ಮೈಸೂರು: ಅಪ್ಪ-ಅಮ್ಮ ಸತ್ತರು ಅಂತಾ… ತನ್ನ ಜನ್ಮ ದಿನವೇ ವಿಷ ಸೇವಿಸಿ ಪುತ್ರ ಸಹ ಸೂಸೈಡ್

| Updated By: Digi Tech Desk

Updated on: Jun 25, 2021 | 12:09 PM

Mysore News: 3ನೇ ಯತ್ನದಲ್ಲಿ ಆತ್ಮಹತ್ಯೆ  ಮಾಡಿಕೊಂಡಿರುವ ಕಾರ್ತಿಕ್,  ತಂದೆ-ತಾಯಿ ಕಳೆದುಕೊಂಡು ಆಘಾತಕ್ಕೆ ಒಳಗಾಗಿದ್ದ.  ತನ್ನ ತಾಯಿ ಸಾವನ್ನಪ್ಪಿದ ದಿನವೇ ವಿಷ ಸೇವಿಸಿದ್ದ. ತಂದೆ ಸಾವನ್ನಪ್ಪಿದ ದಿನ ರೈಲಿನಿಂದ ಕೆಳಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ನತದೃಷ್ಟ ಕಾರ್ತಿಕ್ . 

ಮೈಸೂರು: ಅಪ್ಪ-ಅಮ್ಮ ಸತ್ತರು ಅಂತಾ... ತನ್ನ ಜನ್ಮ ದಿನವೇ ವಿಷ ಸೇವಿಸಿ ಪುತ್ರ ಸಹ ಸೂಸೈಡ್
ಮೈಸೂರು/ಮಂಡ್ಯ: ಅಪ್ಪ-ಅಮ್ಮ ಸತ್ತರು ಅಂತಾ... ಜನ್ಮ ದಿನವೇ ವಿಷ ಸೇವಿಸಿ ಪುತ್ರ ಸಹ ಸೂಸೈಡ್ ​
Follow us on

 ಮೈಸೂರು/ಮಂಡ್ಯ: ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಮೈಸೂರಿನ ಎನ್.ಆರ್. ಮೊಹಲ್ಲಾ ನಿವಾಸಿ ಎಸ್​. ಕಾರ್ತಿಕ್ (30)  ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಬಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ.  ತಂದೆ, ತಾಯಿ ಕಳೆದುಕೊಂಡು ಮನನೊಂದಿದ್ದ ಕಾರ್ತಿಕ್, ಈ ಹಿಂದೆಯೂ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಈಗ ಡೆತ್‌ನೋಟ್ ಬರೆದಿಟ್ಟು ವಿಷ ಸೇವಿಸಿ ಮೃತಪಟ್ಟಿದ್ದಾನೆ.  ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಾರ್ತಿಕ್, ಮೆಡಿಕಲ್ ರೆಪ್ರೆಂಸೆಂಟೇಟಿವ್ ಆಗಿ ಉದ್ಯೋಗ ಮಾಡಿಕೊಂಡಿದ್ದ. ಕಾರ್ತಿಕ್ ಅವರ ತಾಯಿ ಡಾ. ಪಾರ್ವತಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ನಂತರ ತಂದೆ ಶಿವಲಿಂಗಯ್ಯ ಮೃತಪಟ್ಟಿದ್ದರು. ಚಿಕ್ಕಮ್ಮನ ಆಸರೆಯಲ್ಲಿ ಎನ್.ಆರ್. ಮೊಹಲ್ಲಾದಲ್ಲಿ ಬಾಡಿಗೆ ರೂಂನಲ್ಲಿ ಕಾರ್ತಿಕ್ ವಾಸವಿದ್ದ.

ಕೊಠಡಿಯಲ್ಲಿ ನತದೃಷ್ಟ ಕಾರ್ತಿಕ್ ಡೆತ್ ನೋಟ್ ಪತ್ತೆ: 
ಸ್ನೇಹಿತರೆ ನನ್ನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ. ಇನ್ನು ಮುಂದೆ ನಾನು ನಿಮ್ಮೊಂದಿಗೆ ಇರುವುದಿಲ್ಲ ಎಂದು ಕಾರ್ತಿಕ್   ಇಂಗ್ಲಿಷ್‌ನಲ್ಲಿ ಡೆತ್ ನೋಟ್ ಬರೆದಿಟ್ಟಿದ್ದಾನೆ.

3ನೇ ಯತ್ನದಲ್ಲಿ ಆತ್ಮಹತ್ಯೆ  ಮಾಡಿಕೊಂಡಿರುವ ಕಾರ್ತಿಕ್,  ತಂದೆ-ತಾಯಿ ಕಳೆದುಕೊಂಡು ಆಘಾತಕ್ಕೆ ಒಳಗಾಗಿದ್ದ.  ತನ್ನ ತಾಯಿ ಸಾವನ್ನಪ್ಪಿದ ದಿನವೇ ವಿಷ ಸೇವಿಸಿದ್ದ. ತಂದೆ ಸಾವನ್ನಪ್ಪಿದ ದಿನ ರೈಲಿನಿಂದ ಕೆಳಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ನತದೃಷ್ಟ ಕಾರ್ತಿಕ್ .

Suicide ರಾಯಲ್‌ ಎನ್‌ಫೀಲ್ಡ್‌ ಖರೀದಿಸುವುದು ಬೇಡ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಸಾಫ್ಟ್‌ವೇರ್ ಇಂಜಿನಿಯರ್

(son karthik commits suicide as he lost his parents recently in mysore)

Published On - 11:03 am, Fri, 25 June 21