಆಗಿಲ್ಲ. ಬರೋಬ್ಬರಿ 13 ಗಂಟೆಗಳ ಕಾಲ ಹೆರಿಗೆ ನೋವಲ್ಲಿ ನರಳಿದ್ದಾರೆ. ಆಸ್ಪತ್ರೆಯ ವೈದ್ಯರಿಗೆ ಸಂಬಂಧಿಕರು ಹಿಡಿಶಾಪ ಹಾಕಿದ್ದಾರೆ.

21 ವರ್ಷ ವಯಸ್ಸಿನ ಕಾವ್ಯಾ ಮತ್ತು ಪ್ರಗತಿಪರ ರೈತ ಹಾಗೂ ಸಾಹಿತಿಯಾಗಿರುವ ವೀರಭದ್ರಪ್ಪ ಮದುವೆಯಾಗಿ 1 ವರ್ಷವಾಗಿದೆ. ಕಾವ್ಯಳ ತಂದೆ ನಿಧನವಾಗಿ ಎಷ್ಟೊ ವರ್ಷವಾಗಿದೆ. ತಾಯಿ ಬಸಮ್ಮನಿಗೆ ಕಾವ್ಯಾ ಒಬ್ಬಳೇ ಮಗಳು. ಕಷ್ಟ ಪಟ್ಟು ಮಗಳ ಮದ್ವೆ ಮಾಡಿದ್ದರು. ಮಗಳ ಚೊಚ್ಚಲು ಹೆರಿಗೆ ಇದ್ದ ಹಿನ್ನೆಲೆ ತಾಯಿ ಸಂಭ್ರಮದಲ್ಲಿದ್ದರು. ಆದ್ರೆ ವಿಧಿಯಾಟವೇ ಬೇರೆಯಾಗಿದೆ.

ಮಾರ್ಚ್ 14ರಂದು ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಗ್ರಾಮದಿಂದ ತಾಲೂಕಾ ಕೇಂದ್ರವಾದ ಹರಪನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿಂದ ಹೆರಿಗೆ ಸ್ಪಲ್ಪ ಕಷ್ಟವಿದೆ ಎಂದು ಅವರು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ನಿನ್ನೆ ಬೆಳಗ್ಗೆ ಹನ್ನೊಂದು ಗಂಟೆಗೆ ಆಸ್ಪತ್ರೆ ತಲುಪಿದ್ದಾರೆ. ವೈದ್ಯರು ಮೊದಲು ಸಿಸೇರಿಯನ್ ಮಾಡಿ ಮಗು ತೆಗೆಯುವುದಾಗಿ ಹೇಳಿದ್ದಾರೆ. ಇದಕ್ಕಾಗಿ ಪಾಲಕರ ಒಪ್ಪಿಗೆ ಕೂಡಾ ಪಡೆದುಕೊಂಡಿದ್ದಾರೆ. ನಂತರ ಇಲ್ಲ ನಾರ್ಮಲ್ ಹೆರಿಗೆ ಆಗುತ್ತದೆ ಎಂದು ತಿಳಿಸಿದ್ದಾರೆ. ಆದರೆ ರಾತ್ರಿ 12 ಗಂಟೆಗೆ ಸಂಬಂಧಿಕರನ್ನ ಕರೆದು ಕಾವ್ಯಾ ಸಾವನ್ನಪ್ಪಿರುವ ಬಗ್ಗೆ ಹೇಳಿದ್ದಾರೆ.

ಈ ನಡುವೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸಂಬಂಧಿಕರಿಗೆ ಹೇಳಿದಂತೆ ಮಗು ಹೊಟ್ಟೆಯಲ್ಲಿ ತೊಂದರೆ ಅನುಭವಿಸುತ್ತಿದೆ. ಮೇಲಾಗಿ ಹೃದಯದ ಬಡಿತ ಸಹ ಕಡಿಮೆ ಆಗುತ್ತಿದೆ ಎಂದಿದ್ದಾರೆ. ಅಲ್ಲದೆ ಕಾವ್ಯಾ ಕುಟುಂಬಸ್ಥರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಗರ್ಭಿಣಿಗೆ ಕೊಡಬಾರದ ಹಿಂಸೆ ಕೊಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು ತಾಯಿಯ ಗರ್ಭದಲ್ಲಿಯೇ ಮಗು ಮೃತಪಟ್ಟಿದೆ. ಜೊತೆಗೆ ಕಾವ್ಯಾ ಸಹ ಕೊನೆಯುಸಿರೆಳೆದಿದ್ದಾರೆ.

ಇಷ್ಟಾದ್ರು ವೈದ್ಯರು ಮಾತ್ರ ಇದರ ಬಗ್ಗೆ ಸ್ಪಷ್ಟ ಉತ್ತರ ನೀಡಲು ಮುಂದೆ ಬರಲಿಲ್ಲ. ಇದರಿಂದ ಆಕ್ರೋಶಗೊಂಡ ಕಾವ್ಯಾಳ ಸಂಬಂಧಿಕರು ಇಲ್ಲಿನ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ. ಸಿಬ್ಬಂದಿಯ ಬೇಜವಾಬ್ದಾರಿಯಿಂದ ಅಮಾಯಕ ತಾಯಿ ಮತ್ತು ಮಗು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಸೂಕ್ತ ಸಮಯಕ್ಕೆ ಬಾರದ ಆಸ್ಪತ್ರೆ ಸಿಬ್ಬಂದಿ, ಮಗುವಿಗೆ ಜನ್ಮ ನೀಡಿ.. ಗರ್ಭಿಣಿ ಸಾವು

Published On - 3:08 pm, Mon, 15 March 21

ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!